ಎಲ್ಲಾ ಗಾಳಿ ಸುದ್ದಿಗಳಿಗೆ ಬ್ರೇಕ್, ಕೊನೆಗೂ ಬಯಲಾಯಿತು ಅಧಿಕೃತ ಕಲೆಕ್ಷನ್, ಜೇಮ್ಸ್ ಒಟ್ಟಾರೆಯಾಗಿ ಗಳಿಸಿದ್ದು ಎಷ್ಟು ಗೊತ್ತೇ??

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನದ ಶುಭ ಸಂದರ್ಭದಲ್ಲಿ ಅಂದರೆ ಮಾರ್ಚ್ 17ರಂದು ವಿಶ್ವಾದ್ಯಂತ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿರುವ ಜೇಮ್ಸ್ ಚಿತ್ರ ನಿರೀಕ್ಷೆಗೂ ಮೀರಿ ಜನರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಮಾರ್ಚ್ 16ರ ಮಧ್ಯರಾತ್ರಿಯಿಂದಲೇ ಪ್ರಾರಂಭವಾಗಿ ಇಂದಿನವರೆಗೂ ಎಡೆಬಿಡದೆ ಹೌಸ್ಫುಲ್ ಪ್ರದರ್ಶನಗಳನ್ನು ಕಾಣುತ್ತಿದೆ. ಖಂಡಿತವಾಗಿ ಪುನೀತ್ ರಾಜಕುಮಾರ್ ರವರಿಗೆ ಇದೊಂದು ಒಳ್ಳೆಯ ಗೌರವ ಸಂದಾಯ ಎಂದರೆ ತಪ್ಪಾಗಲಾರದು.

ತಮ್ಮ ನೆಚ್ಚಿನ ನಟನನ್ನು ಕೊನೆಯ ಬಾರಿಗೆ ದೊಡ್ಡ ಪರದೆ ಮೇಲೆ ನೋಡುವಂತಹ ಸೌಭಾಗ್ಯ ಒದಗಿಬಂದಿದೆ ಎಂಬ ಖುಷಿಯಿಂದಲೇ ಎಲ್ಲರೂ ಕೂಡ ಕುಟುಂಬಸಮೇತರಾಗಿ ಚಿತ್ರಮಂದಿರಗಳಲ್ಲಿ ಚಿತ್ರವನ್ನು ವೀಕ್ಷಿಸಿದ್ದಾರೆ. ಜೇಮ್ಸ್ ಚಿತ್ರ ಈಗಾಗಲೇ ಹಲವಾರು ವಿಚಾರಗಳಿಗಾಗಿ ಪ್ರೇಕ್ಷಕರಲ್ಲಿ ವಿಶಿಷ್ಠ ಸ್ಥಾನವನ್ನು ಪಡೆದುಕೊಂಡಿದೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ಎನ್ನುವ ಎಮೋಷನ್ ಕೂಡ ಇಲ್ಲಿ ಚಿತ್ರವನ್ನು ದೊಡ್ಡಮಟ್ಟದ ಸಂಖ್ಯೆಯಲ್ಲಿ ಪ್ರೇಕ್ಷಕರು ಬಂದು ಸಿನಿಮಾವನ್ನು ನೋಡುವಂತೆ ಮಾಡಿದೆ. 88 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಜನರು ಬಂದು ಸಿನಿಮಾವನ್ನು ವೀಕ್ಷಿಸಿರುವ ದಾಖಲೆ ಈಗ ಜೇಮ್ಸ್ ಚಿತ್ರದ ಹೆಸರಿನಲ್ಲಿ ರಿಜಿಸ್ಟರ್ ಆಗಿದೆ. ಇನ್ನು ಕಲೆಕ್ಷನ್ ವಿಚಾರದಲ್ಲಿ ಕೂಡ ಚಿತ್ರ ಹಿಂದೆ ಬಿದ್ದಿಲ್ಲ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ನಾಯಕನಟನಾಗಿ ನಟಿಸಿದ್ದರೆ ಅವರಿಗೆ ನಾಯಕಿಯಾಗಿ ಪ್ರಿಯ ಆನಂದ್ ರವರು ಕಾಣಿಸಿಕೊಂಡಿದ್ದಾರೆ. ಚಿತ್ರ ಬಹದ್ದೂರ್ ಚೇತನ್ ರವರ ನಿರ್ದೇಶನದಲ್ಲಿ ಸೊಗಸಾಗಿ ಮೂಡಿಬಂದಿದೆ. ಚಿತ್ರಕ್ಕೆ ನಿರ್ಮಾಪಕನಾಗಿ ಕಿಶೋರ್ ಪತ್ತಿಕೊಂಡ ರವರು ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಪರಭಾಷಾ ಚಿತ್ರರಂಗದ ಖ್ಯಾತ ನಟರಾಗಿರುವ ಆದಿತ್ಯ ಮೆನನ್ ಶರತ್ ಕುಮಾರ್ ಶ್ರೀಕಾಂತ್ ಮುಂತಾದವರು ನಟಿಸಿದ್ದಾರೆ. ಇನ್ನು ರಂಗಾಯಣ ರಘು ಸಾಧು ಕೋಕಿಲ ಚಿಕ್ಕಣ್ಣ ಶೈನ್ ಶೆಟ್ಟಿ ತಿಲಕ್ ಮುಂತಾದ ಕನ್ನಡ ಚಿತ್ರರಂಗದ ಖ್ಯಾತನಾಮರು ಕೂಡ ಕಾಣಿಸಿಕೊಂಡಿದ್ದಾರೆ.

ಇನ್ನು ನಿರ್ಮಾಪಕರೇ ಖುದ್ದಾಗಿ ಮೊದಲ ದಿನವೇ ಥಿಯೇಟರ್ ಕಲೆಕ್ಷನ್ ಟಿವಿ ರೈಟ್ಸ್ ಸೆಟಲೈಟ್ ಸೇರಿದಂತೆ ಬರೋಬ್ಬರಿ 100 ಕೋಟಿ ರೂಪಾಯಿ ಸಿನಿಮಾ ಗಳಿಸಿದೆ ಎಂಬುದಾಗಿ ಅಧಿಕೃತವಾಗಿ ಹೇಳಿದ್ದರು. ಥಿಯೇಟರ್ ಕಲೆಕ್ಷನ್ ಲೆಕ್ಕಚಾರ ಮಾಡುವುದಾದರೆ ಮೊದಲ ದಿನ ಬರೋಬ್ಬರಿ 30 ಕೋಟಿ ರೂಪಾಯಿ ಗಳಿಸಿತ್ತು. ಎರಡನೇ ದಿನ 18 ಕೋಟಿ ರೂಪಾಯಿ ಗಳಿಸಿತ್ತು. ಮೂರನೇ ದಿನ ಕೊಂಚ ಕಡಿಮೆ ಎಂದರೆ 9 ಕೋಟಿ ರೂಪಾಯಿ ಗಳಿಸಿತ್ತು. ಅಂದರೆ ಒಟ್ಟು ಮೂರು ದಿನದಲ್ಲಿ ಬರೋಬರಿ ನೆಟ್ 57 ಕೋಟಿ ರೂಪಾಯಿ ಅನ್ನು ಚಿತ್ರ ಗಳಿಸಿದೆ.

ವಾರಂತ್ಯದ ಒಳಗೆ ನೂರು ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಕಲೆ ಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಕೂಡ ಹೇಳಲಾಗಿದೆ. ಈಗಾಗಲೇ ಬಾಕ್ಸಾಫೀಸ್ ನಲ್ಲಿ ಜೇಮ್ಸ್ ಚಿತ್ರ ನೂರು ಕೋಟಿ ರೂಪಾಯಿ ಹಾಕಿದೆ ಎನ್ನುವುದು ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿಯಾಗಿದೆ. ಜೇಮ್ಸ್ ಚಿತ್ರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ ಹಾಗೂ ಚಿತ್ರವನ್ನು ತಪ್ಪದೇ ಚಿತ್ರಮಂದಿರಗಳಲ್ಲಿ ವೀಕ್ಷಿಸಿ.

ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಕೊನೆಯ ಸಿನಿಮಾ ವಾಗಿರುವ ಜೇಮ್ಸ್ ಚಿತ್ರವನ್ನು ವಿಮರ್ಶಿಸುವ ಬದಲು ಅವರ ಕೊನೆಯ ಸಿನಿಮಾ ನೋಡುವುದಕ್ಕೆ ಸಿಗುತ್ತಿರುವುದು ನಮ್ಮ ಅದೃಷ್ಟ ಎಂಬುದಾಗಿ ತಿಳಿದು ಆನಂದಿಸುತ್ತಾ ಸಿನಿಮಾವನ್ನು ನೋಡುವುದು ಉತ್ತಮ. ಸಾಧ್ಯವಾದರೆ ನಿಮ್ಮವರಿಗೂ ಕೂಡ ಚಿತ್ರವನ್ನು ನೋಡಲು ಸಲಹೆ ನೀಡಿ.

Get real time updates directly on you device, subscribe now.