ನಿಜವಾಗಲೂ ಹೊಸ ಕಾಮಿಡಿ ಶೋ ಕಾಮಿಡಿ ಗ್ಯಾಂಗ್ ಗೆ ನಿರೂಪಕರಾಗಿ ಬರುತ್ತಿರುವುದು ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕಿರುತೆರೆಯಲ್ಲಿ ಧಾರಾವಾಹಿಗಳಿಗೆ ಎಷ್ಟು ಮಹತ್ವದ್ದೋ ಅದೇ ರೀತಿ ರಿಯಾಲಿಟಿ ಶೋಗಳು ಕೂಡ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದೆ. ಬಿಗ್ ಬಾಸ್ ನಿಂದ ಹಿಡಿದು ಕಾಮಿಡಿ ಶೋಗಳು, ಸರೆಗಮಪ, ಡ್ಯಾನ್ಸ್ ಶೋಗಳು ಹೀಗೆ ಮೊದಲಾದ ಎಲ್ಲಾ ರಿಯಾಲಿಟಿ ಶೋಗಳನ್ನು ಜನರು ಅತ್ಯಂತ ಆಸಕ್ತಿಯಿಂದ ವೀಕ್ಷಿಸುತ್ತಾರೆ.
ಜನರ ಆಸಕ್ತಿಗೆ ತಕ್ಕಹಾಗೆ ರಿಯಾಲಿಟಿ ಶೋಗಳು ಕೂಡ ಅತ್ಯಂತ ವೈಭವೋಪೇತವಾಗಿ ಮೂಡಿಬರುತ್ತವೆ. ಸದ್ಯ ನಿಮ್ಮನ್ನು ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸುವಂತೆ ಮಾಡುವ ಕಾಮಿಡಿ ಶೋ ಒಂದು ಟಿವಿ ಪರದೆಯ ಮೇಲೆ ಪ್ರಸಾರವಾಗಲಿದೆ. ಅದುವೇ ಕಾಮಿಡಿ ಗ್ಯಾಂಗ್.
ಈ ಕಾಮಿಡಿ ಗ್ಯಾಂಗ್ ರಿಯಾಲಿಟಿ ಶೋನಲ್ಲಿ ನಗಿಸೋಕೆ ಬರುವ ಸ್ಪರ್ಧಿಗಳಿಂದ ಹಿಡಿದು ನಿರೂಪಣೆ ಹಾಗೂ ತೀರ್ಪುಗಾರರಲ್ಲಿಯೂ ಸಾಕಷ್ಟು ವೆರೈಟಿಗಳಿವೆ. ಹೌದು, ಕಾಮಿಡಿ ಡ್ಯಾನ್ಸ್ ರಿಯಾಲಿಟಿ ಶೋವನ್ನು ನಡೆಸಿಕೊಡುತ್ತಿರುವುದು ಶಿವರಾಜ್ ಕೆ.ಆರ್ ಪೇಟೆ. ಇನ್ನು ತೀರ್ಪುಗಾರರಾಗಿ ನಟಿ ಶೃತಿ ಹರಿಹರನ್, ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಹಾಗೂ ಹಾಸ್ಯನಟ ಕುರಿಪ್ರತಾಪ್ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ನಿಮ್ಮನ್ನು ನಗಿಸಲು 6 ಹಾಸ್ಯ ತಂಡಗಳು ಸಿದ್ಧವಾಗಿವೆ. ಇನ್ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುವ ಈ ರಿಯಾಲಿಟಿ ಶೋ ಪ್ರೋಮೋವೊಂದು ಈಗಾಗಲೇ ಪ್ರಸಾರವಾಗಿದ್ದು, ಅದರಲ್ಲಿ ಶ್ರುತಿ ಹರಿಹರನ್ ‘ನಗಿಸೋಕೆ ನಾವು ರೆಡಿ ನಗುವುದಕ್ಕೆ ನೀವು ರೆಡಿನಾ’ ಎಂದು ಕೇಳಿದ್ದಾರೆ. ಒಟ್ಟಾರೆಯಾಗಿ ಕಾಮಿಡಿ ಗ್ಯಾಂಗ್ ಸಂಪೂರ್ಣ ಹಾಸ್ಯವನ್ನು ಹೊತ್ತ ಶೀರ್ಷಿಕೆಯಾಗಿದೆ.