ಇತ್ತೀಚೆಗಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡು ಖುಷಿಯಲ್ಲಿರುವ ಸೋನು ಗೌಡ ರವರಿಂದಲೇ ಜೊತೆ ಜೊತೆಯಲಿ ಯಲ್ಲಿ ಅಸಲಿ ಟ್ವಿಸ್ಟ್. ಸೋನು ಗೌಡ ಬಂದಮೇಲೆ ಕಥೆಯೇ ಬದಲು.
ನಮಸ್ಕಾರ ಸ್ನೇಹಿತರೇ, ನಟಿ ಸೋನು ಗೌಡ ರವರು ಇತ್ತೀಚೆಗಷ್ಟೇ ಹುಟ್ಟುಹಬ್ಬದ ಸಂಭ್ರಮ ದಲ್ಲಿ ಇದ್ದಾರೆ. ಹಾಗಾಗಿ ಅವರಿಗೆ ಮೊದಲು ಒಂದು ವಿಶ್ ಮಾಡೋಣ. ಅಂದಹಾಗೆ ಒಮ್ಮೆ ಸಿನಿಮಾಗೆ ಎಂಟ್ರಿ ಕೊಟ್ರೆ ಮತ್ತೆ ಕಿರುತೆರೆಗೆ ವಾಪಸ್ ಆಗೋಲ್ಲ ಅನ್ನೋ ಮಾತಿದೆ. ಅಥವಾ ಬೆಳ್ಳಿತೆರೆಮೇಲೆ ಬಣ್ಣ ಹಚ್ಚಿರೋರು ಕಿರುತೆರೆಗೆ ಬರೋದೇ ಇಲ್ಲ ಎಂದು ಹೇಳುತ್ತಾರೆ. ಜೊತೆಗೆ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾದಾಗ ಮಾತ್ರ ಕಿರುತೆರೆಗೆ ಬರ್ತಾರೆ ಅಂತ ಕೂಡ ಹೇಳ್ತಾರೆ.
ಆದರೆ ಈ ಅಂತೆಕಂತೆಗಳಲ್ಲವೂ ಇತ್ತೀಚಿಗೆ ಸುಳ್ಳಾಗಿವೆ. ಯಾಕಂದ್ರೆ ಸಿನಿಮಾಗಳಲ್ಲಿ ಉತ್ತಮ ಹೆಸರು ಗಳಿಸಿರೋರು ಕೂಡ ಕಿರುತೆರೆಗೆ ಬಂದು ಅಭಿನಯಿಸೋದು ಕಾಮನ್ ಆಗಿದೆ. ಇತ್ತೀಚಿಗೆ ನಟಿ ಉಮಾಶ್ರೀ ಇರಬಹುದು ಅಥವಾ ಸೋನುಗೌಡ ಇರಬಹುದು ಸಿನಿಮಾಗಳಲ್ಲಿ ನಟಿಸುತ್ತಿದ್ದರೂ ಕೂಡ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದಕ್ಕೆ ಉದಾಹರಣೆ.
ಸೋನು ಗೌಡ, ಬೆಂಗಳೂರಿನಲ್ಲಿ 1990, ಮಾರ್ಚ್ 23ರಂದು ಜನಿಸಿದರು. ಇವರು ವಿಧ್ಯಾಭ್ಯಾಸ ಮಾಡಿದ್ದು ಮೌಂಟ್ ಕಾರ್ಮೆಲ್ ಶಾಲೆಯಲ್ಲಿ. ಇವರ ತಂದೆ ರಾಮಕೃಷ್ಣ ಸಿನಿಮಾದಲ್ಲಿ ಕೇಶ ವಿನ್ಯಾಸಕರಾಗಿದ್ದರು. ಹಾಗಾಗಿ ತಂದೆಯ ಮೂಲಕ ಸಿನಿಮಾ ಘೀಳು ಬೆಳೆಸಿಕೊಂಡ ಸೋನು ಗೌಡ, ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಇಂತಿ ನಿನ್ನ ಪ್ರೀತಿಯ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಸೋನು ಗೌಡ ಅವರು ‘ಯುವರತ್ನ’, ‘ಪರಮೇಶಿ ಪಾನ್‌ವಾಲಾ’, ‘ಗುಲಾಮ’, ‘ಹ್ಯಾಪಿ ನ್ಯೂ ಇಯರ್’, ‘ಗುಲ್ಟು’, ‘ಐ ಲವ್ ಯು’, ‘ಕಿರಿಯೂರಿನ ಗಯ್ಯಾಳಿಗಳು’ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಸೋನು ಗೌಡ ರಾಜನಂದಿನಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಹೌದು, ಕನ್ನಡ ಕಿರತೆರೆಯಲ್ಲಿ ಇತಿಹಾಸ ಸೃಷ್ಟಿಸಿದ ಧಾರಾವಾಹಿ ಜೊತೆಜೊತೆಯಲಿ. ನಟ ಅನಿರುದ್ಧ ಹಾಗೂ ನಟಿ ಮೇಘ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿಇರುವ ಈ ಧಾರಾವಾಹಿ ಬಿಗ್ ಬಜೆಟ್ ಧಾರಾವಾಹಿ ಕೂಡ ಹೌದು. ಈ ಧಾರಾವಾಹಿಯಲ್ಲಿ ವೀಕ್ಷಕರನ್ನು ಹಿಡಿದಿಟ್ಟುಕೊಂಡಿದ್ದೇ, ನಂದಿನಿ ಪಾತ್ರ. ಇಷ್ಟು ದಿನ ರಾಜನಂದಿನಿ ಯಾರು ಎಂಬುದನ್ನು ರೀವಿಲ್ ಮಾಡಿ ಅಂತ ಪ್ರೇಕ್ಷಕರು ನಿರ್ದೇಶಕರಿಗೆ ದಂಬಾಲು ಬಿದ್ದಿದ್ದರು. ಇದೀಗ ಪ್ರೇಕ್ಷಕರ ಕುತೂಹಲವನ್ನು ನಿರ್ದೇಶಕರು ತಣಿಸಿದ್ದಾರೆ. ಹೌದು ರಾಜನಂದಿನಿ ಪಾತ್ರ ರೀವಿಲ್ ಆಗಿದೆ. ಈ ಪತ್ರವನ್ನ ಸೋನು ಗೌಡ ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. ಅನು ಸಿರಿಮನೆಗೆ ಉತ್ತರವಾಗಿ, ಅರ್ಯವರ್ಧನ್ ನ ಗುಟ್ಟಿನ ರಟ್ಟಾಗಿ ರಾಜನಂದಿನಿ ಎಂಟ್ರಿಕೊಟ್ಟಿದ್ದಾಳೆ. ಹಾಗಾಗಿ ಮುಂದಿನ ಎಪಿಸೋಡ್ ಗಳಲ್ಲಿ ರಾಜನಂದಿನಿ ಪಾತ್ರದಲ್ಲಿ ಏನೆಲ್ಲಾ ಟ್ವಿಸ್ಟ್ ಗಳಿವೆ. ಅದರಲ್ಲಿ ಸೋನು ಗೌಡ ಏನೆಲ್ಲಾ ಚಾಲೆಂಜ್ ಫೇಸ್ ಮಾಡ್ತಾರೆ ಕಾದು ನೋಡ್ಬೇಕು.