ತಮ್ಮ ಸಿನೆಮಾವನ್ನು ಕನ್ನಡದಲ್ಲಿ ಯಾಕೆ ಬಿಡುಗಡೆ ಮಾಡುವುದಿಲ್ಲ ಎನ್ನುವುದಕ್ಕೆ ಕಾರಣ ನೀಡಿದ ನಾನಿ. ಗರಂ ಆದ ಕನ್ನಡಿಗರು. ಯಾಕೆ ಗೊತ್ತೇ??

18

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಕರ್ನಾಟಕದಲ್ಲಿ ಪರಭಾಷಾ ಸಿನಿಮಾಗಳು ಡಬ್ಬಿಂಗ್ ನಲ್ಲಿ ಬಿಡುಗಡೆಯಾಗುವುದಕ್ಕಿಂತ ಹೆಚ್ಚಾಗಿ ಪರಭಾಷೆಯಲ್ಲಿ ಬಿಡುಗಡೆಯಾಗುವುದು ಹೆಚ್ಚು. ಇದಕ್ಕೆ ಹಲವಾರು ಜನರು ಕನ್ನಡದಲ್ಲಿ ಡಬ್ಬಿಂಗ್ ಮಾಡಿಬಿಡಿ ಎನ್ನುವುದಾಗಿ ಆಗಾಗ ಪ್ರತಿಭಟನೆಗಳನ್ನು ಮಾಡುತ್ತಲೇ ಇರುತ್ತಾರೆ. ಆದರೂ ಕೂಡ ಪರಭಾಷಾ ಚಿತ್ರಗಳ ಹಾವಳಿ ಅನ್ನುವುದು ನಮ್ಮ ಕರ್ನಾಟಕದಲ್ಲಿ ಹೆಚ್ಚಾಗಿದೆ. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ತೆಲುಗು ಚಿತ್ರರಂಗದ ಸ್ಟಾರ್ ನಟರಾಗಿರುವ ನಾನಿ ರವರ ಕುರಿತಂತೆ. ನಾನಿ ರವರು ಮೊದಲಿಗೆ ಜನಪ್ರಿಯತೆಯನ್ನು ಹೊಂದಿದ್ದು ರಾಜಮೌಳಿ ನಿರ್ದೇಶನದ ಈಗ ಚಿತ್ರದ ಮೂಲಕ ಎಂದರೆ ತಪ್ಪಾಗಲಾರದು.

ಒಂದಾದ ಮೇಲೊಂದರಂತೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಾನೀಗ ತೆಲುಗು ಚಿತ್ರರಂಗದ ಮೊದಲ ಗ್ರೇಡಿನ ಸ್ಟಾರ್ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದಾರೆ. ತೆಲುಗು ಚಿತ್ರರಂಗದ ನ್ಯಾಚುರಲ್ ಸ್ಟಾರ್ ಎನ್ನುವುದಾಗಿ ಅವರನ್ನು ಕರೆಯುತ್ತಾರೆ. ಯಾವುದೇ ಪಾತ್ರವಿರಲಿ ಅದನ್ನು ನೀರು ಕುಡಿದಷ್ಟೇ ಸಲೀಸಾಗಿ ನಿರ್ವಹಿಸುವಂತಹ ಚಾಕಚಕ್ಯತೆ ನಾನಿ ರವರಿಗೆ ಇದೆ. ಇದಕ್ಕಾಗಿ ನಾನಿ ರವರನ್ನು ಒಬ್ಬ ನಟನಾಗಿ ಎಲ್ಲರೂ ಇಷ್ಟಪಡುತ್ತಾರೆ. ಆದರೆ ನಟ ನಾನಿ ಇತ್ತೀಚಿಗೆ ನೀಡಿರುವ ಹೇಳಿಕೆ ಈಗಾಗಲೇ ಕನ್ನಡಿಗರಲ್ಲಿ ದೊಡ್ಡಮಟ್ಟದ ಸುದ್ದಿಯಾಗುತ್ತಿದೆ.

ಹೌದು ನಾನಿ ಹಾಗೂ ನಜ್ರಿಯ ನಟನೆಯ ಅಂಟೆ ಸುಂದರಾನಿಕಿ ಸಿನಿಮಾದ ಸಂದರ್ಶನವೊಂದರಲ್ಲಿ ನಾನಿ ರವರು ನೀಡಿರುವ ಹೇಳಿಕೆಗೆ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಹಾಗೂ ಕನ್ನಡಿಗರ ಅಸಮಾಧಾನಕ್ಕೆ ಕೂಡ ಕಾರಣವಾಗಿದೆ. ಹೌದು ಅವರು ತಮ್ಮ ಸಿನಿಮಾಗಳನ್ನು ಕನ್ನಡದಲ್ಲಿ ಡಬ್ ಮಾಡಿ ಬಿಡುಗಡೆ ಯಾಕೆ ಮಾಡುವುದಿಲ್ಲ ಎನ್ನುವುದರ ಕುರಿತಂತೆ ಮಾತನಾಡಿದ್ದಾರೆ. ಕರ್ನಾಟಕದ ಜನರು ತೆಲುಗನ್ನು ಹೆಚ್ಚಾಗಿ ಅರ್ಥಮಾಡಿಕೊಳ್ಳುತ್ತಾರೆ ಹೀಗಾಗಿ ಅವರಿಗೆ ಕನ್ನಡದಲ್ಲಿ ಬಿಡುಗಡೆ ಮಾಡಬೇಕಾಗುವ ಅಗತ್ಯ ಇಲ್ಲ ಇದಕ್ಕಾಗಿ ನಾವು ತೆಲುಗಿನಲ್ಲಿ ಬಿಡುಗಡೆ ಮಾಡುತ್ತಿದ್ದೇವೆ ಎಂಬುದಾಗಿ ಹೇಳಿದ್ದಾರೆ. ಇದು ಕನ್ನಡಿಗರ ಸ್ವಾಭಿಮಾನಕ್ಕೆ ಈಗ ಧಕ್ಕೆ ತಂದಿದ್ದು ಎಲ್ಲರೂ ಕೂಡ ಈ ಹೇಳಿಕೆಯ ವಿರುದ್ಧ ಸಿ’ಡಿದೆದ್ದು ನಿಂತಿದ್ದಾರೆ. ನಾನಿ ರವರ ಹೇಳಿಕೆ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Get real time updates directly on you device, subscribe now.