ಕನ್ನಡತಿಯ ಧಾರಾವಾಹಿಯಲ್ಲಿ ಭುವಿ ಹರ್ಷ ಎಂಗೇಜ್‌ಮೆಂಟ್‌ಗೆ ಸಂಪೂರ್ಣ ಹಳ್ಳಿ ಸೆಟ್, ಟಾಪ್ ಜೋಡಿಯ ಎಂಗೇಜ್‌ಮೆಂಟ್‌ಗೆ ಹೇಗಿರಲಿದೆ ಗೊತ್ತೇ?
ನಮಸ್ಕಾರ ಸ್ನೇಹಿತರೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡತಿ ಧಾರವಾಹಿ ಬಹುತೇಕ ಎಲ್ಲರಿಗೂ ಕೂಡ ಎರಡು ಕಾರಣಗಳಿಗಾಗಿ ಇಷ್ಟವಾಗುತ್ತದೆ. ಒಂದು ಧಾರಾವಾಹಿಯ ನಾಯಕಿ ಆಗಿರುವ ಭುವಿ ಯ ಕನ್ನಡದ ಸ್ಪಷ್ಟ ಉಚ್ಚಾರಣೆ ಹಾಗೂ ಇನ್ನೊಂದು ಪ್ರತಿಯೊಂದು ಹಂತದಲ್ಲಿ ಕೂಡ ಧಾರವಾಹಿಯಲ್ಲಿ ಕಂಡುಬರುವಂತಹ ಟ್ವಿಸ್ಟ್ ಹಾಗೂ ರೋಚಕತೆಗಳು. ಇನ್ನು ಹರ್ಷ ಹಾಗೂ ಭುವಿ ರವರು ನಡುವಿನ ಪ್ರೀತಿ ಸ್ನೇಹದ ಕಣ್ಣಾಮುಚ್ಚಾಲೆ ಆಟಗಳು ಹಲವಾರು ಸಮಯಗಳಿಂದ ನಡೆದುಕೊಂಡು ಬರುತ್ತಿದ್ದವು. ಆದರೆ ಕೊನೆಗೂ ಕೂಡ ಇವರಿಬ್ಬರ ಪ್ರೀತಿಯ ಕಣ್ಣಾಮುಚ್ಚಾಲೆ ಆಟ ಎಂಗೇಜ್ಮೆಂಟ್ ತನಕ ಬಂದು ನಿಂತಿದೆ. ಹರ್ಷನ ಇಡೀ ಕುಟುಂಬ ಭುವಿಯ ದೂರಾಗಿರುವ ಹಸಿರು ಪೇಟೆಯಲ್ಲಿ ಎಂಗೇಜ್ಮೆಂಟ್ ಗಾಗಿ ಬಂದುನಿಂತಿದೆ.
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಹರ್ಷ ಮಾಲಾ ಕೆಫೆಯ ಓನರ್ ಹಾಗೂ ಕೋಟ್ಯಾಧೀಶ. ಸಾನಿಯಾ ಕೂಡ ಅದ್ದೂರಿಯಾಗಿ ಎಂಗೇಜ್ಮೆಂಟ್ ಕಾಲೇಜ್ ಗ್ರೌಂಡ್ ನಲ್ಲಿ ನಡೆಯಬೇಕಾಗಿತ್ತು ಎನ್ನುವುದಾಗಿ ತಗಾದೆ ತೆಗೆದಿದ್ದಾಳೆ. ಆದರೆ ಹಸಿರಿನ ಮಡಿಲಿನಲ್ಲಿ ಎಂಗೇಜ್ಮೆಂಟ್ ನಡೆಯುತ್ತಿರುವುದು ಎಲ್ಲರಿಗೂ ಸೇರಿದಂತೆ ಹರ್ಷ ನಿಗೂ ಕೂಡ ಸಂತೋಷವಿದೆ.
ಇನ್ನು ಈಗಾಗಲೇ ಎಂಗೇಜ್ಮೆಂಟ್ ಚಿತ್ರೀಕರಣವನ್ನು ತಿಂಗಳ ಹಿಂದೆಯೇ ಮುಗಿಸಲಾಗಿದೆ ಎನ್ನುವ ಸುದ್ದಿ ಕೇಳಿ ಬಂದಿದೆ. ಶಿವಮೊಗ್ಗ ಜಿಲ್ಲೆಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಉದರಿ ಎನ್ನುವ ಹಳ್ಳಿಯನ್ನೇ ಕನ್ನಡತಿ ಧಾರವಾಹಿಯಲ್ಲಿ ಹಸಿರುಪೇಟೆ ಎನ್ನುವ ಹೆಸರಿನಿಂದ ರಚಿಸಲಾಗಿದೆ. ತೆಂಗಿನ ಮರದ ಗಡಿಗಳನ್ನು ಕೇರಳ ಶೈಲಿಯಂತೆ ನೈದು ಚಪ್ಪರ ವನ್ನಾಗಿ ಮಾಡಿದ್ದಾರೆ. ಗೊನೆ ಬಿಟ್ಟಿರುವ ಬಾಳೆಗಿಡಗಳನ್ನು ಕೂಡ ಕಟ್ಟಿದ್ದಾರೆ. ಹಳೆಯ ಶೈಲಿಯ ಹಳ್ಳಿಯ ಮನೆಯನ್ನು ಎಂಗೇಜ್ಮೆಂಟ್ ಗಾಗಿ ಉಪಯೋಗಿಸಿಕೊಂಡಿದ್ದಾರೆ. ತಳಿರು ತೋರಣಗಳನ್ನು ಕೂಡ ಕಟ್ಟಲಾಗಿದ್ದು ಹೂಗಳನ್ನು ಕೂಡ ಅಲ್ಲಲ್ಲಿ ಪೋಣಿಸಲಾಗಿದೆ. ಗಣೇಶ ದೇವನ ಹಿನ್ನೆಲೆಯಲ್ಲಿರುವ ಮಂಟಪದಲ್ಲಿ ಗಂಡು-ಹೆಣ್ಣು ಇಬ್ಬರಿಗಾಗಿ ಕೂಡ ಕುರ್ಚಿಯನ್ನು ಇಡಲಾಗಿದೆ.
ಹೀಗಾಗಿ ಸಾನಿಯಾ ಅದ್ದೂರಿಯಾಗಿ ಈ ಕಾರ್ಯಕ್ರಮ ಅರಮನೆ ಮೈದಾನದಲ್ಲಿ ನಡೆಯಬೇಕು ಎನ್ನುವ ಮಾತಿಗೆ ಹರ್ಷ ನಾವಿಬ್ಬರೂ ಇಷ್ಟಪಟ್ಟು ಜೊತೆಯಾಗುತ್ತಿದ್ದಾರೆ ಹೀಗಾಗಿ ಇಲ್ಲಿ ಅಲಂಕಾರ ಹಾಗೂ ಅದ್ದೂರಿತನ ಅಷ್ಟೊಂದು ವಿಚಾರಕ್ಕೆ ಬರುವುದಿಲ್ಲ ಎಂಬುದಾಗಿ ಸಾನಿಯಾ ಳಿಗೆ ಪರೋಕ್ಷವಾಗಿ ಮಾತಿನಲ್ಲಿಯೇ ಬಿಸಿ ಮುಟ್ಟಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಪ್ರಕೃತಿಯ ಮಡಿಲಿನಲ್ಲಿ ಸಾಂಪ್ರದಾಯಕವಾಗಿ ಎಂಗೇಜ್ಮೆಂಟ್ ಮೂಡಿಬರಲಿದೆ ಎನ್ನುವ ವಿಚಾರ ಕೂಡ ಈ ಮೂಲಕ ತಿಳಿದು ಬಂದಿದೆ.
ಸಾಮಾನ್ಯವಾಗಿ ನಿಮಗೆಲ್ಲ ಗೊತ್ತಿರುವಂತೆ ಇತ್ತೀಚಿನ ದಿನಗಳಲ್ಲಿ ಕಿರುತೆರೆಯ ಧಾರವಾಹಿಗಳಲ್ಲಿ ಕೂಡ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಮತ್ತು ರೆಸಾರ್ಟ್ಗಳಲ್ಲಿ ಅದ್ದೂರಿಯಾಗಿ ಮದುವೆ ಅಥವಾ ನಿಶ್ಚಿತಾರ್ಥ ಕಾರ್ಯಕ್ರಮಗಳನ್ನು ಚಿತ್ರೀಕರಿಸಲು ಪ್ರಯತ್ನಿಸುತ್ತಾರೆ. ಈ ಮೂಲಕ ಪ್ರೇಕ್ಷಕರಿಗೂ ಕೂಡ ಈ ಚಿತ್ರೀಕರಣಕ್ಕೆ ನಾವು ಅದ್ದೂರಿಯಾಗಿ ಖರ್ಚು ಮಾಡಿದ್ದೇವೆ ಎಂದು ತಿಳಿಸುವ ಮೂಲಕ ಟಿಆರ್ ಪಿ ಪಡೆದುಕೊಳ್ಳಲು ವಾಹಿನಿಯವರು ಇನ್ನಿಲ್ಲದ ಸಾಹಸ ಮಾಡುತ್ತಾರೆ. ಆದರೆ ಕನ್ನಡತಿ ದಾರವಾಹಿಯಲ್ಲಿ ಮಾತ್ರ ಹಳ್ಳಿಯಲ್ಲಿಯೇ ತಮ್ಮ ಕನ್ನಡ ಸಂಸ್ಕೃತಿಗೆ ಹತ್ತಿರವಾಗುವಂತಹ ವಿಧಾನದಲ್ಲಿ ಎಂಗೇಜ್ಮೆಂಟ್ ಚಿತ್ರೀಕರಣವನ್ನು ಮಾಡುವ ಯೋಚನೆಗೆ ಬಂದಿದ್ದು ಖಂಡಿತವಾಗಿ ಕನ್ನಡಿಗರಿಗೆ ಇಷ್ಟವಾಗಲಿದೆ. ಈ ಸಂಚಿಕೆಗಳು ಕೂಡ ಉತ್ತಮ ರೇಟಿಂಗ್ ಪಡೆಯಲಿವೆ ಎನ್ನುವುದಾಗಿ ಎಲ್ಲರೂ ಕಾತರರಾಗಿದ್ದಾರೆ. ಈ ಮೂಲಕ ಕಿರುತೆರೆ ಇತಿಹಾಸದಲ್ಲೇ ವಿಭಿನ್ನ ಪ್ರಯತ್ನವನ್ನು ಕನ್ನಡತಿ ಧಾರಾವಾಹಿ ತಂಡ ಮಾಡಲು ಹೊರಟಿದೆ ಎಂದು ಹೇಳಬಹುದಾಗಿದೆ.
ಈಗಾಗಲೇ ಕೇವಲ ಇವರ ಎಂಗೇಜ್ಮೆಂಟ್ ಗಾಗಿ ಕಾಯುತ್ತಿರುವವರು ಮಾತ್ರವಲ್ಲದೆ ಅದನ್ನು ಮುಗಿಸಲು ಕೂಡ ಹಲವಾರು ಜನರು ಕಾಯುತ್ತಿದ್ದಾರೆ. ಭುವಿಯ ಅಜ್ಜಿ ಹಾಗೂ ಸಾನಿಯಾ ಸೇರಿದಂತೆ ಇತರರು ಹೇಗಾದರೂ ಮಾಡಿ ಈ ಎಂಗೇಜ್ಮೆಂಟ್ ನಿಲ್ಲಿಸಬೇಕೆಂದು ಶತ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ ಪ್ರಣಯ ಪಕ್ಷಿಗಳಾಗಿರುವ ಹರ್ಷ ಹಾಗೂ ಭುವಿ ಇಬ್ಬರೂ ಕೂಡ ಖಂಡಿತವಾಗಿ ಈ ಬಾರಿ ಎಂಗೇಜ್ಮೆಂಟ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವುದಾಗಿ ಕೇಳಿಬಂದಿದೆ. ಈ ಎಂಗೇಜ್ಮೆಂಟ್ ಹಾಗೂ ಕನ್ನಡತಿ ಧಾರಾವಾಹಿ ಮುಂದಿನ ಸಂಚಿಕೆಗಳ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮತ್ತು ನಿಮ್ಮ ನಿರೀಕ್ಷೆಗಳನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.