ಆ ಕಡೆ ರಾಧೇಶ್ಯಾಮ್ ಸೋಲು; ಇತ್ತ ಪ್ರಭಾಸ್ ಆಸ್ಪತ್ರೆಗೆ ದಾಖಲು; ಏನಿದರ ಒಳಗುಟ್ಟು ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್??
ನಮಸ್ಕಾರ ಸ್ನೇಹಿತರೇ ಬಾಹುಬಲಿ ಚಿತ್ರದ ನಂತರ ತೆಲುಗು ಚಿತ್ರರಂಗದ ರೆಬಲ್ ಸ್ಟಾರ್ ಡಾರ್ಲಿಂಗ್ ಪ್ರಭಾಸ್ ರವರ ಜನಪ್ರಿಯತೆಯನ್ನು ದೇಶ-ವಿದೇಶಗಳಲ್ಲಿ ಗಮನೀಯವಾಗಿ ಹೆಚ್ಚಾಗಿದೆ ಎಂದರೆ ಖಂಡಿತವಾಗಿ ತಪ್ಪಲ್ಲ. ಚೀನಾ ಜಪಾನ್ ಗಳಂತಹ ದೇಶದಲ್ಲಿ ಕೂಡ ಡಾರ್ಲಿಂಗ್ ಪ್ರಭಾಸ್ ಎಂದರೆ ಸಹಸ್ರಾರು ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಬಾಹುಬಲಿ ಸರಣಿ ಚಿತ್ರಗಳ ನಂತರ ಪ್ರಭಾಸ್ ರವರ ಇಮೇಜಿಗೆ ತಕ್ಕಂತಹ ಸೂಪರ್ ಹಿಟ್ ಸಿನಿಮಾಗಳು ಇನ್ನೂ ಕೂಡ ಹೊರಬಂದಿಲ್ಲ ಎಂಬುದು ಅವರ ಅಭಿಮಾನಿಗಳಿಗೆ ದೊಡ್ಡ ಚಿಂತೆಯಾಗಿದೆ. ಹೌದು ಸಾಹೋ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದರೂ ಕೂಡ ಮಿಸ್ಟರ್ ಪ್ರತಿಕ್ರಿಯೆಗಳನ್ನು ಪಡೆಯುವ ಮೂಲಕ ನಿರೀಕ್ಷಿತ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ.
ಅದೇ ಈಗ ಇತ್ತೀಚಿಗೆ ಬಿಡುಗಡೆಯಾಗಿರುವ ರಾಧೇಶ್ಯಾಮ್ ಚಿತ್ರ ಕೂಡ ಮಿಶ್ರ ಪ್ರತಿಕ್ರಿಯೆಗಳ ಕಾರಣ ದೊಡ್ಡಮಟ್ಟದ ಗೆಲುವನ್ನು ಪಡೆದುಕೊಂಡಿಲ್ಲ. ಇದು ಕೂಡ ಅವರ ಅಭಿಮಾನಿಗಳಿಗೆ ಸಂತೋಷವನ್ನು ತರಿಸಿಲ್ಲ. ಈ ಕುರಿತಂತೆ ಈ ಹಿಂದೆ ಸ್ವತಃ ಪ್ರಭಾಸ್ ರವರ ಎಲ್ಲಾ ಸಿನಿಮಾಗಳು ಬಾಹುಬಲಿ ಆಗಲು ಸಾಧ್ಯವಿಲ್ಲ ಎಂಬುದಾಗಿ ಹೇಳಿದ್ದರು. ಆದರೆ ಅವರ ಅಭಿಮಾನಿಗಳಿಗೆ ಮಾತ್ರ ಪ್ರಭಾಸ್ ರವರು ಯಾವುದೇ ಸಿನಿಮಾಗಳು ಮಾಡಿದರು ಕೂಡ ಅದು ಗೆಲ್ಲಲೇಬೇಕೆಂಬ ಹಠದಲ್ಲಿ ಇದ್ದಾರೆ. ಆದರೆ ರಾಧೇಶ್ಯಾಮ್ ಚಿತ್ರದ ಸೋಲಿನ ಬೆನ್ನಲ್ಲೇ ರೆಬೆಲ್ ಸ್ಟಾರ್ ಪ್ರಭಾಸ್ ರವರು ಈಗ ಆಸ್ಪತ್ರೆಗೆ ಸೇರಿರುವುದು ಮತ್ತಷ್ಟು ವಿಚಾರಗಳಿಗೆ ಆಹಾರವಾಗಿದೆ.
ಕೆಲವರು ಸೋಲಿನ ಹಿನ್ನೆಲೆಯಲ್ಲಿ ಹೀಗೆ ಮಾಡಿದ್ದಾರೆ ಎನ್ನುವುದಾಗಿ ಗಾಳಿ ಸುದ್ದಿಯಾಗಿ ಮಾತನಾಡುತ್ತಿದ್ದಾರೆ. ಆದರೆ ಈ ಹಿಂದೆಯಷ್ಟೇ ಪ್ರಭಾಸ್ ರವರು ಚಿತ್ರೀಕರಣದ ಸಂದರ್ಭದಲ್ಲಿ ಗಾ’ಯ ಮಾಡಿಕೊಂಡಿದ್ದರು. ಆದರೆ ಸಂಪೂರ್ಣವಾದ ಚಿಕಿತ್ಸೆ ಮಾಡಿಕೊಂಡಿರಲಿಲ್ಲ ಇದೇ ಕಾರಣಕ್ಕಾಗಿ ಈಗ ಸ್ಪೇನಿನ ಬಾರ್ಸಿಲೋನಾದಲ್ಲಿ ಸಂಪೂರ್ಣ ಸ’ರ್ಜರಿಗೆ ಒಳಗಾಗಿದ್ದಾರೆ. ಈ ಕಾರಣಕ್ಕಾಗಿ ಈಗ ವೈದ್ಯರ ಸಲಹೆಯಂತೆ ಸಂಪೂರ್ಣ ವಿಶ್ರಾಂತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನು ಸದ್ಯಕ್ಕೆ ಪ್ರಭಾಸ್ ರವರ ಹಾಗೂ ಅವರ ಅಭಿಮಾನಿಗಳ ಪ್ರಮುಖ ಆಸಕ್ತಿ ಎಂದರೆ ಅವರ ಮುಂದಿನ ಚಿತ್ರವಾಗಿರುವ ಸಲಾರ್. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಕುರಿತಂತೆ ನಿರೀಕ್ಷೆಗಳು ಹೆಚ್ಚಿವೆ. ಇಷ್ಟು ಮಾತ್ರವಲ್ಲದೆ ಆದಿಪುರುಷ ಹಾಗೂ ಇನ್ನಿತರ ಸಿನಿಮಾಗಳು ಕೂಡ ಪ್ರಭಾಸ್ ರವರ ಬತ್ತಳಿಕೆಯಲ್ಲಿವೆ.