ಸಿನಿಮಾ ಸೋತಿದೆ ಸೋತಿದೆ ಎನ್ನುತ್ತಿರುವಾಗ ಹಿಂದಿ ಬಾಕ್ಸ್ ಆಫೀಸ್ ನಲ್ಲಿ ನಿಜವಾಗಲೂ ರಾಧೆ ಶ್ಯಾಮ ಗಳಿಸಿದ ಚಿಲ್ಲರೆ ಹಣ ಎಷ್ಟು ಗೊತ್ತೇ??
ನಮಸ್ಕಾರ ಸ್ನೇಹಿತರೇ, ಪ್ರಭಾಸ್ ವೃತ್ತಿಜೀವನದಲ್ಲಿಯೇ ದೊಡ್ಡ ಹೊಡೆತ ಕೊಟ್ಟ ಚಿತ್ರ ರಾಧೆ ಶ್ಯಾಮ ಎಂದರೆ ತಪ್ಪಾಗಲಾರದು. ಯಾಕಂದ್ರೆ ಜನರಿಗೆ ಎಷ್ಟು ನಿರೀಕ್ಷೆ ಹುಟ್ಟಿತ್ತೋ ಅಷ್ಟೇ ವೇಗವಾಗಿ ನಿರೀಕ್ಷೆಯನ್ನು ಹುಸಿಯಾಗಿದೆ.
ಆದರೆ ನಟ ಪ್ರಭಾಸ್ ತೆಲುಗಿನಲ್ಲಿ ಈ ಚಿತ್ರದ ಮೂಲಕ ಯಶಸ್ಸು ಗಳಿಸಿದ್ದಾರೆ. ಆದರೆ ಕೈಕೊಟ್ಟಿದು ಹಿಂದಿ ಭಾಷೆಯಲ್ಲಿ. ರಾಧೆ ಶ್ಯಾಮ ಅಪ್ಪಟ ಪ್ರೇಮ ಕಥೆ ಹೊಂದಿರುವ ಚಿತ್ರ. ಇದರಲ್ಲಿ ಪ್ರಭಾಸ್ ಒಂದೇ ಒಂದು ಫೈಟಿಂಗ್ ಸಿನ್ ಕೂಡ ಮಾಡದೆ ಇರುವುದು ಈ ಚಿತ್ರದ ಸೋಲಿಗೆ ಒಂದು ಕಾರಣವಾಗಿರಲೂಬಹುದು. ಯಾಕಂದ್ರೆ ಈ ವರೆಗೆ ಪ್ರಭಾಸ್ ಮಾಸ್ ಹೀರೋ ಆಗಿಯೇ ಕಾಣಿಸಿಕೊಂಡವರು. ಹಾಗಾಗಿ ಅವರ ಅಭಿಮಾನಿಗಳಿಗೆ ಅದೇ ನಿರೀಕ್ಷೆ ಇತ್ತು ಎನ್ನಬಹುದು.
ಇನ್ನು ರಾಧೆ ಶ್ಯಾಮ ಚಿತ್ರದ ಟ್ರೈಲರ್ ಗೆ ಬಾಲಿವುಡ್ ಫಿದಾ ಆಗಿತ್ತು. ಹಾಗಾಗಿ ಈ ಚಿತ್ರದ ಹಾಕಿ 100 ಕೋಟಿಗೆ ಮಾರಾಟವಾಗಿತ್ತು. ಆದರೆ ಕೇವಲ 20 ಕೋಟಿ ಹಣ ಗಳಿಸುವುದಕ್ಕೂ ಕಣ್ಣೀರು ಹಾಕುವಂತಾಯಿತು. ಈ ಸಿನಿಮಾ ಬಿಡುಗಡೆಯಾದ ಮೊದಲ ದಿನ ಅಂದರೆ ಮಾರ್ಚ್ 11ರಂದು, 4.5 ಕೋಟಿ ಕಲೆಕ್ಷನ್ ಆಗಿತ್ತು. ಮಾರ್ಚ್ 12ರಂದು 4.5 ಕೋಟಿ ರೂಪಾಯಿ, ಮಾರ್ಚ್ 13ರಂದು 5 ಕೋಟಿ ಕಲೆಕ್ಷನ್ ಆಗಿತ್ತು. ಆದರೆ ಮಾರ್ಚ್ 14 ಹಾಗೂ ಮಾರ್ಚ್ 15ರಂದು ಈ ಚಿತ್ರ ತಲಾ 1.15 ಕೋಟಿ ರೂಪಾಯಿಗಳನ್ನು ಮಾತ್ರ ಗಳಿಸಿದೆ. ಒಟ್ಟೂ ಈ ಸಿನಿಮಾ ಹಿಂದಿ ಬಾಕ್ಸ್ ಆಫೀಸ್ನಲ್ಲಿ 16.65 ಕೋಟಿ ಗಳಿಸುವುದಕ್ಕೆ ಮಾತ್ರ ಸಾಧ್ಯವಾಯಿತು. ಇದರಿಂದ ಪ್ರಭಾಸ್ ಇನ್ನು ಮುಂದೆ ಕಥೆಯನ್ನು ಆಯ್ದುಕೊಳ್ಳುವಾಗ ಜನರ ನಿರೀಕ್ಷೆಯಂತೆ ತಮಗೆ ಸೂಟ್ ಆಗುವ ಪಾತ್ರವನ್ನೇ ಆಯ್ದುಕೊಳ್ಳುತ್ತಾರೆ ಎಂಬ ಮಾತು ಕೇಳಿಬರುತ್ತಿದೆ.