ಶಿವಣ್ಣನ ತಾಳ್ಮೆ ಪರೀಕ್ಷೆ ಮಾಡಿದವನ ಸ್ಥಿತಿ ಏನಾಯ್ತು ಗೊತ್ತೇ?? ಕೋಪ ಬಂದಾಗ ಶಿವಣ್ಣ ಮಾಡಿದ್ದೇನು ಗೊತ್ತೇ??

25

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಸೆಲೆಬ್ರಿಟಿಗಳು ಎಂದ ಮೇಲೆ ಒಂದಲ್ಲ ಒಂದು ಕಾರಣದಿಂದಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ಕರುನಾಡ ಚಕ್ರವರ್ತಿ ಶಿವಣ್ಣನವರ ಕುರಿತಂತೆ. ಕರುನಾಡ ಚಕ್ರವರ್ತಿ ಶಿವಣ್ಣನವರು ಯಾವಾಗಲೂ ಕೂಡ ತಮ್ಮ ಅಭಿಮಾನಿಗಳನ್ನು ತಮ್ಮ ತಂದೆ ರಾಜಕುಮಾರ್ ಅವರಂತೆ ಅಭಿಮಾನಿ ದೇವರು ಎನ್ನುವುದಾಗಿ ಕರೆಯುತ್ತಾರೆ. ಈ ವಯಸ್ಸಿನಲ್ಲಿಯೂ ಕೂಡ ಯುವಕರು ನಾಚುವಂತೆ ನಟನೆ ಹಾಗೂ ಡ್ಯಾನ್ಸ್ ಹಾಗೂ ಸಾಹಸ ದೃಶ್ಯಗಳಲ್ಲಿ ಪಾಲ್ಗೊಳ್ಳುವುದು ಕೂಡ ತಮ್ಮ ಅಭಿಮಾನಿಗಳಿಗಾಗಿ ಎಂದರೆ ತಪ್ಪಾಗಲಾರದು.

ಇನ್ನು ಇತ್ತೀಚಿಗಷ್ಟೇ ಅವರ ಸಹೋದರ ನಾಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೇಮ್ಸ್ ಚಿತ್ರದ ಬಿಡುಗಡೆ ಕೂಡ ಅವರ ಜನ್ಮದಿನದ ವಿಶೇಷವಾಗಿ ನಡೆದಿದೆ. ತಮ್ಮನ ಕೊನೆಯ ಸಿನಿಮಾವನ್ನು ಅಭಿಮಾನಿಗಳ ಜೊತೆಗೆ ಹೋಗಿ ನೋಡಿ ಅಪ್ಪು ಅಭಿಮಾನಿಗಳಿಗೆ ಸಂತೋಷ ನೀಡುವ ಕೆಲಸವನ್ನು ಕೂಡ ಕರುನಾಡ ಚಕ್ರವರ್ತಿ ಶಿವಣ್ಣ ಮಾಡಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ನಡೆದಿರುವಂತಹ ಒಂದು ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸುದ್ದಿಗೆ ಕಾರಣವಾಗಿದೆ. ಹಾಗಿದ್ದರೆ ಇಷ್ಟು ದೊಡ್ಡ ಸುದ್ದಿಯಾಗಲು ನಡೆದಿದ್ದಾದರೂ ಏನು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಕರುನಾಡ ಚಕ್ರವರ್ತಿ ಶಿವಣ್ಣನವರು ಜೇಮ್ಸ್ ಚಿತ್ರವನ್ನು ನೋಡಲು ಹೋಗುತ್ತಿದ್ದ ಸಂದರ್ಭದಲ್ಲಿ ಜನರ ಜೊತೆಗೆ ಮಾಧ್ಯಮಗಳ ನೂಕುನುಗ್ಗಲಾಟವು ಕೂಡ ಇತ್ತು. ಈ ಸಂದರ್ಭದಲ್ಲಿ ಇಂತಹ ಸಂದಿಗ್ಧ ಪರಿಸ್ಥಿತಿ ಇದ್ದರೂ ಕೂಡ ಅಭಿಮಾನಿಯೊಬ್ಬ ಶಿವಣ್ಣನವರ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಕೊಸರಾಡುತಿದ್ದ. ಆಗ ಶಿವಣ್ಣ ಸನ್ನೆಯ ಮೂಲಕವೇ ಸೆಲ್ಫಿ ತೆಗೆದುಕೊಳ್ಳದೆ ಇರಲು ಎಚ್ಚರಿಕೆ ನೀಡಿದ್ದಾರೆ ಎಂಬುದು ವಿಡಿಯೋಗಳ ಮೂಲಕ ತಿಳಿದುಬಂದಿದೆ. ಶಿವಣ್ಣ ಮಾಡಿರುವುದು ಹೊರಗಿನಿಂದ ಬೇಸರ ತರಿಸಿದರೂ ಕೂಡ ಅವರ ಜಾಗದಲ್ಲಿ ಯಾರೇ ಇದ್ದರೂ ಕೂಡ ಅದೇ ರೀತಿ ಮಾಡುತ್ತಿದ್ದರು ಎನ್ನುವುದನ್ನು ಕೂಡ ಒಪ್ಪಿಕೊಳ್ಳಲೇಬೇಕು.

Get real time updates directly on you device, subscribe now.