ಹಣದ ವಿಷಯ ಬಂದಾಗ ಈ ಮೂರು ರಾಶಿಯ ಹುಡುಗಿಯರೇ ಅದೃಷ್ಟವಂತಿಯರು. ಆರ್ಥಿಕವಾಗಿ ಸದಾ ಸಬಲವಾಗಿರುವವರು ಯಾರ್ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ, ನಮ್ಮ ರಾಶಿ, ನಕ್ಷತ್ರದ ಆಧಾರದ ಮೇಲೆ ನಮ್ಮ ಸ್ವಭಾವವನ್ನು, ಭವಿಷ್ಯವನ್ನೂ ಹೇಳುತ್ತೆ ಜ್ಯೋತಿಶ್ಯಾಸ್ತ್ರ. ಜ್ಯೋತಿಶ್ಯಾಸ್ತ್ರದ ಪ್ರಕಾರ, ಈ ಮೂರು ರಾಶಿಯ ಹೆಣ್ಣು ಮಕ್ಕಳು ಹಣದ ವಿಷಯದಲ್ಲಿ ಸದಾ ಅದೃಷ್ಟವಂತರು. ಬನ್ನಿ ಯಾವ ರಾಶಿ ನೋಡೋಣ.
ಮೊದಲನೆಯದಾಗಿ ವೃಷಭ ರಾಶಿ: ಈ ರಾಶಿಯ ಆಡಳಿತ ಗ್ರಹ ಶುಕ್ರ. ಶುಕ್ರನನ್ನು ಅದೃಷ್ಟದ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ರಾಶಿಯ ಹೆಣ್ಣುಮಕ್ಕಳಿಗೆ ಹಣದ ವಿಚಾರದಲ್ಲಿ ಎಂದಿಗೂ ಸಮಸ್ಯೆಯಾಗುವುದಿಲ್ಲ. ಇವರು ತಮ್ಮ ವೃತ್ತಿಯಲ್ಲೂ ಕೂಡ ಇತರರನ್ನೂ ಹಿಂದಿಕ್ಕುತ್ತಾರೆ. ಹಣ ಸದಾ ಇವರ ಜೊತೆಗಿರುತ್ತದೆ. ವ್ಯವಹಾರದಲ್ಲಿ ಇವರು ಬಹಳ ಬುದ್ಧಿವಂತರಾಗಿರುತ್ತಾರೆ. ಹಣವನ್ನು ಬಹಳವೇ ವಿಚಾರ ಮಾಡಿ ಖರ್ಚು ಮಾಡುತ್ತಾರೆ. ಹಾಗಾಗಿ ಇವರನ್ನು ಹಣವಂತರು ಎಂದೇ ಪರಿಗಣಿಸಲಾಗುತ್ತದೆ.
ಮುಂದಿನದು ತುಲಾರಾಶಿ. ಈ ರಾಶಿಯ ಹೆಣ್ಣುಮಕ್ಕಳು ವ್ಯವಹಾರದಲ್ಲಿ ಬಹಳ ಚುರುಕಾಗಿರುತ್ತಾರೆ. ವ್ಯವಹಾರದಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ. ಶ್ರಮಪಟ್ಟು ಹಣವನ್ನು ಗಳಿಸುತ್ತಾರೆ. ಇಲ್ಲಿಯೂ ಶುಕ್ರನೇ ಅಧಿಪತಿಯಾಗಿರುವುದರಿಂದ ಇವರಿಗೂ ಹಣದ ಬಗ್ಗೆ ಅಪಾರ ಪ್ರೀತಿ ಗೌರವವಿರುತ್ತದೆ. ಹಾಗಾಗಿ ಹಣದ ವಿಷಯದಲ್ಲಿ ಈ ರಾಶಿಯ ಹೆಣ್ಣುಮಕ್ಕಳು ಎಂದಿಗೂ ಎಡವುದಿಲ್ಲ.
ಕೊನೆಯದಾಗಿ ಮಕರ ರಾಶಿ. ಮಕರ ರಾಶಿಯ ಅಧಿಪತಿ ಶನಿ. ಶನಿ ದೇವರ ಕೃಪೆ ಇವರ ಮೇಲಿರುತ್ತದೆ. ವೃತ್ತಿ ಜೀವನದಲ್ಲಿ ಉನ್ನತ ಸ್ಥಾನದಲ್ಲಿರುತ್ತಾರೆ. ಹನಿ ಹನಿ ಕೂಡಿದರೆ ಹಳ್ಳ ಎಂಬಂತೆ ಸ್ಪಲ್ಪ ಸ್ಪಲ್ಪವೇ ಹಣವನ್ನು ಕೂಡಿಸಿ ಆರ್ಥಿಕವಾಗಿ ಸಭಲರಾಗುತ್ತಾರೆ. ಅಷ್ಟೇ ಹಲ ಹಣದ ವಿಷಯದಲ್ಲಿ ಇವರನ್ನು ಯಾರೂ ಮೋಸ ಗೊಳಿಸಲೂ ಕೂಡ ಸಾಧ್ಯವಿಲ್ಲ. ಹಾಗಾಗಿ ಮಕರ ರಾಶಿಯ ಹೆಣ್ಣು ಮಕ್ಕಳು ಯಾವಾಗಲೂ ಆರ್ಧಿಕವಾಗಿ ಸಬಲರಾಗಿರುತ್ತಾರೆ. ಬೇರೆಯವರನ್ನು ಹಣಕ್ಕಾಗಿ ಅವಲಂಬಿಸುವುದಿಲ್ಲ. ಸ್ನೇಹಿತರೆ ನಿಮ್ಮ ರಾಶಿ ಯಾವುದು ಎಂದು ಕಮೆಂಟ್ ಮಾಡಿ ನಮಗೆ ತಿಳಿಸಿ.