ಕೊನೆಗೂ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಸಮಂತಾ, ಹಲವು ದಿನಗಳ ಕನಸು ನನಸು, ಸಮಂತಾ ಜೊತೆ ಇರುವ ಈ ಫಾರಿನರ್ ನಿಜಕ್ಕೂ ಯಾರು ಗೊತ್ತೇ??

9

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿದ್ದ ಸಮಂತಾ ರವರು ತಮ್ಮ ಸಿನೆಮಾಗಳಿಗಾಗಿ ಸುದ್ದಿ ಆಗುತ್ತಿದ್ದರು. ಇತ್ತೀಚಿನ ಸಮಯಗಳಲ್ಲಿ ಸಮಂತ ಅವರು ತಮ್ಮ ವೈಯಕ್ತಿಕ ಜೀವನದ ಕಾರಣಕ್ಕಾಗಿ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾರೆ. ವಿವಾಹ ವಿಚ್ಛೇದನ ಪಡೆದುಕೊಂಡ ದಿನದಿಂದಲೂ ಕೂಡ ಒಂದಲ್ಲ ಒಂದು ಕಾರಣಕ್ಕಾಗಿ ಸಂಬಂಧ ಸುದ್ದಿಯಾಗುತ್ತಲೇ ಇದ್ದಾರೆ. ಸೆಲೆಬ್ರಿಟಿ ಎಂದಮೇಲೆ ಇದನ್ನೆಲ್ಲ ಸಹಿಸಿಕೊಳ್ಳಲೇಬೇಕು.

ಹಲವಾರು ವಿಚಾರಗಳಿಗಾಗಿ ಸಕಾರಾತ್ಮಕವಾಗಿ ಸುದ್ದಿ ಆದರೆ ಇನ್ನು ಕೆಲವು ವಿಚಾರಗಳಿಗಾಗಿ ನಕಾರಾತ್ಮಕವಾಗಿ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದ್ದಾರೆ ನಟಿ ಸಮಂತ ರವರು. ಆದರೆ ಈಗ ನಟಿ ಸಮಂತಾ ರವರು ಬೇರೆಯದೇ ಕಾರಣಕ್ಕಾಗಿ ಸುದ್ದಿಯಾಗುತ್ತಿದ್ದಾರೆ. ಈ ಹಿಂದೆ ಗ್ಲಾಮರಸ್ ಬಟ್ಟೆಗಳನ್ನು ಧರಿಸಿ ಕೆಲವೊಂದು ಅಭಿಮಾನಿಗಳಿಗೆ ಅದು ಇಷ್ಟವಾಗದೆ ಅವರು ನೀಡುವ ಕೆಟ್ಟ ಕಾಮೆಂಟ್ ಗಳಿಗೆ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸುವ ಮೂಲಕ ಸುದ್ದಿ ಆಗುತ್ತಿದ್ದರು. ಆದರೆ ಈಗ ನಟಿ ಸಮಂತಾ ರವರ ಫೋಟೋ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ.

ಇದೇನಪ್ಪಾ ಸಮಂತ ರವರ ಫೋಟೋ ಸುದ್ದಿ ಮಾಡೋದು ಮಾಮೂಲಿ ಎಂಬುದಾಗಿ ನೀವು ಅಂದುಕೊಳ್ಳಬಹುದು. ಆದರೆ ಸಮಂತಾ ರವರ ಜೊತೆಗೆ ವ್ಯಕ್ತಿ ಯಾರು ಎನ್ನುವ ಕುರಿತಂತೆ ಈಗ ಸಂಚಲನ ಸೃಷ್ಟಿಯಾಗಿರುವುದು. ಇತ್ತೀಚಿಗಷ್ಟೇ ಸಮಂತ ರವರು ಹಲವಾರು ವರ್ಷಗಳ ಕಾಲ ಪ್ರೀತಿಸಿ ನಾಲ್ಕು ವರ್ಷಗಳ ಕಾಲ ದಾಂಪತ್ಯ ಜೀವನವನ್ನು ನಡೆಸಿರುವ ನಾಗಚೈತನ್ಯ ರವರಿಗೆ ವಿವಾಹ ವಿಚ್ಛೇದನವನ್ನು ನೀಡಿದ್ದಾರೆ. ಇದಕ್ಕೆ ನಿಜವಾದ ಕಾರಣ ಏನು ಎನ್ನುವುದು ಇನ್ನೂ ಕೂಡ ತಿಳಿದುಬಂದಿಲ್ಲ.

ಇದರ ಮಧ್ಯದಲ್ಲಿ ಸಮಂತ ರವರು ವಿದೇಶಿಗಳು ಒಬ್ಬರೊಂದಿಗೆ ಫೋಟೋದಲ್ಲಿ ವೈರಲ್ ಆಗುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಕೂಡ ಎಡೆಮಾಡಿಕೊಟ್ಟಿದೆ. ಕೆಲವರು ಇದು ಸಮಂತಾ ರವರ ಹೊಸ ಬಾಯ್ಫ್ರೆಂಡ್ ಎನ್ನುವುದಾಗಿ ಆಡಿಕೊಂಡಿದ್ದಾರೆ. ಇದಕ್ಕೆ ಹಲವಾರು ಗುಮಾನಿಗಳು ಕೂಡ ಸೋಶಿಯಲ್ ಮೀಡಿಯಾ ಗಳಲ್ಲಿ ಎದ್ದಿವೆ. ಆದರೆ ನಿಜವಾದ ವಿಚಾರ ಬೇರೆನೆ ಇದೆ. ಹೌದು ಅವರು ಸಮಂತಾ ರವರ ಬಾಯ್ ಫ್ರೆಂಡ್ ಅಲ್ಲ. ಹಾಗಿದ್ದರೆ ಯಾರು ಅನ್ನೋದು ನಿಮ್ಮ ಅನುಮಾನ ಆಗಿರಬಹುದು.

ಅವರು ಇನ್ಯಾರೂ ಅಲ್ಲ ಸಮಂತ ರವರ ಮುಂದಿನ ಸಿನಿಮಾ ಯಶೋಧ ದ ಸಾಹಸ ನಿರ್ದೇಶಕ ಆಗಿರುವ ಯನ್ನಿಕ್ ಬೆನ್. ಇದುವರೆಗೂ ಬೆನ್ ರವರು ಹಾಲಿವುಡ್ ಸಿನಿಮಾಗಳಲ್ಲಿ ಕೂಡ ಸಾಹಸ ನಿರ್ದೇಶನ ಮಾಡಿದ್ದಾರೆ. ಇನ್ನು ಭಾರತದ ಜನಪ್ರಿಯ ಸಿನಿಮಾ ಗಳಾಗಿರುವ ಅತ್ತಾರಿಂಟಿಕಿ ದಾರೇದಿ ಟೈಗರ್ ಜಿಂದಾ ಹೆ ರಯೀಸ್ ಗಳಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಇಷ್ಟು ಮಾತ್ರವಲ್ಲ ಇತ್ತೀಚಿಗಷ್ಟೇ ದೊಡ್ಡಮಟ್ಟದಲ್ಲಿ ಸೂಪರ್ ಹಿಟ್ ಆಗಿರುವ ಸಮಂತ ನಟನೆಯ ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯ ಸಾಹಸ ನಿರ್ದೇಶಕನಾಗಿ ಕೂಡ ಕೆಲಸ ಮಾಡಿದ್ದಾರೆ.

ಯಶೋಧಾ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು ಚಿತ್ರ ಥ್ರಿಲ್ಲರ್ ಮಾದರಿಯ ಸಿನಿಮಾವಾಗಿದೆ. ಮಹಿಳಾ ಪ್ರಾಧಾನ್ಯತೆ ಹೊಂದಿರುವ ಸಿನಿಮಾ ವಾಗಿದ್ದು ಸಮಂತ ರವರ ಸಿನಿಮಾ ಕರಿಯರ್ ಗೆ ದೊಡ್ಡಮಟ್ಟದ ತಿರುವು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಮಂತ ರವರು ಈಗಾಗಲೇ ಹಲವಾರು ಸಿನಿಮಾಗಳಿಗೆ ಸಹಿ ಕೂಡ ಹಾಕಿದ್ದು ಅಭಿಮಾನಿಗಳು ಅವರನ್ನು ಮತ್ತೊಮ್ಮೆ ದೊಡ್ಡ ಪರದೆ ಮೇಲೆ ನೋಡಲು ಕಾತರರಾಗಿದ್ದಾರೆ. ನಟಿ ಸಮಂತಾ ರವರ ಕುರಿತಂತೆ ನಿಮಗಿರುವ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.