ಬಿಗ್ ನ್ಯೂಸ್: ಬಟ್ಟೆ ಬ್ಯಾಗ್ ನಲ್ಲಿ ಸಿಲುಕಿಕೊಂಡ ಖಡಕ್ ಅಧಿಕಾರಿ ರೋಹಿಣಿ, ದಾಖಲೆಗಳ ಸಮೇತ ವಾದ. ಹೊಸದೊಂದು ಸಂಕಷ್ಟ. ಏನು ಗೊತ್ತೇ??

25

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಐ ಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಸಂಕಷ್ಟವೊಂದು ಎದುರಾಗಿದೆ. ಇತ್ತೀಚಿಗೆ ಒಂದಿಲ್ಲೊಂದು ವಿಷಯಗಳಲ್ಲಿ ರೋಹಿಣಿ ಸಿಂಧೂರಿಯವರ ಹೆಸರು ತಳುಕು ಹಾಕಿಕೊಳ್ಳುತ್ತಿದೆ. ಈ ಬಾರಿ ಬಟ್ಟೆ ಬ್ಯಾಗ್ ಖರೀದಿ ಹಗರಣದಿಂದ ರೋಹಿಣಿ ಆಚೆ ಬರಬೇಕಿದೆ. ಈ ಮೂಲಕ ಮತ್ತೊಮ್ಮೆ ರಾಜ್ಯದಲ್ಲಿ ತಲ್ಲಣ ಸೃಷ್ಟಿಯಾಗಿದೆ.

ಏನಿದು ಹಗರಣ! ರೋಹಿಣಿ ಸಿಂಧೂರಿಯವರು, ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆಗಳ ಇದ್ಯಾವುದರ ಅನುಮತಿಯನ್ನೂ ಪಡೆಯದೆ 14.71 ಲಕ್ಷ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್‌ಗಳನ್ನು 14 ಕೋಟಿ ರೂ.ಗೆ ಖರೀದಿ ಮಾಡಿದ್ದರು. ಚಿಲ್ಲರೆ ಮಾರುಕಟ್ಟೆಯಲ್ಲಿ ಈ ಬ್ಯಾಗ್ ನ ಬೆಲೆ 10ರಿಂದ 13 ರೂ.ಗಳು ಮಾತ್ರ. ಆದರೆ ಇದನ್ನು ಪ್ರತಿ ಬ್ಯಾಗ್‌ಗೆ 52 ರೂ. ಕೊಟ್ಟು ಖರೀದಿಸಲಾಗಿತ್ತು.

ಸಾರ್ವಜನಿಕರ ತೆರಿಗೆ ಹಣವನ್ನು ರೋಹಿಣಿ ಸಿಂಧೂರಿ ದುಂದು ವೆಚ್ಚ ಮಾಡಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್ ಗಂಭೀರ ಆರೋಪ ಮಾಡಿ ತನಿಖೆಗೆ ಆಗ್ರಹಿಸಿದ್ದರು. ಕೈ ಮಗ್ಗ ನಿಗಮ ಬಿಟ್ಟು ಖಾಸಗಿ ವ್ಯಕ್ತಿಗೆ ಟೆಂಡರ್ ನೀಡಿ ರೋಹಿಣಿ ಸಿಂಧೂರಿ ಕಿಕ್ ಬ್ಯಾಕ್ ಪಡೆದಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ 14 ಕೋಟಿ ರೂ. ಅವ್ಯವಹಾರ ನಡೆದಿದೆ ಸಾ.ರಾ.ಮಹೇಶ್​ ತನಿಖೆಗೆ ಆಗ್ರಹಿಸಿದ್ದರು. ಇದೀಗ ತನಿಖೆ ನಡೆಸಿ ವರದಿ ನೀಡುವಂತೆ ಈಗಿನ ಮೈಸೂರು ಜಿಲ್ಲಾಧಿಕಾರಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಾಗಾಗಿ ಸದ್ಯ ರೋಹಿಣಿ ಸಿಂಧೂರಿ ಎಲ್ಲದಕ್ಕೂ ಸರಿಯಾದ ಉತ್ತರ, ದಾಖಲೆ ಒದಗಿಸಬೇಕಾಗಿದೆ.

Get real time updates directly on you device, subscribe now.