ಯಾವ ಖಾನ್ ಗಳು ಕೂಡ ಮಾಡದ ಸಾಧನೆಯನ್ನು ಮಾಡುತ್ತಿದೆ ದ ಕಾಶ್ಮೀರಿ ಫೈಲ್ಸ್ ಚಿತ್ರ, ಇಲ್ಲಿಯವರೆಗೂ ಬಾಚಿದ್ದು ಎಷ್ಟು ಕೋಟಿ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರುವ ಸಿನಿಮಾಗಳು ದಕ್ಷಿಣ ಭಾರತ ಚಿತ್ರರಂಗದ ಸಿನಿಮಾಗಳು ಆಗಿದ್ದವು. ಬಾಲಿವುಡ್ ಸಿನಿಮಾಗಳು ದೊಡ್ಡಮಟ್ಟದಲ್ಲಿ ಬಾಕ್ಸಾಫೀಸ್ ಕಲೆಕ್ಷನ್ ಮಾಡಬೇಕು ಎಂದರೆ ಸಲ್ಮಾನ್ ಖಾನ್ ಶಾರುಖ್ ಖಾನ್ ಆಮಿರ್ ಖಾನ್ ಅಥವಾ ಅಕ್ಷಯ್ ಕುಮಾರ್ ರವರಂತಹ ದೊಡ್ಡ ಸ್ಟಾರ್ ಗಳ ಸಿನಿಮಾ ಬರಬೇಕು ಎನ್ನುವುದಾಗಿ ಅಲ್ಲಿ ಒಂದು ಅಲಿಖಿತ ನಿಯಮ ಪ್ರಚಾರವಾಗಿತ್ತು ಎಂದರೆ ತಪ್ಪಾಗಲಾರದು.
ಖಾನ್ ತ್ರಯರ ಸಿನಿಮಾಗಳು ಕೂಡ ಮೊದಲ ವಾರದಲ್ಲಿ ಮಾತ್ರ ಬಾಕ್ಸಾಫೀಸ್ ನಲ್ಲಿ ಭರ್ಜರಿಯಾಗಿ ಸೌಂಡ್ ಮಾಡುತ್ತವೆ. ಎರಡನೇ ವಾರದ ನಂತರ ಅವುಗಳ ಕಲೆಕ್ಷನ್ ಕೂಡ ಮಂದವಾಗಿಬಿಡುತ್ತವೆ. ಆದರೆ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಒಂದು ಬಾಲಿವುಡ್ ಸಿನಿಮಾ ದೊಡ್ಡಮಟ್ಟದಲ್ಲಿ ದೇಶ-ವಿದೇಶಗಳಲ್ಲಿ ಸದ್ದು ಮಾಡುತ್ತಿದೆ. ನಾವು ಇಷ್ಟು ಹೇಳಿದ ಮೇಲೆ ನೀವು ಅದು ಯಾವ ಸಿನಿಮಾ ಎನ್ನುವುದನ್ನು ಖಂಡಿತವಾಗಿ ಲೆಕ್ಕ ಹಾಕಿರುತ್ತೀರಿ.
ಹೌದು ನಾವು ಮಾತನಾಡುತ್ತಿರುವುದು ದಿ ಕಾಶ್ಮೀರಿ ಪೈಲ್ಸ್ ಸಿನಿಮಾದ ಕುರಿತಂತೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಮಾಸ್ಟರ್ ಪೀಸ್ ಸಿನಿಮಾ ಪ್ರತಿಯೊಂದು ರಾಜ್ಯದಲ್ಲಿ ಹಾಗೂ ಪ್ರತಿಯೊಂದು ದೇಶಗಳಲ್ಲಿ ಪ್ರೇಕ್ಷಕರಿಂದ ದೊಡ್ಡಮಟ್ಟದಲ್ಲಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. 1990 ರಲ್ಲಿ ನಡೆದಂತಹ ಕಶ್ಮೀರಿ ಪಂಡಿತರ ಹ’ತ್ಯೆ ಹಾಗೂ ಸಾಮೂಹಿಕ ವಲಸೆ ಕುರಿತಂತೆ ನೈಜ ಘಟನೆಗಳ ಆಧಾರಿತ ಚಿತ್ರವಾಗಿದೆ ದ ಕಾಶ್ಮೀರಿ ಫೈಲ್ಸ್. ಹಲವಾರು ವರ್ಷಗಳ ಕಾಲ ಈ ಬೂದಿ ಮುಚ್ಚಿದ ಕೆಂಡದಂತಿದ್ದ ಸತ್ಯವನ್ನು ಮುಚ್ಚಿಡಲಾಗಿತ್ತು. ಈಗ ಈ ಸತ್ಯವನ್ನು ಎಲ್ಲರೂ ಕೂಡ ಒಪ್ಪಿಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಚಿತ್ರದ ಕಲೆಕ್ಷನ್ ಸಾಕ್ಷಿ ಎಂದು ಹೇಳಬಹುದಾಗಿದೆ.
ಬಾಕ್ಸಾಫೀಸ್ ನಲ್ಲಿ ದಾಖಲೆಯ ಕಲೆಕ್ಷನ್ ಮಾಡುತ್ತಿರುವ ಈ ಸಿನಿಮಾದಲ್ಲಿ ಯಾವುದೇ ಸ್ಟಾರ್ ನಟರು ಇಲ್ಲ. ಆದರೂ ಕೂಡ ಚಿತ್ರದ ಸತ್ಯ ಹಾಗೂ ಕಂಟೆಂಟ್ ಎರಡು ಕೂಡ ಪ್ರೇಕ್ಷಕರ ಮನವನ್ನು ಗೆದ್ದಿದೆ. ಅನುಪಮ್ ಖೇರ್ ಅವರ ಮನೋಜ್ಞ ನಟನೆ ಚಿತ್ರದ ಪ್ರಮುಖ ಆಕರ್ಷಣೆ ಆಗಿದೆ ಎಂದರೆ ತಪ್ಪಾಗಲಾರದು. ಇನ್ನು ಚಿತ್ರದ ವಿಚಾರಕ್ಕೆ ಬರುವುದಾದರೆ ಇಡೀ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹತ್ತನೇ ದಿನ ಅತ್ಯಧಿಕ ಕಲೆಕ್ಷನ್ ಮಾಡಿರುವ ಏಕೈಕ ಸಿನಿಮಾ ದ ಕಾಶ್ಮೀರಿ ಫೈಲ್ಸ್ ಆಗಿದೆ. ಹೌದು ದ ಕಾಶ್ಮೀರಿ ಪೈಲ್ಸ್ ಸಿನಿಮಾ 10ನೇ ದಿನ ಬರೋಬ್ಬರಿ 26 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ದ ಕಾಶ್ಮೀರಿ ಫೈಲ್ಸ್ ಸಿನಿಮಾ ಮೊದಲ ದಿನ 3.55 ಕೋಟಿ ನಂತರ 8.50 ಕೋಟಿ ಮೂರನೇ ದಿನ 15.10 ಕೋಟಿ ನಾಲ್ಕನೇ ದಿನ 15.05 ಕೋಟಿ ಐದನೇ ದಿನ 18 ಕೋಟಿ ರೂಪಾಯಿ 6ನೇ ದಿನ 19.05 ಕೋಟಿ ರೂಪಾಯಿ ಏಳನೇ ದಿನ 18.05 ಕೋಟಿ ರೂಪಾಯಿ 8ನೇ ದಿನ 19.15ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. 9ನೇ ದಿನವೂ ಕೂಡ 24.80 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿತ್ತು. ಒಟ್ಟಾರೆಯಾಗಿ ಜಾಗತಿಕವಾಗಿ ಬಾಕ್ಸಾಫೀಸ್ ನಲ್ಲಿ 216 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಸತ್ಯವನ್ನು ಜನರು ಒಪ್ಪಿಕೊಂಡರೆ ಯಾವ ಫಲಿತಾಂಶ ಸಿಗುತ್ತದೆ ಎಂಬುದನ್ನು ಸಾಬೀತುಪಡಿಸಿದೆ.
ಇತ್ತೀಚಿಗಷ್ಟೇ ಅಕ್ಷಯ್ ಕುಮಾರ್ ಅವರ ಬಚ್ಚನ್ ಪಾಂಡೆ ಸಿನಿಮಾ ಬಿಡುಗಡೆಯಾಗಿತ್ತು ಇಲ್ಲವಾದರೆ ಅದಾಗಲೇ ಈ ಚಿತ್ರ 300 ಕೋಟಿ ಗಡಿಯನ್ನು ಈಗಾಗಲೇ ದಾಟಬಹುದಿತ್ತು ಎಂಬುದಾಗಿ ಸಿನಿಮಾ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಇಂತಹ ಚಿತ್ರಗಳು ಬಾಲಿವುಡ್ ಚಿತ್ರರಂಗದಿಂದ ಇನ್ನಷ್ಟು ಹೆಚ್ಚೆಚ್ಚು ಬರಬೇಕು ಎಂಬುದಾಗಿ ಕೂಡಾ ಪ್ರೇಕ್ಷಕರು ಆಗ್ರಹಿಸಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ ಸಿನಿಮಾವನ್ನು ಪ್ರೇಕ್ಷಕರ ಸ್ವತಹ ಪ್ರಚಾರ ಮಾಡಿದ್ದಾರೆ. ಇಂತಹ ಘಟನೆಗಳು ಚಿತ್ರರಂಗದಲ್ಲಿ ನಡೆಯುವುದು ವಿರಳಾತಿವಿರಳ. ಈ ಚಿತ್ರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.