ಹೊಸ ವಿಡಿಯೋ ಬಿಡುಗಡೆ: ತಮನ್ನಾ ಹರಿಬಿಟ್ಟ ಬಿಕಿನಿ ವಿಡಿಯೋ ನೋಡಿ ದಂಗಾದ ನೆಟ್ಟಿಗರು, ಪಿಂಕ್ ಡ್ರೆಸ್ ನಲ್ಲಿ ಹೇಗೆಲ್ಲಾ ಪೋಸ್ ನೀಡಿದ್ದಾರೆ ಗೊತ್ತೇ?
ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಟಾಪ್ ನಟಿಯರ ಹೆಸರು ಎಂದರೆ ನಮಗೆ ಮೊದಲು ಕೇಳಿಬರುತ್ತಿದ್ದು ನಯನತಾರಾ ಅನುಷ್ಕಾ ಶೆಟ್ಟಿ ತಮನ್ನಾ ಸಮಂತಾ ಹಾಗೂ ಕಾಜಲ್ ಅಗರ್ವಲ್ ಹೆಸರು. ಆದರೆ ಇತ್ತೀಚಿನ ದಿನಗಳಲ್ಲಿ ಇವರಲ್ಲಿ ಬಹುತೇಕರು ಚಿತ್ರರಂಗದಿಂದ ಪ್ರಾಯಶಹ ವಿಮುಖರಾಗಿದ್ದಾರೆ ಎಂದೇ ಹೇಳಬಹುದಾಗಿದೆ. ಅದರಲ್ಲೂ ಇಂದು ನಾವು ಮಾತನಾಡಲು ಹೊರಟಿರುವುದು ನಟಿ ತಮನ್ನಾ ರವರ ಕುರಿತಂತೆ.
ಭಾರತೀಯ ಚಿತ್ರರಂಗದ ಮಿಲ್ಕಿ ಬ್ಯೂಟಿ ಎಂಬುದಾಗಿ ತಮನ್ನಾ ರವರನ್ನು ಕರೆಯುತ್ತಾರೆ. ತಮನ್ನಾ ರವರಿಗೆ ಯಾವುದೇ ಭಾಷೆಯ ಅಡ್ಡಿ ಇಲ್ಲ. ಇವರು ಬಹುತೇಕ ದಕ್ಷಿಣ ಭಾರತ ಚಿತ್ರರಂಗ ಸೇರಿದಂತೆ ಬಾಲಿವುಡ್ನಲ್ಲಿ ಕೂಡ ನಟಿಸಿ ಬಂದವರು. ಕನ್ನಡದಲ್ಲಿ ಕೂಡ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 1 ಹಾಗೂ ಯುವರಾಜ ನಿಖಿಲ್ ಕುಮಾರ್ ನಟನೆಯ ಜಾಗ್ವಾರ್ ಸಿನಿಮಾದಲ್ಲಿ ಕೂಡ ಐಟಂ ಡಾನ್ಸ್ ನಲ್ಲಿ ಕಾಣಿಸಿಕೊಂಡಿದ್ದರು.
ಆದರೆ ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ ಎನ್ನುವುದು ಅಭಿಮಾನಿಗಳಿಗೆ ಚಿಂತೆಯಾಗಿದೆ. ಕೇವಲ ಸೌಂದರ್ಯದಲ್ಲಿ ಮಾತ್ರವಲ್ಲದೆ ನಟನೆಯಲ್ಲಿ ಕೂಡ ತಮನ್ನಾ ರವರು ಅಪ್ಪಟ ಕಲಾವಿದ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ರಾಜಮೌಳಿ ನಿರ್ದೇಶನದ ಬಾಹುಬಲಿ ಸರಣಿಗಳಲ್ಲಿ ಕೂಡ ತಮನ್ನಾ ರವರು ತಮ್ಮ ಪಾತ್ರವನ್ನು ನಿರ್ವಹಿಸಿದರು. ನಿಮಗೆಲ್ಲ ಗೊತ್ತಿರುವಂತೆ ರಾಜಮೌಳಿಯವರು ಯಾವುದೇ ಕಲಾವಿದರಿಗೂ ಕೂಡ ಅವರ ಜನಪ್ರಿಯತೆ ನೋಡಿ ಅಲ್ಲ ಬದಲಾಗಿ ಅವರ ಪ್ರತಿಭೆಯನ್ನು ನೋಡಿ ಅವರಿಗೆ ಪಾತ್ರವನ್ನು ನೀಡುತ್ತಾರೆ.
ಇದರಲ್ಲಿ ನೀವು ತಿಳಿದುಕೊಳ್ಳಬಹುದಾಗಿದೆ ತಮ್ಮನ ರವರು ಎಷ್ಟು ಪ್ರತಿಭಾವಂತರಾಗಿದ್ದರು ಎಂದು. ಒಂದು ಲೆಕ್ಕದಲ್ಲಿ ಹೇಳುವುದಾದರೆ ತೆಲುಗು ಚಿತ್ರರಂಗದಲ್ಲಿ ಮೆಗಾಸ್ಟಾರ್ ಚಿರಂಜೀವಿ ನಟನೆಯ ಸೈರಾ ನರಸಿಂಹ ರೆಡ್ಡಿ ಅವರ ಕೊನೆಯ ಪ್ರಮುಖ ಚಿತ್ರ ಎಂದರೆ ತಪ್ಪಾಗಲಾರದು. ಅದಾದ ನಂತರ ಹೇಳಿಕೊಳ್ಳುವಷ್ಟು ದೊಡ್ಡಮಟ್ಟದ ಸಿನಿಮಾಗಳಲ್ಲಿ ತಮನ್ನಾ ರವರು ಕಾಣಿಸಿಕೊಂಡಿಲ್ಲ. ಆಗಾಗ ಸಣ್ಣಪುಟ್ಟ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು ಕೆಲವೊಂದು ಸರಣಿಗಳಲ್ಲಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ ಹಾಗೂ ನಿರ್ಮಾಪಕರು ಇತ್ತೀಚಿನ ದಿನಗಳಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಿರುವ ಹೊಸ ಹೊಸ ನಟಿಯರಿಗೆ ಮಣೆ ಹಾಕುತ್ತಿದ್ದಾರೆ. ಇದೇ ಕಾರಣಕ್ಕಾಗಿ ತಮನ್ನಾ ರವರಿಗೆ ಅವಕಾಶಗಳು ಕಡಿಮೆಯಾಗಿವೆ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಹಲವಾರು ವರ್ಷಗಳಿಂದ ಮಂಕಾಗಿ ಕುಳಿತಿದ್ದ ತಮನ್ನಾ ರವರು ಈಗ ತಮ್ಮ ಹೊಸ ಫೋಟೋಗಳ ಮೂಲಕ ಹಾಗೂ ವಿಡಿಯೋಗಳ ಮೂಲಕ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ಹೌದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮಣ್ಣ ಅವರು ತಮ್ಮ ಲೇಟೆಸ್ಟ್ ಫೋಟೋ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡಿಕೊಂಡಿದ್ದಾರೆ.
ಸುಂದರ ಪ್ರವಾಸಿ ತಾಣವಾಗಿರುವ ಮಾಲ್ಡೀವ್ಸ್ ಗೆ ತಮನ್ನಾ ರವರು ಹೋಗಿದ್ದಾರೆ ಎಂಬುದಾಗಿ ಇದರ ಮೂಲಕ ತಿಳಿಯುತ್ತದೆ. ತಮ್ಮ ಪಿಂಕ್ ಕಲರ್ ಬಿಕಿನಿಯಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮನ್ನಾ ರವರು ಹಿಂದಿ ಸಿನಿಮಾ ವಾಗಿರುವ ಬಬ್ಲಿ ಬೌನ್ಸರ್ ಸಿನಿಮಾದ ಮೊದಲ ಶೆಡ್ಯೂಲ್ ಅನ್ನು ತಮನ್ನಾ ರವರು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಕ್ಕ ಬಿಡುವಿನಲ್ಲಿ ಮಾಲ್ಡೀವ್ಸ್ ಗೆ ಬಂದು ತಮನ್ನಾ ರವರು ರಿಲ್ಯಾಕ್ಸ್ ಮೂಡ್ ನಲ್ಲಿ ಕಾಲಕಳೆಯುತ್ತಿದ್ದಾರೆ. ಒಂದು ಕಾಲದಲ್ಲಿ ಬಹುತೇಕ ಎಲ್ಲಾ ಸ್ಟಾರ್ ನಟರ ಸಿನಿಮಾಗಳಲ್ಲಿ ನಾಯಕಿಯಾಗಿ ತಮನ್ನಾ ರವರೇ ಮೊದಲ ಆಯ್ಕೆಯಲ್ಲಿ ಇರುತ್ತಿದ್ದರು. ಇಂದಿಗೂ ಕೂಡ ತಮನ್ನಾ ರವರನ್ನು ಅವರ ಅಭಿಮಾನಿಗಳು ದೊಡ್ಡ ಪರದೆ ಮೇಲೆ ನೋಡಲು ಹಾತೊರೆಯುತ್ತಿದ್ದಾರೆ. ತಮನ್ನಾ ರವರಿಗೆ ಇನ್ನೂ ಹೆಚ್ಚೆಚ್ಚು ಅವಕಾಶಗಳು ದೊರೆಯಲಿ ಎಂಬುದಾಗಿ ಹಾರೈಸೋಣ ಗೆಳೆಯರೇ.