ಗಂಡು ಮಗುವಿಗೆ ಜನ್ಮ ನೀಡಿದ ಕೆಲವೇ ದಿನಗಳ ಬಳಿಕ ಹೆಸರು ಘೋಷಣೆ ಮಾಡಿದ ಕಾಜಲ್ ಅಗರ್ವಾಲ್, ಅಭಿಮಾನಿಗಳಂತೂ ಫುಲ್ ಕುಶ್. ಹೆಸರೇನು ಗೊತ್ತೇ??

18

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ದಕ್ಷಿಣ ಭಾರತ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಬಹುಭಾಷೆ ತಾರೆಯಾಗಿ ಮಿಂಚಿ ಮೆರೆದಿದ್ದ ನಟಿಯೆಂದರೆ ಅದು ಖಂಡಿತವಾಗಿ ಕಾಜಲ್ ಅಗರ್ವಾಲ್ ರವರು ಎಂದು ಹೇಳಬಹುದಾಗಿದೆ. ಕಾಜಲ್ ಅಗರ್ವಾಲ್ ರವರು ಒಂದು ಕಾಲದಲ್ಲಿ ಬಹುತೇಕ ಎಲ್ಲಾ ಪ್ರಮುಖ ಸಿನಿಮಾರಂಗದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡವರು. ಕೇವಲ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ಚಿತ್ರರಂಗದಲ್ಲಿ ಕೂಡ ನಾಯಕ ನಟಿಯಾಗಿ ಹಲವಾರು ಸಿನಿಮಾಗಳಲ್ಲಿ ಕಾಜಲ್ ಅಗರ್ವಾಲ್ ರವರು ಕಾಣಿಸಿಕೊಂಡಿದ್ದಾರೆ.

ಇನ್ನು ಕೆಲವು ವರ್ಷಗಳ ಹಿಂದಷ್ಟೇ ನಟಿ ಕಾಜಲ್ ಅಗರ್ವಾಲ್ ರವರು ಗೌತಮ್ ಕಿಚ್ಲು ರವರನ್ನು ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಲಾಕ್ಡೌನ್ ನಂತರದ ಸಮಯದಲ್ಲಿ ಮದುವೆಯಾದಂತಹ ಸೆಲೆಬ್ರಿಟಿಗಳಲ್ಲಿ ನಟಿ ಕಾಜಲ್ ಅಗರ್ವಾಲ್ ರವರು ಕೂಡ ಒಬ್ಬ ರಾಗಿರುತ್ತಾರೆ. ಇನ್ನು ಕೆಲವು ಸಮಯಗಳ ಹಿಂದಷ್ಟೇ ತಾವು ಗರ್ಭಿಣಿಯಾಗಿರುವ ವಿಚಾರವನ್ನು ಫೋಟೋಶೂಟ್ ಮಾಡಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಜಗತ್ತಿಗೆ ಸಾರಿದ್ದರು. ಇನ್ನು ಈಗ ಕಾಜಲ್ ಅಗರ್ವಾಲ್ ರವರು ಏಪ್ರಿಲ್ 19ರಂದು ಗಂಡು ಮಗುವಿಗೆ ಜನ್ಮವನ್ನು ನೀಡುವ ಮೂಲಕ ತಾಯಿಯಾಗಿದ್ದಾರೆ.

ನಿಜಕ್ಕೂ ಕೂಡ ಇದು ಕಾಜಲ್ ಅಗರ್ವಾಲ್ ರವರ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಸಂತೋಷ ಪಡುವಂತಹ ವಿಚಾರ. ಸಾಮಾನ್ಯವಾಗಿ ನಮ್ಮಲ್ಲಿ ಮಗು ಹುಟ್ಟಿದ ಹಲವಾರು ಸಮಯಗಳ ನಂತರ ಹೆಸರನ್ನು ಇಡಲಾಗುತ್ತದೆ. ಆದರೆ ಈಗ ಕಾಜಲ್ ಅಗರ್ವಲ್ ಹಾಗೂ ಗೌತಮ್ ಕಿಚ್ಲು ದಂಪತಿಗಳು ಮಗು ಹುಟ್ಟಿದ ತಕ್ಷಣವೇ ಮಗುವಿಗೆ ನಾಮಕರಣ ಮಾಡಿದ್ದಾರೆ. ಹೌದು ಕಾಜಲ್ ಅಗರ್ವಾಲ್ ರವರ ಗಂಡು ಮಗುವಿಗೆ ನೀಲ್ ಕಿಚ್ಲು ಎನ್ನುವುದಾಗಿ ನಾಮಕರಣ ಮಾಡಿರುವುದನ್ನು ಅವರ ಪತಿ ಯಾಗಿರುವ ಗೌತಮ್ ಕಿಚ್ಲು ರವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಗರ್ಭಿಣಿ ಆದಾಗಿನಿಂದಲೂ ಕೂಡ ಚಿತ್ರರಂಗದಿಂದ ದೂರವಿರುವ ಕಾಜಲ್ ಅಗರ್ವಾಲ್ ರವರು ಮತ್ತೊಮ್ಮೆ ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳುತ್ತಾರೆ ಎನ್ನುವುದು ಅಭಿಮಾನಿಗಳ ಕಾತರತೆಗೆ ಕಾರಣವಾಗಿದೆ.

Get real time updates directly on you device, subscribe now.