ನಮ್ಮಲ್ಲಿ ಮಾತ್ರ: ಅಪ್ಪನ ಚಿತ್ರದಲ್ಲಿಯೇ ಪಾದಾರ್ಪಣೆ, ಮಹೇಶ್ ಸಿನಿಮಾದಲ್ಲಿ ಡಾನ್ಸ್ ಮಾಡಿದ ಮಗಳು ಸಿತಾರಾ. ಹೇಗಿದೆ ಗೊತ್ತೇ ಮಸ್ತ್ ಡಾನ್ಸ್??

72

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಮಹೇಶ್ ಬಾಬು ರವರ ಮುಂದಿನ ಸಿನಿಮಾ ಸರ್ಕಾರು ವಾರಿ ಪಾಠ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ‌. ಹಲವಾರು ವರ್ಷಗಳ ನಂತರ ಮತ್ತೊಮ್ಮೆ ಮಹೇಶ್ ಬಾಬು ರವರು ತಮ್ಮ ಹಳೆಯ ಲುಕ್ಕಿನಲ್ಲಿ ಬರುತ್ತಿರುವುದು ಅಭಿಮಾನಿಗಳಿಗೆ ಇನ್ನಷ್ಟು ಎಕ್ಸೈಟ್ಮೆಂಟ್ ನೀಡುತ್ತಿದೆ. ಇನ್ನು ಈ ಚಿತ್ರದಲ್ಲಿ ಮಹೇಶ್ ಬಾಬು ರವರಿಗೆ ನಾಯಕಿಯಾಗಿ ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆಯ ನಾಯಕ ನಟಿಯಾಗಿರುವ ಕೀರ್ತಿ ಸುರೇಶ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ಈಗಾಗಲೆ ಚಿತ್ರದ ಮೊದಲ ಸಾಂಗ್ ಆಗಿರುವ ಕಲಾವತಿ ಸಾಂಗ್ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಂಡಿದೆ. ಇನ್ನು ಎರಡನೇ ಸಾಂಗ್ ಕೂಡ ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದು ಅದು ಕೂಡ ವಿಶೇಷ ಕಾರಣಕ್ಕಾಗಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮಹೇಶ್ ಬಾಬು ರವರು ಮದುವೆಯಾಗಿರುವುದು ಖ್ಯಾತ ಚಿತ್ರನಟಿ ಯಾಗಿರುವ ನಮೃತ ಶಿರೊಡ್ಕರ್ ರವರನ್ನು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅದರಲ್ಲಿ ಸಿತಾರ ಘಟ್ಟಿಮನೇನಿ ಎನ್ನುವ ಹೆಣ್ಣುಮಗಳು ಕೂಡ ಇದ್ದಾರೆ.

ಮಹೇಶ್ ಬಾಬುರವರ ಸರ್ಕಾರು ವಾರಿ ಪಾಠ ಚಿತ್ರದ ಎರಡನೇ ಸಾಂಗ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದಕ್ಕೂ ಕೂಡ ಮಹೇಶ್ ಬಾಬುರವರ ಮಗಳೇ ಕಾರಣ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಹೌದು ಚಿತ್ರದ ಎರಡನೇ ಸಾಂಗ್ ಆಗಿರುವ ಪೆನ್ನಿ ಸಾಂಗ್ ಬಿಡುಗಡೆಯಾಗಿದ್ದು ಈ ಸಾಂಗ್ನಲ್ಲಿ ಮಹೇಶ್ ಬಾಬುರವರ ಮಗಳಾಗಿರುವ ಸಿತಾರ ತಂದೆಯನ್ನೇ ಮೀರಿಸುವಂತೆ ಸಕತ್ತಾಗಿದೆ ಸ್ಟೆಪ್ ಹಾಕಿದ್ದಾರೆ. ಈಗಾಗಲೇ ಈ ಹಾಡು ಮಿಲಿಯನ್ ಗಟ್ಟಲೆ ವೀಕ್ಷಣೆಗಳನ್ನು ಪಡೆದು ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಮಹೇಶ್ ಬಾಬುರವರ ಮಗಳು ಚಿತ್ರರಂಗದಲ್ಲಿ ಕಾಣಿಸಿಕೊಂಡರು ಕೂಡ ಅಚ್ಚರಿಪಡಬೇಕಾಗಿಲ್ಲ ಎನ್ನುವ ಮುನ್ಸೂಚನೆಯನ್ನು ನೀಡಿದೆ. ಈ ಹಾಡಿನ ಹಾಗೂ ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Get real time updates directly on you device, subscribe now.