ಮದುವೆಯಾಗ ಗಂಡು ಹೆಣ್ಣಿನ ನಡುವೆ ನಿಜವಾಗಲೂ ವಯಸ್ಸಿನ ಅಂತರ ಎಷ್ಟು ಇರಬೇಕು ಗೊತ್ತೇ?? ಇದಪ್ಪ ಸರಿಯಾದ ಅಂತರ. ಎಷ್ಟು ಗೊತ್ತೇ??
ನಮಸ್ಕಾರ ಸ್ನೇಹಿತರೇ ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಕೂಡ ಒಂದು ಹೊಸ ಜೀವನದ ಅಧ್ಯಾಯವನ್ನು ತೆರೆದಿಡುವಂತಹ ಮುಖಪುಟ ಎಂದು ಹೇಳಲಾಗುತ್ತದೆ. ಇದನ್ನು ಪ್ರತಿಯೊಬ್ಬರು ಯೋಚಿಸಿ ನಿರ್ಧಾರ ತೆಗೆದುಕೊಂಡು ಅದರ ಅನ್ವಯ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಒಂದು ವೇಳೆ ಲವ್ ಮ್ಯಾರೇಜ್ ಆದರೆ ಎರಡು ಹೃದಯಗಳ ಮಿಲನ ಎಂಬುದಾಗಿ ಹೇಳುತ್ತಾರೆ. ಅರೆಂಜ್ ಮ್ಯಾರೇಜ್ ಆದರೆ ಎರಡು ಕುಟುಂಬಗಳ ಮಿಲನ ಎಂಬುದಾಗಿ ಹೇಳುತ್ತಾರೆ.
ಆದರೆ ಇಲ್ಲಿ ಇಬ್ಬರು ಸಂಗಾತಿಗಳಾಗಿ ಜೀವನಪೂರ್ತಿ ಪರಸ್ಪರ ಒಟ್ಟಾಗಿ ಜೀವಿಸುವಂತಹ ಸಾಮರಸ್ಯದ ಸಂಬಂಧವಾಗಿದೆ ಮದುವೆ. ಹೀಗಾಗಿ ಮದುವೆ ಆಗುತ್ತಿರುವ ಎರಡು ಮನಸ್ಥಿತಿಗಳು ಕೂಡ ಒಂದಕ್ಕೊಂದು ಹೊಂದಾಣಿಕೆ ಆಗಿರುವಂತೆ ಇರಬೇಕಾಗಿರುತ್ತದೆ. ಇನ್ನು ಹಲವಾರು ಜನರಲ್ಲಿ ಕೆಲವೊಂದು ಗೊಂದಲಗಳು ಕೂಡ ಇರುತ್ತದೆ ಮದುವೆ ವಿಚಾರವಾಗಿ. ಅದೇನೆಂದರೆ ಮದುವೆ ಆಗುವ ಗಂಡು ಹೆಣ್ಣಿನ ನಡುವೆ ಎಷ್ಟು ವಯಸ್ಸಿನ ಅಂತರವಿರಬೇಕು ಎಂಬುದಾಗಿ.
ಈ ಕುರಿತಂತೆ ಪ್ರಮುಖವಾಗಿ ಹೇಳಬಹುದಾದರೆ ಗಂಡಿಗಿಂತ ಹೆಣ್ಣಿನ ವಯಸ್ಸು ಚಿಕ್ಕದಾಗಿರಬೇಕು ಯಾಕೆಂದರೆ ಹೆಣ್ಣಿಗೆ ಅತಿ ಚಿಕ್ಕ ವಯಸ್ಸಿನಿಂದಲೇ ಮೆಚುರಿಟಿ ಎನ್ನುವುದು ಗಂಡಿಗಿಂತ ಹೆಚ್ಚಾಗಿ ಬಂದಿರುತ್ತದೆ. ಯಾವುದೇ ನಿರ್ಧಾರಗಳಲ್ಲಿ ತೆಗೆದುಕೊಳ್ಳುವಂತಹ ನಿರ್ಣಯ ಮತ್ತು ಯಾವುದೇ ಪರಿಸ್ಥಿತಿಗಳಲ್ಲಿ ಅದನ್ನು ನಿಯಂತ್ರಿಸಬಲ್ಲ ಅಂತಹ ಬುದ್ಧಿಶಕ್ತಿ ಗಂಡಿಗೆ ಹೋಲಿಸಿದರೆ ಹೆಣ್ಣಿಗೆ ಚಿಕ್ಕವಯಸ್ಸಿನಿಂದಲೇ ಬಂದಿರುತ್ತದೆ. ಹೀಗಾಗಿ ಗಂಡಿಗಿಂತ ಹೆಣ್ಣು ಚಿಕ್ಕ ವಯಸ್ಸಿನಲ್ಲಿ ಇರಬೇಕಾಗಿರುವುದು ಇಲ್ಲಿ ನ್ಯಾಯ ಸಮ್ಮತವಾಗಿದೆ. ವೈಜ್ಞಾನಿಕ ಹಿನ್ನೆಲೆಗಳ ಪ್ರಕಾರ ಗಂಡಿಗಿಂತ ಹೆಣ್ಣು ಮೂರರಿಂದ ಐದು ವರ್ಷ ಚಿಕ್ಕವಳಾ ಗಿರಬೇಕು. ಹೀಗಿದ್ದಲ್ಲಿ ಖಂಡಿತವಾಗಿ ಸಂಸಾರ ಎನ್ನುವುದು ಸಮ ರಸಮಯವಾಗಿ ಕೂಡಿರುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.