ಸೋನಂ ಕಪೂರ್‌ನಿಂದ ಕಾಜಲ್ ಅಗರ್ವಾಲ್‌ವರೆಗೆ ಈ ವರ್ಷ ತಾಯಿಯಾಗಲಿರುವ ಖ್ಯಾತ ಸೆಲೆಬ್ರಿಟಿಗಳು ಯಾರೆಲ್ಲ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಾವು ಸಾಕಷ್ಟು ಸೆಲೆಬ್ರಿಟಿಗಳು ಮದುವೆಯಾಗುತ್ತಿರುವುದನ್ನು ಕೂಡ ನಾವು ನೋಡುತ್ತಿದ್ದೇವೆ. ಆದರೆ ಇಂದಿನ ವಿಚಾರದಲ್ಲಿ ನಾವು ಹೇಳಲು ಹೊರಟಿರುವುದು ಅದಕ್ಕೆ ಸಂಬಂಧಪಟ್ಟ ಇರುವಂತಹ ಒಂದು ವಿಚಾರದ ಕುರಿತು. ಹೌದು 2022 ವರ್ಷದಲ್ಲಿ ತಾಯಿ ಆಗಲು ಹೊರಟಿರುವ ಸೆಲೆಬ್ರಿಟಿಗಳು ಯಾರು ಎನ್ನುವುದರ ಕುರಿತಂತೆ ನಿಮಗೆ ಸಂಪೂರ್ಣ ವಿವರವಾಗಿ ಹೇಳಲು ಹೊರಟಿದ್ದೇವೆ. ಹಾಗಿದ್ದರೆ ಈ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಸೋನಂ ಕಪೂರ್; ಬಾಲಿವುಡ್ ಚಿತ್ರರಂಗದ ಖ್ಯಾತ ಹಿರಿಯ ನಟ ಅನಿಲ್ ಕಪೂರ್ ಅವರ ಮಗಳಾಗಿರುವ ಸೋನಮ್ ಕಪೂರ್ ಅವರು ಉದ್ಯಮಿ ಆನಂದ್ ಅಹುಜ ಅವರನ್ನು ಮದುವೆಯಾಗಿದ್ದರು. ಮದುವೆ ಆಗಿ ಇಷ್ಟೊಂದು ವರ್ಷಗಳ ಆಗಿದ್ದರು ಕೂಡ ಮಕ್ಕಳ ಕುರಿತಂತೆ ಯಾವುದೇ ಪತ್ತೆ ಇರಲಿಲ್ಲ. ಆದರೆ ಇತ್ತೀಚೆಗಷ್ಟೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿಕೊಳ್ಳುವ ಮುಖಾಂತರ ತಾವು ನಾಲ್ಕು ತಿಂಗಳ ಗರ್ಭಿಣಿ ಎಂಬುದಾಗಿ ಹೇಳಿಕೊಂಡಿದ್ದಾರೆ.

ಕಾಜಲ್ ಅಗರ್ವಾಲ್; ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿಯಾಗಿರುವ ಕಾಜಲ್ ಅಗರ್ವಾಲ್ ರವರು 2020 ರಲ್ಲಿ ತಮ್ಮ ಬಹುಕಾಲದ ಗೆಳೆಯ ಗೌತಮ್ ಕಿಚ್ಲು ರವರನ್ನು ಮದುವೆಯಾಗಿದ್ದರು. ಇನ್ನು ಇತ್ತೀಚಿಗಷ್ಟೇ ಗೌತಮ ರವರು ತಮ್ಮ ಪತ್ನಿ ಗರ್ಭವತಿ ಆಗಿರುವಂತಹ ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
ಭಾರತಿ ಸಿಂಗ್; ಹಿಂದಿ ಟೆಲಿವಿಜನ್ ವಾಹಿನಿಯ ಬಗ್ಗೆ ಗೊತ್ತಿರುವವರಿಗೆ ಭಾರತ ಸಿಂಗ್ ರವರು ಖಂಡಿತ ಚಿರಪರಿಚಿತರು ಎಂದರೆ ತಪ್ಪಾಗಲಾರದು. ಇನ್ನು ಇತ್ತೀಚಿಗಷ್ಟೆ ತಾವು ಗರ್ಭಿಣಿ ಆಗಿರುವಂತಹ ವಿಚಾರವನ್ನು ಅವರು ಕೂಡ ಹಂಚಿಕೊಂಡಿದ್ದಾರೆ.
ಡಿಂಪಿ ಗಂಗುಲಿ; ಇತ್ತೀಚಿಗಷ್ಟೇ ಡಿಂಪಿ ಗಂಗೂಲಿ ರವರು ತಾವು ಮೂರನೇ ಮಗುವಿಗೆ ತಾಯಿಯಾಗುತ್ತಿದ್ದೇನೆ ಎನ್ನುವುದಾಗಿ ಇಬ್ಬರು ಮಕ್ಕಳ ಜೊತೆಗೆ ಇರುವಂತಹ ಫೋಟೋ ಮೂಲಕ ಹಂಚಿಕೊಂಡಿದ್ದಾರೆ.
ಗುರ್ಮಿತ್ ಚೌದರಿ; ಡೆಬಿನ ಬ್ಯಾನರ್ಜಿಯವರನ್ನು ಗುರ್ಮಿತ್ ಚೌದರಿ ರವರು ಕೆಲವು ಸಮಯಗಳ ಹಿಂದಷ್ಟೇ ಮದುವೆಯಾಗಿದ್ದರು. ವರ್ಷಗಳ ನಂತರ ಈಗ ತಾಯಿಯಾಗುತ್ತಿರುವ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಸಂತೋಷವನ್ನು ನೀಡಿದ್ದಾರೆ.
ಕೃತಿಕ ಸಂಗರ್ ದೀರ್; 2014 ರಲ್ಲಿ ನಿಕಿತಿನ್ ದೀರ್ ರವರನ್ನು ಮದುವೆಯಾಗಿರುವ ಕೃತಿಕಾ ರವರು ಈಗ ಮೊದಲ ಬಾರಿಗೆ ತಾಯಿಯಾಗುತ್ತಿರುವ ಸಂತೋಷವನ್ನು ಇತ್ತೀಚಿಗಷ್ಟೆ ಹಂಚಿಕೊಂಡಿದ್ದಾರೆ.

ಸಂಜನಾ ಗಲ್ರಾಣಿ; ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ನಟಿ ಸಂಜನಾ ಗಲ್ರಾಣಿ ಅವರು ಇತ್ತೀಚಿಗಷ್ಟೆ ವರ್ಕೌಟ್ ಮಾಡುತ್ತಿರಬೇಕಾದರೆ ತಾವು ಗರ್ಭಿಣಿಯಾಗಿರುವ ವಿಚಾರವನ್ನು ಪರೋಕ್ಷವಾಗಿ ಫೋಟೋ ಮೂಲಕವಾಗಿ ಹಂಚಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಕೂಡ ಈ ಕುರಿತಂತೆ ಸಂಜನಾ ಗಲ್ರಾಣಿ ಅವರು ಹೇಳಿ ಕೊಂಡಿದ್ದನ್ನು ನಾವು ನೆನಪಿಸಿಕೊಳ್ಳಬಹುದು ಆಗಿದೆ
ರಿಹಾನ; ಅಮೆರಿಕ ಮೂಲದ ಪಾಪ್ ಗಾಯಕಿ ಆಗಿರುವ ರಿಹಾನಾ ರವರು ಫೋಟೋಗಳಲ್ಲಿ ಆಗಿರುವುದರ ಕುರಿತಂತೆ ಅಧಿಕೃತವಾಗಿ ನೀಡಿರುವ ಹೇಳಿಕೆಗೆ ಬಹಳಷ್ಟು ಸದ್ದಾಗುತ್ತಿದೆ. ಬೇಬಿ ಬಂಪ್ ಫೋಟೋಗಳು ಕೂಡ ವೈರಲ್ ಆಗಿದೆ.
ನತಾಶಾ ಸ್ಕಾಂಕೋವಿಕ್; ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಹಾಗೂ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಆಗಿರುವ ಹಾರ್ದಿಕ್ ಪಾಂಡ್ಯ ರವರ ಪತ್ನಿಯಾಗಿರುವ ನತಾಶ ಎರಡನೇ ಬಾರಿಗೆ ತಾಯಿಯಾಗಲು ಸಜ್ಜಾಗಿದ್ದಾರೆ. ಇದೇ ಕ್ರಿಸ್ಮಸ್ ಸಂದರ್ಭದಲ್ಲಿ ಈ ಕುರಿತಂತೆ ಫೋಟೋವನ್ನು ಹಂಚಿಕೊಂಡಿದ್ದು ವರ್ಷ ತಾಯಿಯಾಗುವ ನಿರೀಕ್ಷೆಯಲ್ಲಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.