ಕಚಾ ಬಾದಾಮ್ ಗೆ ಸೊಂಟ ಬಳುಕಿಸಿದ ಅಪ್ಪು ಸಿನಿಮಾ ನಟಿ ಅನುಪಮಾ ಪರಮೇಶ್ವರನ್; ವೀಡಿಯೋ ಹೇಗಿದೆ ಗೊತ್ತೇ??

17

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಅದರಲ್ಲೂ ವಿಶೇಷವಾಗಿ ಹೇಳಬೇಕೆಂದರೆ ಇನ್ಸ್ಟಾಗ್ರಾಮ್ ನಲ್ಲಿ ಕೆಲವೊಂದು ಮಾದರಿಯ ವಿಡಿಯೋಗಳು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿವೆ. ದರಲ್ಲಿ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ನಟಿ ಅನುಪಮ ಪರಮೇಶ್ವರನ್ ರವರ ಹೊಸ ವಿಡಿಯೋದ ಕುರಿತಂತೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹುಬೇಡಿಕೆಯ ನಾಯಕನಟಿ ಸ್ಥಾನವನ್ನು ಅನುಪಮ ಪರಮೇಶ್ವರನ್ ಅವರು ಪಡೆದುಕೊಂಡಿದ್ದಾರೆ.

ಇನ್ನು ನಮ್ಮ ಕನ್ನಡ ಚಿತ್ರರಂಗದಲ್ಲಿ ಕೂಡ ಅನುಪಮ ನಟಿಸಿದ್ದಾರೆ. ಹೌದು ನಮ್ಮೆಲ್ಲರ ನೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೊತೆಗೆ ನಟಸಾರ್ವಭೌಮ ಚಿತ್ರದಲ್ಲಿ ಅನುಪಮ ಪರಮೇಶ್ವರನ್ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಇವರಿಬ್ಬರ ಜೋಡಿಯನ್ನು ಸೂಪರ್ ಎನ್ನುವುದಾಗಿ ಕನ್ನಡಿಗರು ಕರೆದಿದ್ದರು. ಇನ್ನು ಅತಿ ಚಿಕ್ಕ ವಯಸ್ಸಿನಲ್ಲಿಯೇ ಇಷ್ಟೊಂದು ಆಫರ್ ಗಳನ್ನು ಪಡೆಯುತ್ತಿರುವ ಅನುಪಮ ಪರಮೇಶ್ವರನ್ ರವರು ಸೋಶಿಯಲ್ ಮೀಡಿಯಾದಲ್ಲಿ ಕೂಡ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನು ಅವರು ತಮ್ಮ ಅಭಿಮಾನಿಗಳಿಗಾಗಿ ಆಗಾಗ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇತ್ತೀಚಿಗಷ್ಟೇ ಅನುಪಮ ಪರಮೇಶ್ವರನ್ ರವರು ಒಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ ಹಾಗೂ ಅದು ದೊಡ್ಡಮಟ್ಟದಲ್ಲಿ ವೈರಲ್ ಆಗಿದೆ.

ಹೌದು ಈಗಾಗಲೇ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕಡಲೆಕಾಯಿ ವ್ಯಾಪಾರಿ ಹಾಡಿರುವ ಕಚಾ ಬಾದಾಮ್ ಸಾಂಗ್ ಗೆ ನಟಿ ಅನುಪಮ ಪರಮೇಶ್ವರನ್ ಅವರು ಕೂಡ ತಮ್ಮ ಗೆಳತಿಯೊಂದಿಗೆ ಹೆಜ್ಜೆ ಹಾಕಿರುವ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದು ಈಗ ಎಲ್ಲಾ ಕಡೆ ವೈರಲ್ ಆಗಿದ್ದು ನೀವು ಕೂಡ ಈ ವಿಡಿಯೋವನ್ನು ನೋಡಬಹುದಾಗಿದೆ. ಹಲವಾರು ಸೆಲೆಬ್ರಿಟಿಗಳ ಜೊತೆಗೆ ಕಚಾ ಬಾದಾಮ್ ಸಾಂಗ್ ಟ್ರೆಂಡ್ ಗೆ ಈಗ ನಟಿ ಅನುಪಮ ಪರಮೇಶ್ವರನ್ ರವರು ಕೂಡ ಸೇರಿದ್ದಾರೆ ಎಂದು ಹೇಳಬಹುದಾಗಿದೆ. ಈ ವಿಡಿಯೋದ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.