ಕೊನೆಗೂ ಬಹಿರಂಗವಾಯಿತು ಜೇಮ್ಸ್ ಚಿತ್ರದ 2 ನೇ ದಿನದ ಕಲೆಕ್ಷನ್, ಎರಡನೇ ದಿನ ಕಡಿಮೆಯಾಗಿ ಕಲೆಕ್ಷನ್ ಮಾಡಿದ್ದು ಎಷ್ಟು ಗೊತ್ತೇ??
ನಮಸ್ಕಾರ ಸ್ನೇಹಿತರೇ ರಾಜ್ಯಾದ್ಯಂತ ಪ್ರತಿಯೊಂದು ವಿಭಾಗದಲ್ಲಿ ನೋಡಿದರೂ ಕೂಡ ಪ್ರತಿಯೊಂದು ಚಿತ್ರಮಂದಿರಗಳಲ್ಲಿ ಚಿತ್ರದ ಹವಾ ದೊಡ್ಡ ಮಟ್ಟದಲ್ಲಿ ಬೀಸುತ್ತಿದೆ. ಇದು ನಿಜಕ್ಕೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮೇಲೆ ಕನ್ನಡಿಗರು ಇಟ್ಟಂತಹ ಪ್ರೀತಿಯ ಪ್ರತೀಕ ಎಂದರೆ ತಪ್ಪಾಗಲಾರದು.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೇವಲ ಒಬ್ಬ ನಟನಾಗಿ ಮಾತ್ರವಲ್ಲದೆ ಎಲ್ಲರೂ ಮೆಚ್ಚುವಂತಹ ಒಬ್ಬ ವ್ಯಕ್ತಿತ್ವ ಹಾಗೂ ವ್ಯಕ್ತಿಯಾಗಿ ಜನರ ಪ್ರೀತಿಗೆ ಪಾತ್ರರಾದವರು. ಮೊದಲ ದಿನವೇ ಜೇಮ್ಸ್ ಚಿತ್ರ ಮಧ್ಯರಾತ್ರಿಯಿಂದ ಪ್ರಾರಂಭವಾಗಿ ಎಲ್ಲಾ ಕಡೆಗಳಲ್ಲಿ ದಾಖಲೆಯ ಪ್ರದರ್ಶನಗಳನ್ನು ಕಂಡಿತ್ತು. ಮೊದಲ ದಿನವೇ ಕೇವಲ ಕರ್ನಾಟಕದಲ್ಲಿ 30 ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಗಳಿಗೆ ಮಾಡುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಚಿತ್ರ ಅದನ್ನು ಸಾಧಿಸಿ ತೋರಿಸಿತ್ತು.
ಈಗಾಗಲೇ ನಿರ್ಮಾಪಕರು ಹೇಳಿರುವಂತೆ ಮೊದಲ ದಿನವೇ ಟಿವಿ ಹಾಗೂ ಡಿಜಿಟಲ್ ಹಕ್ಕುಗಳನ್ನು ಸೇರಿಸಿ ಥಿಯೇಟರ್ ಕಲೆಕ್ಷನ್ ಕೂಡ ಸೇರಿಸಿದರೆ ನೂರು ಕೋಟಿ ಗಡಿಯನ್ನು ಈಗಾಗಲೇ ಚಿತ್ರ ದಾಟಿದೆ ಎಂಬುದಾಗಿ ಹೇಳಿದ್ದಾರೆ. ಹಾಗಿದ್ದರೆ 2ನೇ ದಿನ ಚಿತ್ರ ಗಳಿಸಿರುವ ಗಳಿಕೆ ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ. ಹೌದು ಮೊದಲ ದಿನದ ದಾಖಲೆಯ ಕಲೆಕ್ಷನ್ ನಂತರ ಎರಡನೇ ದಿನವೂ ಕೂಡ ಜೇಮ್ಸ್ ಚಿತ್ರ ಬರೋಬ್ಬರಿ 18 ಕೋಟಿ ರೂಪಾಯಿಗಳನ್ನು ಕರ್ನಾಟಕ ರಾಜ್ಯದಲ್ಲಿ ಗಳಿಸಿದೆ. ಈ ವಾರಾಂತ್ಯದಲ್ಲಿ ಖಂಡಿತ ಚಿತ್ರ ನೂರು ಕೋಟಿ ರೂಪಾಯಿ ಬಾಕ್ಸಾಫೀಸ್ ಗಳಿಕೆ ದಾಟುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವುದಾಗಿ ಸಿನಿಮಾ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ನೀವು ಕೂಡ ತಪ್ಪದೆ ಜೇಮ್ಸ್ ಚಿತ್ರವನ್ನು ನಿಮ್ಮ ಕುಟುಂಬಸಮೇತರಾಗಿ ವೀಕ್ಷಿಸಿ.