ಮೀಟೂ ಪ್ರಕರಣದ ಬಳಿಕ ಇದ್ದಕ್ಕಿದ್ದ ಹಾಗೆ ಮರೆಯಾಗಿದ್ದ ಸಂಗೀತ ಭಟ್ ಇದೀಗ ಏನು ಮಾಡುತ್ತಿದ್ದಾರೆ ಗೊತ್ತೇ?? ಅಭಿಮಾನಿಗಳಿಗೆ ಸಿಹಿ ಸುದ್ದಿ.

11

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಚಿತ್ರರಂಗ ಎಂದ ಮೇಲೆ ದೊಡ್ಡ ಮಟ್ಟದಲ್ಲಿ ಹೆಸರು ಆಗುವಂತಹ ವಿಚಾರಗಳು ನಡೆಯುವುದೂ ಕಾಮನ್. ಕೆಲವೊಮ್ಮೆ ಪೇಚಿಗೆ ಸಿಲ್ಕು ವಂತಹ ಅಹಿತಕರ ಘಟನೆಗಳು ನಡೆಯುವುದು ಕೂಡ ಸರ್ವೇಸಾಮಾನ್ಯವಾಗಿದೆ. ನಿಮಗೆಲ್ಲ ನೆನಪಿರಬಹುದು ಕೆಲವು ವರ್ಷಗಳ ಹಿಂದೆ ಚಿತ್ರರಂಗದಲ್ಲಿ ಒಂದು ಘಟನೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು.

ಇದು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಸದ್ದು ಮಾಡಿತ್ತು ಎಂದರೆ ತಪ್ಪಾಗಲಾರದು. ಹೌದು ಮಾತನಾಡುತ್ತಿರುವುದು ಮೀಟು ಪ್ರಕರಣದ ಕುರಿತಂತೆ. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಲ್ಲಿ ಕೂಡ ಹಲವಾರು ನಟಿಯರು ತಮಗೆ ಆದಂತಹ ಅನ್ಯಾಯದ ವಿರುದ್ಧ ಧ್ವನಿಯೆತ್ತಿದ್ದರು. ಇದು ಎಷ್ಟರ ಮಟ್ಟಿಗೆ ನಿಜ ಹಾಗೂ ಸುಳ್ಳು ಎನ್ನುವುದರ ಕುರಿತಂತೆ ಇಂದು ಕೂಡ ಸರಿಯಾದ ಪುರಾವೆ ಎನ್ನುವುದು ಸಿಕ್ಕಿಲ್ಲ. ಅದರ ಕುರಿತಂತೆ ಮಾತನಾಡುವುದು ಬೇಡ ಆದರೆ ಆ ಸಮಯದಲ್ಲಿ ಯಾರೆಲ್ಲಾ ಸದ್ದು ಮಾಡಿದ್ದು ಎನ್ನುವುದು ನಿಮಗೆಲ್ಲ ತಿಳಿದಿರಬಹುದು.

ಅದರಲ್ಲಿ ಪ್ರಮುಖವಾಗಿ ಇಬ್ಬರು ನಟಿಯರು ದೊಡ್ಡಮಟ್ಟದಲ್ಲಿ ಸೌಂಡ್ ಮಾಡಿದ್ದರು. ಹೌದು ನಾವು ಮಾತನಾಡುತ್ತಿರುವುದು ಶ್ರುತಿ ಹರಿಹರನ್ ಹಾಗೂ ಸಂಗೀತ ಭಟ್ ಅವರ ಕುರಿತಂತೆ. ಅದರಲ್ಲೂ ಈ ಲೇಖನಿಯಲ್ಲಿ ನಿಮಗೆ ವಿವರಿಸಲು ಹೊರಟಿರುವುದು ಸಂಗೀತ ಭಟ್ ಅವರ ಕುರಿತಂತೆ.

ಸಂಗೀತ ಭಟ್ ರವರು ಗುರುಪ್ರಸಾದ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಗೂ ಡಾಲಿ ಧನಂಜಯ್ ನಾಯಕ ನಟನಾಗಿ ನಟಿಸಿರುವ ಎರಡನೇಸಲ ಚಿತ್ರದಲ್ಲಿ ನನ್ನನ್ನು ಬಲವಂತವಾಗಿ ಅರೆನಗ್ನ ದೃಶ್ಯಗಳಲ್ಲಿ ನಟಿಸುವಂತೆ ಒತ್ತಾಯಿಸಲಾಗಿತ್ತು ಎಂಬುದರ ಕುರಿತಂತೆ ಮೀಟು ಗಲಾ’ಟೆಯ ಸಂದರ್ಭದಲ್ಲಿ ಹೇಳಿಕೊಂಡು ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದರು. ಇದಾದನಂತರ ಸಂಗೀತ ಭಟ್ ರವರು ಕೊನೆಯದಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ದಯವಿಟ್ಟು ಗಮನಿಸಿ ಚಿತ್ರದಲ್ಲಿ.

ಈ ಚಿತ್ರದ ನಂತರ ಸಂಗೀತಾ ಭಟ್ ರವರು ಅಷ್ಟೊಂದು ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇದಾದ ನಂತರ ಬಹುತೇಕ ಎಲ್ಲರೂ ಬೇರೆ ನಟಿಯರಂತೆ ಸಿನಿಮಾರಂಗದಿಂದ ಸಂಗೀತ ಭಟ್ ರವರು ದೂರವಾಗುತ್ತಾರೆ ಎಂಬುದಾಗಿ ಅಂದುಕೊಂಡಿದ್ದರು. ಆದರೆ ಎಲ್ಲರ ಊಹೆಗಳನ್ನು ಸಂಗೀತ ಭಟ್ ರವರು ಹುಸಿ ಮಾಡಿದ್ದಾರೆ. ಹೌದು ಈಗ ಮತ್ತೊಮ್ಮೆ ನಾಯಕ ನಟಿಯಾಗಿ ಸಂಗೀತ ಭಟ್ ಚಿತ್ರರಂಗಕ್ಕೆ ಮರು ಪಾದಾರ್ಪಣೆ ಮಾಡಿದ್ದಾರೆ ಎಂಬುದಾಗಿ ಹೇಳಬಹುದಾಗಿದೆ.

ಸಿನಿಮಾರಂಗದಿಂದ ದೂರವಿದ್ದರೂ ಕೂಡ ಸಂಗೀತ ಬಡವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯರಾಗಿದ್ದರು. ದೈನಂದಿನ ಆಗುಹೋಗುಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಸೋಶಿಯಲ್ ವಿಡಿಯೋ ಮುಖಾಂತರ ಹಂಚಿಕೊಳ್ಳುತ್ತಿದ್ದರು. ಇದೇ ಸೋಶಿಯಲ್ ಮೀಡಿಯಾ ಮುಖಾಂತರ ತಮ್ಮ ಮುಂದಿನ ಚಿತ್ರದ ಕುರಿತಂತೆ ಕೂಡ ಹಂಚಿಕೊಂಡಿದ್ದಾರೆ. ಸಂಗೀತ ಭಟ್ ಅವರು ನಾಯಕಿಯಾಗಿ ನಟಿಸುತ್ತಿರುವ ಮುಂದಿನ ಚಿತ್ರದ ಹೆಸರು ರೂಪಾಂತರ ಎನ್ನುವುದಾಗಿ ಇದನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಹೇಳಿಕೊಂಡಿದ್ದಾರೆ.

ಈ ಚಿತ್ರದಲ್ಲಿ ಸಂಗೀತಾ ಭಟ್ ರವರಿಗೆ ನಾಯಕನಾಗಿ ಬಹುಭಾಷ ತಾರೆಯಾಗಿರುವ ಕನ್ನಡದ ಹೆಮ್ಮೆಯ ನಟ ಕಿಶೋರ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ನನ್ನ ಕಂಬ್ಯಾಕ್ ಮೂವಿ ಆಗಿರುವ ರೂಪಾಂತರ ಚಿತ್ರದ ಕುರಿತಂತೆ ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಖುಷಿಯಾಗುತ್ತಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಳನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನನ್ನ ಮೊದಲ ಪ್ರೀತಿ ಯಾಗಿರುವ ಸಿನಿಮಾದಿಂದ ದೂರ ಉಳಿಯುವುದು ನನಗೂ ಕೂಡ ಕಷ್ಟವಾಗಿತ್ತು ಈಗ ನಾನು ಮತ್ತೆ ವಾಪಸ್ ಆಗಿದ್ದೇನೆ ಎಂಬುದಾಗಿ ಹಂಚಿಕೊಂಡಿದ್ದಾರೆ. ಈ ಚಿತ್ರ ಸಂಗೀತಾ ಭಟ್ ರವರ ಸಿನಿಮಾ ಕರಿಯರ್ ನಲ್ಲಿ ಯಾವ ಮಟ್ಟಿಗೆ ತಿರುವನ್ನು ನೀಡುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

Get real time updates directly on you device, subscribe now.