ವಿಚಿತ್ರ ಟೈಟಲ್, ವಿಶೇಷ ಸಂದೇಶ; ಇದು ಉಪ್ಪು ಸಿನಿಮಾ ವಿಶೇಷ; ಮೊದಲ ಬಾರಿಗೆ ವಿವರಣೆ ನೀಡಿದ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ, ಕನ್ನಡ ಸಿನಿಮಾ ರಂಗದಲ್ಲಿ ನಟ ಉಪೇಂದ್ರ ಅಂದ್ರೆ ಬೇರೆಯದೇ ಇಮೇಜ್ ಇದೆ. ಇವರು ಕೇವಲ ಒಬ್ಬ ನಟನಲ್ಲ, ಒಬ್ಬ ನಿರ್ದೇಶಕನಲ್ಲ. ಹೆಸರಿಗೆ ತಕ್ಕ ಹಾಗೆ ರಿಯಲ್ ಸ್ಟಾರ್. ಇವರ ಯೋಚನೆಗಳೂ ಸಹ ವಿಭಿನ್ನವಾಗಿಯೇ ಇರುತ್ತೆ. ಬೇರೆ ಯಾವುದೇ ನಟರಿಗೆ, ಚಿತ್ರಕ್ಕೆ ಹೋಲಿಸಿದರೆ ಉಪೇಂದ್ರ ಅವರ ಸಿನಿಮಾದಲ್ಲಿ ಇರುವ ವಿಷಯಗಳು ತುಂಬಾನೇ ವಿಭಿನ್ನವಾಗಿ ಇರುತ್ತೆ.
ಸದ್ಯ ಉಪೇಂದ್ರ ಅವರ ನಟನೆಯ ಹೋಮ್ ಮಿನಿಸ್ಟರ್ ರಿಲೀಸ್ ಗೆ ಸಿದ್ದವಾಗಿದೆ. ಮುಂದಿನ ತಿಂಗಳು ಅಂದ್ರೆ ಏಪ್ರಿಲ್ ಮೊದಲನೇ ವಾರದಲ್ಲಿಯೇ ಸಿನಿಮಾ ತೆರೆಕಾಣಲಿದೆ. ಅಂದಹಾಗೆ ಈ ಚಿತ್ರದಲ್ಲಿ ನಿಜವಾದ ’ಹೋಮ್’ ಮಿನಿಷ್ಟರ್ ಆಗಿ ರಿಯಲ್ ಸ್ಟಾರ್ ಕಾಣಿಸಿಕೊಳ್ಳುತ್ತಿದ್ದಾರಂತೆ. ಈ ಬಗ್ಗೆ ಮಾತನಾಡಿದ ನಟಿ ಪ್ರಿಯಾಂಕಾ ಉಪೇಂದ್ರ,
’ನಾನು ಯಾವತ್ತೂ ಉಪೇಂದ್ರ ಅಡುಗೆ ಮಾಡೋದು, ಮಕ್ಕಳಿಗೆ ಜಡೆ ಹಾಕೋದು ಎಲ್ಲವನೂ ನೋಡಿಲ್ಲ ಹಾಗಾಗಿ ಈ ಚಿತ್ರದಲ್ಲಿ ಅದನ್ನೇಲ್ಲಾ ನೋಡಬಹುದು. ಚಿತ್ರ ಚೆನ್ನಾಗಿದೆ. ಖಂಡಿತವಾಗಿ ಫ್ಯಾಮಿಲಿಯವರೆಲ್ಲರೂ ಈ ಸಿನಿಮಾವನ್ನ ಇಷ್ಟಪಡುತ್ತಾರೆ’ ಎಂದಿದ್ದಾರೆ. ಇನ್ನು ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಶನದ ಯು ಆಂಡ್ ಐ ಚಿತ್ರದ ಫಸ್ಟ್ ಪೋಸ್ಟರ್ ರಿಲೀಸ್ ಆಗಿದೆ. ಈ ಚಿತ್ರದ ಶೀರ್ಷಿಕೆ ವಿಭಿನ್ನವಾಗಿದ್ದು, ಹೀಗೆ ಎಂದು ಊಹಿಸುವುದು ಕಷ್ಟ. ಹಾಗಾಗಿ ಈ ಶೀರ್ಷಿಕೆಯ ಬಗ್ಗೆ ಮಾತನಾಡಿದ ಪ್ರಿಯಾಂಕಾ ಉಪೇಂದ್ರ ಅವರು, ’ಇದು ವಿಭಿನ್ನವಾದ ಟೈಟಲ್. ಟೈಟಲ್ ನೋಡಿದ್ರೆ ಯು ಆಂಡ್ ಐ ಎಂದು ಗೆಸ್ ಮಾಡಬಹುದು.
ಆದರೆ ಉಪೇಂದ್ರ ಅವರ ಉದ್ಡೇಶವಏ ಇದು, ಟೈಟಲ್ ಅರ್ಥ ನಿಮ್ಮ ಯೋಚನೆಗೆ ಬಿಟ್ಟದ್ದು. ಈಗ ಒಂದು ಆರ್ಟ್ ನ್ನು ನೋಡಿ ನನಗೆ ಬೇರೆ ಅನ್ನಿಸತ್ತೆ ನಿಮಗೆ ಬೇರೆ ಅನಿಸತ್ತೆ, ಹಾಗೆಯೇ ಇದು ಬೇರೆ ಅರ್ಥವನ್ನ ಕೊಡತ್ತೆ. ಆದರೆ ಈ ಸಿನಿಮಾದಲ್ಲಿ ಒಂದೊಳ್ಳೆ ಸಂದೇಶವಿದೆ. ಅದನ್ನ ಚಿತ್ರ ನೋಡಿದ್ರೆ ಗೊತ್ತಾಗತ್ತೆ’ ಎಂದಿದ್ದಾರೆ. ಸದ್ಯ ಹಲವಾರು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ ಉಗ್ರಾವತಾರ ಚಿತ್ರದಲ್ಲಿ ಆಕ್ಷನ್ ಸೀನ್ ಮಾಡಿದ್ದು, ರೀಲೀಸ್ ಹಂತ ತಲುಪಿದೆ. ಇದರ ಜೊತೆಗೆ 1990, ಲೈಫ್ ಇಸ್ ಬ್ಯೂಟಿಫುಲ್, ಕಮರೊಟ್ಟು -2, ಮಿಸ್ ನಂದಿನಿ, ವೈರಸ್ ಮೊದಲಾದ ಚಿತ್ರಗಳ ಮೂಲಕ ವಿಭಿನ್ನ ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ ನಟಿ ಪ್ರಿಯಾಂಕಾ ಉಪೇಂದ್ರ.