ಅಪ್ಪು ತೀರಿಕೊಂಡ ಮೇಲು ಅಪ್ಪು ಸಹಾಯವನ್ನು ಮರೆಯದ ನಂದಿನಿ (ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಳಿ) ಏನು ಮಾಡುತ್ತಿದ್ದಾರೆ ಗೊತ್ತೇ??

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮೊದಲಿನಿಂದಲೂ ಕೂಡ ಅವಾರ್ಡ್ ಗಾಗಿ ಕೆಲಸ ಮಾಡಿದವರಲ್ಲ ಆದರೂ ಕೂಡ ಅವಾರ್ಡ್ ಗಳು ಅವರನ್ನು ಹುಡುಕಿಕೊಂಡು ಬರುತ್ತಿದ್ದರು. ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಸಾಮಾಜಿಕ ಕಾರ್ಯಗಳ ಮೂಲಕವೂ ಕೂಡ ಅಪ್ಪು ರವರು ಎಲ್ಲರ ನೆಚ್ಚಿನ ವ್ಯಕ್ತಿತ್ವ ಆಗಿದ್ದರು. ನಿಮಗೆ ತಿಳಿದಿರಬಹುದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸರ್ಕಾರಿ ಜಾಹಿರಾತುಗಳಲ್ಲಿ ಎಂದು ಕೂಡ ಸಂಭಾವನೆ ಪಡೆದುಕೊಂಡು ಕೆಲಸ ಮಾಡಿದವರಲ್ಲ.

ಅದರಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಂದಿನಿ ಅಂದರೆ ಕರ್ನಾಟಕ ಹಾಲು ಉತ್ಪಾದಕರ ಸಂಘದ ಜಾಹೀರಾತಿನಲ್ಲಿ ಕೂಡ ಒಂದು ರೂಪಾಯಿ ಸಂಭಾವನೆ ಪಡೆಯದೆ ಉಚಿತವಾಗಿ ಸಹಕಾರ ನೀಡುತ್ತಿದ್ದರು. ಇದು ನಿಜಕ್ಕೂ ಕೂಡ ಎಲ್ಲರೂ ಮೆಚ್ಚುವಂತಹ ವಿಚಾರ. ಇನ್ನು ಈಗಾಗಲೇ ನಿಮಗೆ ತಿಳಿದಿರುವಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಮರಣದ ನಂತರ ರಾಜ್ಯ ಸರ್ಕಾರದಿಂದ ರಾಜ್ಯದ ಅತ್ಯುನ್ನತ ಪ್ರಶಸ್ತಿಯಾಗಿರುವ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಗೌರವ ಕೂಡ ದೊರಕಿದೆ. ಈಗಾಗಲೇ ಬಸವಶ್ರೀ ಪ್ರಶಸ್ತಿ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ದಾಖಲಾಗಿದೆ.

ಇಷ್ಟು ವರ್ಷಗಳಿಂದ ಕೆಎಂಎಫ್ ಸಂಸ್ಥೆಯ ಹಾಲು ಉತ್ಪನ್ನಗಳ ಜಾಹೀರಾತಿನಲ್ಲಿ ಉಚಿತವಾಗಿ ನಟಿಸಿದ್ದಕ್ಕೆ ಕೆಎಂಎಫ್ ಕೂಡ ಪುನೀತ್ ರಾಜಕುಮಾರ್ ರವರಿಗೆ ಗೌರವವನ್ನು ಸಲ್ಲಿಸಲು ಮುಂದಾಗಿದೆ. ಹೌದು ಸಹಕಾರ ಸಚಿವರಾಗಿರುವ ಸೋಮಶೇಖರ್ ಅವರು ಮಾಧ್ಯಮದವರೆದುರು ಮಾತನಾಡುವಾಗ ಕೆಎಂಎಫ್ ಪರವಾಗಿ ಉಚಿತವಾಗಿ ಜಾಹೀರಾತಿನಲ್ಲಿ ನಟಿಸಿರುವ ಕಾರಣಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಕೆಎಂಎಫ್ ಪರವಾಗಿ ಸಹಕಾರ ರತ್ನ ಪ್ರಶಸ್ತಿಯನ್ನು ರಾಜ್ಯದ ಮುಖ್ಯಮಂತ್ರಿಗಳಿಂದ ಇದೇ ಮಾರ್ಚ್ 20ರಂದು ನೀಡುವುದಾಗಿ ಘೋಷಿಸಿದ್ದಾರೆ. ಮರಣದ ನಂತರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಮರಣದ ನಂತರವೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಇಷ್ಟೊಂದು ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತಿರುವುದು ಅವರ ಮಾಡಿರುವ ಒಳ್ಳೆಯ ಕೆಲಸಗಳ ಪ್ರತೀಕವಾಗಿದೆ.

Get real time updates directly on you device, subscribe now.