ಕೊನೆಗೂ ಬಯಲಾಯ್ತು ಅಸಲಿ ಸಂಭಾವನೆ, ರಚಿತಾ ರಾಮ್ ಡ್ರಾಮ್ ಜೂನಿಯರ್ಸ್ ಗೆ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತೇ? ದೊಡ್ಡ ನಟಿಯಾಗಿದ್ದರೂ ಇಷ್ಟು ಕಡಿಮೇನಾ??

16

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಡ್ರಾಮಾ ಜೂನಿಯರ್ ಕಾರ್ಯಕ್ರಮ ಹಲವಾರು ವರ್ಷಗಳ ಹಿಂದೆ ಪ್ರಾರಂಭವಾಗಿತ್ತು. ಚಿಕ್ಕ ಚಿಕ್ಕ ಮಕ್ಕಳ ಪ್ರತಿಭೆಯನ್ನು ಇಡೀ ಕರ್ನಾಟಕಕ್ಕೆ ತೋರಿಸುವಂತಹ ಕಾರ್ಯಕ್ರಮ ಇದಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾಸ್ಟರ್ ಆನಂದ್ ರವರು ನಿರೂಪಕರಾಗಿ ಕಾಣಿಸಿಕೊಳ್ಳುತ್ತಿದ್ದರು. ತೀರ್ಪುಗಾರರಾಗಿ ವಿಜಯ್ ರಾಘವೇಂದ್ರ ಹಾಗೂ ಟಿಎನ್ ಸೀತಾರಾಮ್ ಮತ್ತು ಲಕ್ಷ್ಮಿ ಅಮ್ಮನವರು ಕಾಣಿಸಿಕೊಳ್ಳುತ್ತಿದ್ದರು. ಈ ಕಾರ್ಯಕ್ರಮ ಪ್ರಾರಂಭದಲ್ಲಿ ಅತ್ಯಂತ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಕ್ಕಳು ಈಗಲೂ ಕೂಡ ಹಲವಾರು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ನಂತರ ಪ್ರಾರಂಭವಾದ ಅಂತಹ ಡ್ರಾಮಾ ಜೂನಿಯರ್ಸ್ ನ ಮತ್ತೊಂದು ಸೀಸನ್ ಅಷ್ಟೊಂದು ದೊಡ್ಡ ಮಟ್ಟಿಗೆ ಯಶಸ್ಸನ್ನು ಪಡೆದುಕೊಳ್ಳದಿದ್ದರೆ ಕೂಡ ಮಕ್ಕಳ ಪ್ರತಿಭೆಗೆ ವೇದಿಕೆಯಾಗಿ ಮಾರ್ಪಟ್ಟಿತು. ಈಗ ಮೂರನೇ ಸೀಸನ್ ನ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮ ಆರಂಭವಾಗಿದೆ. ಇದಕ್ಕೆ ಪ್ರಮುಖ ಕಾರಣವಾಗಿರುವುದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮ ದೊಡ್ಡದಾಗಿ ಯಶಸ್ಸನ್ನು ಕಂಡಿದೆ. ಅತಿಶೀಘ್ರದಲ್ಲೇ ಆ ಕಾರ್ಯಕ್ರಮ ಮುಗಿಯಲಿದ್ದು ಮಕ್ಕಳ ಕಾರ್ಯಕ್ರಮವನ್ನು ವೀಕ್ಷಿಸುವ ಪ್ರೇಕ್ಷಕರನ್ನು ಸೆಳೆಯುವ ವಿಚಾರಕ್ಕೆ ಜೀ ಕನ್ನಡ ವಾಹಿನಿ ಈಗ ಡ್ರಾಮಾ ಜೂನಿಯರ್ ಸೀಸನ್ 3 ಪ್ರಾರಂಭಿಸಿದೆ.

ನಿಮಗೆಲ್ಲ ತಿಳಿದಿರುವಂತೆ ಹಲವಾರು ಸಮಯಗಳಿಂದಲೂ ಕೂಡ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದ ಮೂರನೇ ಸೀಸನ್ ಮಾಡಲು ತೆರೆಮರೆಯಲ್ಲಿ ತಯಾರಿಗಳು ನಡೆಯುತ್ತಿದ್ದವು. ಆದರೆ ಟಿಎನ್ ಸೀತಾರಾಮ್ ರವರನ್ನು ತೀರ್ಪುಗಾರರಾಗಿ ಕರೆತರಲು ಅವರು ಧಾರವಾಹಿಗಳಲ್ಲಿ ಮಗ್ನರಾಗಿದ್ದರು. ಈ ಕಡೆ ವಿಜಯರಾಘವೇಂದ್ರ ರವರು ಜೀ ಕನ್ನಡ ವಾಹಿನಿಯನ್ನು ತೊರೆದು ಕಲರ್ಸ್ ಕನ್ನಡ ವಾಹಿನಿಯ ಡ್ಯಾನ್ಸಿಂಗ್ ಚಾಂಪಿಯನ್ಸ್ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಹೋಗಿದ್ದಾರೆ. ಹಾಗಿದ್ದರೆ ಯಾರನ್ನು ತೀರ್ಪುಗಾರರನ್ನಾಗಿ ತರುವುದು ಎನ್ನುವ ಕುರಿತಂತೆ ಸಾಕಷ್ಟು ವಿಚಾರಗಳು ನಡೆಯಲು ಆರಂಭವಾಗಿದ್ದವು.

ಇನ್ನು ಈ ಕಾರ್ಯಕ್ರಮದ ಜಡ್ಜ್ ಆಗಿ ಉಳಿದುಕೊಂಡಿದ್ದರು ಲಕ್ಷ್ಮಿ ಅಮ್ಮನವರು ಮಾತ್ರ. ಹೀಗಾಗಿ ಹೇಗಾದರೂ ಮಾಡಿ ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ದೊಡ್ಡಮಟ್ಟದ ರೇಟಿಂಗ್ ಪಡೆಯಬೇಕು ಎನ್ನುವುದಾಗಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಆರಂಭಿಸುತ್ತಾರೆ. ಆದರೆ ಈ ಕಾರ್ಯಕ್ರಮ ಕಳಪೆ ರೇಟಿಂಗ್ ಅನ್ನು ಪಡೆಯುತ್ತದೆ. ನಂತರ ವಿಧಿಯಿಲ್ಲದೆ ಜೀ ಕನ್ನಡ ಕಾರ್ಯಕ್ರಮ ಮತ್ತೊಮ್ಮೆ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮವನ್ನು ಪ್ರಾರಂಭಿಸಿ ಕಲರ್ಸ್ ಕನ್ನಡ ವಾಹಿನಿಯ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ತೀರ್ಪುಗಾರರನ್ನಾಗಿ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮಕ್ಕೆ ಕರೆತರುತ್ತಾರೆ.

ಹೌದು ಗೆಳೆಯರೇ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಲಕ್ಷ್ಮಿ ಅಮ್ಮನವರ ಜೊತೆಯಲ್ಲಿ ತೀರ್ಪುಗಾರರಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಗುಳಿಕೆನ್ನೆಯ ಚೆಲುವೆ ರಚಿತಾರಾಮ್ ರವರು ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಆಡಿಶನ್ ಸಂಚಿಕೆಗಳ ಪ್ರಸಾರ ಮುಗಿದಿದ್ದು ಪ್ರೇಕ್ಷಕರಿಂದ ಅದ್ಭುತವಾಗಿ ರೆಸ್ಪಾನ್ಸ್ ಸಿಕ್ಕಿದೆ. ಅದರಲ್ಲೂ ವಿಶೇಷವಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಮಕ್ಕಳ ಜೊತೆಗೆ ಲವಲವಿಕೆಯಿಂದ ಕಾಣಿಸಿಕೊಳ್ಳುವ ರೀತಿ ಪ್ರೇಕ್ಷಕರಲ್ಲಿ ಮೋಡಿ ಮಾಡಿದೆ ಎಂದು ಹೇಳಬಹುದಾಗಿದೆ.

ಈಗಾಗಲೇ ಚಿತ್ರರಂಗದಲ್ಲಿ ಕೂಡ ಬೇಡಿಕೆಯನ್ನು ಹೊಂದಿರುವಂತಹ ಇವರಿಬ್ಬರಿಗೆ ದೊಡ್ಡ ಮೊತ್ತದ ಸಂಭಾವನೆಯನ್ನು ನೀಡಿ ಜೀ ಕನ್ನಡ ವಾಹಿನಿ ತನ್ನ ಕಾರ್ಯಕ್ರಮಕ್ಕೆ ತೀರ್ಪುಗಾರರನ್ನಾಗಿ ಕರೆಸಿಕೊಂಡಿದೆ, ಆದರೆ ಅದು ಕೂಡ ರಚಿತಾ ರಾಮ್ ರವರಿಗೆ ಕಡಿಮೆ ಎಂದು ಹೇಳಲಾಗುತ್ತಿದೆ. ಹೌದು ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮ ಏನಿಲ್ಲವೆಂದರೂ ಇನ್ನೂ ಮೂರರಿಂದ ನಾಲ್ಕು ತಿಂಗಳು ನಡೆಯಲಿದೆ. ಹೀಗಾಗಿ ಹಿಂದಿನ ಕಾರ್ಯಕ್ರಮಗಳಂತೆ ಸಾಮಾನ್ಯ ಸಂಭಾವನೆಯನ್ನೇ ರಚಿತರಾಮ್ ರವರು ಪಡೆಯಲಿದ್ದಾರೆ. ಹೌದು ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮಕ್ಕಾಗಿ ರಚಿತರಾಮ್ ರವರು ಬರೋಬ್ಬರಿ 60 ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ. ಜೀ ಕನ್ನಡ ವಾಹಿನಿಯ ಮುಂದಿನ ಕಾರ್ಯಕ್ರಮಗಳಿಗೆ ಕೂಡ ರಚಿತಾರಾಮ್ ಅವರನ್ನೇ ಆಯ್ಕೆ ಮಾಡಬಹುದು ಎನ್ನುವ ಗಾಳಿಸುದ್ದಿಗಳು ಕೂಡ ವಾಹಿನಿಯ ಮೂಲಗಳಿಂದ ಹರಿದಾಡುತ್ತಿವೆ.

Get real time updates directly on you device, subscribe now.