ರನ್ ಗಳಿಸಲು ಪರದಾಡುತ್ತಿರುವ ಕೊಹ್ಲಿ ರವರಿಗೆ ಎಬಿಡಿ ರವರು ನೀಡಿದ ಟಿಪ್ಸ್ ಏನು ಗೊತ್ತೇ?? ಇನ್ನಾದರೂ ಮಿಂಚುತ್ತಾರಾ ಕಿಂಗ್ ಕೊಹ್ಲಿ??

37

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈಗಾಗಲೇ ಈ ಬಾರಿಯ ಐಪಿಎಲ್ ಎನ್ನುವುದು ಕೊನೆಯ ಹಂತಕ್ಕೆ ಬರುವುದಕ್ಕೆ ಸಿದ್ಧವಾಗಿ ನಿಂತಿದೆ. ಬಹುತೇಕ 65% ದಷ್ಟು ಲೀಗ್ ಪಂದ್ಯಾಟಗಳು ಪೂರ್ಣಗೊಂಡಿದೆ. ಇನ್ನು ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಮ್ಮೆಲ್ಲರ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲಿಸಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿರುವ 11 ಪಂದ್ಯಗಳಲ್ಲಿ 6ರಲ್ಲಿ ಗೆದ್ದು ಐದರಲ್ಲಿ ಸೋತು ಪಾಯಿಂಟ್ಸ್ ಟೇಬಲ್ ನಲ್ಲಿ ನಾಲ್ಕನೇ ಸ್ಥಾನದಲ್ಲಿ ಮಿಂಚುತ್ತಿದೆ. ತಂಡ ಸತತ ನಾಲ್ಕು ಸೋಲಿನ ನಂತರ ಕೊನೆಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎದುರು ಗೆಲ್ಲುವ ಮೂಲಕ ಗೆಲುವಿನ ಲಯಕ್ಕೆ ಮರಳಿ ಬಂದಿದೆ ಎಂಬುದಾಗಿ ಎಂದು ಕೊಳ್ಳಬಹುದಾಗಿದೆ.

ಆದರೂ ಕೂಡ ಇನ್ನುಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲುವ ಒತ್ತಡದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಿದೆ. ಆದರೆ ರೋಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿರುವ ಕಿಂಗ್ ವಿರಾಟ್ ಕೊಹ್ಲಿ ಅವರು ಇನ್ನೂ ಕೂಡ ತಮ್ಮ ಉತ್ತಮ ಬ್ಯಾಟಿಂಗ್ ಫಾರ್ಮ್ ಗೆ ಮರಳಿ ಬರದೇ ಇರುವುದು ತಂಡದ ತಲೆನೋ’ವಿಗೆ ಕಾರಣವಾಗಿದೆ ಎಂದು ಹೇಳಬಹುದಾಗಿದೆ. ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ 30 ರನ್ನುಗಳನ್ನು ಬಾರಿಸಿದ್ದರು ನಿಜ ಆದರೆ ಅದಕ್ಕಾಗಿ ಅವರು 33 ಎಸೆತಗಳನ್ನು ತೆಗೆದುಕೊಂಡಿದ್ದಾರೆ. ಟಿ20 ಮಾದರಿಯ ಪಂದ್ಯಗಳಲ್ಲಿ ರನ್ ಗಳಿಗಿಂತ ಹೆಚ್ಚಾಗಿ ಎಸೆತಗಳನ್ನು ತೆಗೆದುಕೊಳ್ಳುವುದು ನಿಜಕ್ಕೂ ಕೂಡ ಆ ಬ್ಯಾಟ್ಸ್ಮನ್ ಔಟ್ ಆಫ್ ಫಾರ್ಮ್ ಇದ್ದಾರೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್ ಗೆ ತೇರ್ಗಡೆಯಾದ ನಂತರ ಆಗುವ ಮೊದಲು ವಿರಾಟ್ ಕೊಹ್ಲಿ ತಂಡದ ಪರವಾಗಿ ಉತ್ತಮ ಆಟವನ್ನು ಆಡುವ ಅವಶ್ಯಕ ತುಂಬಾನೇ ಇದೆ. ಎಬಿ ಡಿವಿಲಿಯರ್ಸ್ ರವರು ತಮ್ಮ ಗೆಳೆಯ ವಿರಾಟ್ ಕೊಹ್ಲಿ ಗೆ ಕೆಲವೊಂದು ಟಿಪ್ಸ್ ಗಳನ್ನು ನೀಡಿದ್ದಾರೆ. ಅವರು ಫಾರ್ಮ್ ನಲ್ಲಿ ಇಲ್ಲ ನಿಜ ಆದರೆ ಅವರು ಮತ್ತೊಮ್ಮೆ ಫಾರ್ಮಿಗೆ ಮರಳಲು ಕೆಲವೊಂದು ಹೊಡೆತಗಳು ಹಾಗೂ ಒಳ್ಳೆಯ ಬ್ಯಾಟಿಂಗ್ ಪ್ರಕಾಶನ ಸಾಕು ಇದು ಅವರ ಮನಸ್ಸಿನಲ್ಲಿರಬೇಕು ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಆಟದ ಕುರಿತಂತೆ ತಮ್ಮ ಗಮನವನ್ನು ಕೇಂದ್ರೀಕೃತ ಗೊಳಿಸಿದರೆ ಅವರ ಸರಿಸಾಟಿ ಯಾರು ಇಲ್ಲ ಎನ್ನುವುದಾಗಿ ಹೇಳಿದ್ದಾರೆ. ಒಮ್ಮೆ ವಿರಾಟ್ ಕೊಹ್ಲಿ ರವರ ಬಳಿ ಫಾರ್ಮ್ ಬಂದರೆ ಮತ್ತೆ ಅವರಿಂದ ಹಿಂದಿರುಗುವ ಚಾನ್ಸೇ ಇಲ್ಲ ಎಂಬುದಾಗಿ ಕೂಡ ಹೇಳಿದ್ದಾರೆ.

Get real time updates directly on you device, subscribe now.