ಕೊನೆಗೂ ಬಿಡುಗಡೆಯಾಗಿ ಮೂರು ದಿನ ಆದಮೇಲೆ ಜೇಮ್ಸ್ ಕುರಿತು ಪ್ರತಿಕ್ರಿಯೆ ನೀಡಿದ ಕಿಚ್ಚ ಸುದೀಪ್, ಹೇಳಿದ್ದೇನು ಗೊತ್ತೇ??

9

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಅಪ್ಪು ಅವರ ಕೊನೆಯ ಸಿನಿಮಾ ವಾಗಿರುವ ಜೇಮ್ಸ್ ಈಗಾಗಲೇ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು ಜನರು ಅಪ್ಪು ರವರ ಕೊನೆಯ ಬಾರಿಗೆ ದರ್ಶನ ಪಡೆಯಲು ಚಿತ್ರಮಂದಿರಗಳಿಗೆ ನುಗ್ಗಿ ಬರುತ್ತಿದ್ದಾರೆ. ಕನ್ನಡದ ಅಭಿಮಾನಿಗಳು ಎಲ್ಲಾ ಸೇರಿದರೆ ಕನ್ನಡ ಚಿತ್ರವನ್ನು ಹೇಗೆ ಗೆಲ್ಲಿಸಬಹುದು ಎನ್ನುವುದನ್ನು ಜಿಮ್ ಚಿತ್ರದ ಗೆಲುವನ್ನು ನೋಡಿ ಅರ್ಥೈಸಿಕೊಳ್ಳಬಹುದಾಗಿದೆ.

ಈಗಾಗಲೇ ಬಾಕ್ಸಾಫೀಸ್ ನಲ್ಲಿ ಕೋಟಿ ಕೋಟಿ ರೂಪಾಯಿಯನ್ನು ಜೇಮ್ಸ್ ಚಿತ್ರ ಕಲೆಹಾಕಿದೆ. ಜೇಮ್ಸ್ ಚಿತ್ರವನ್ನು ಮೊದಲ ದಿನವೇ ಅಭಿಮಾನಿಗಳು ಬೆಳ್ಳಂಬೆಳಗ್ಗೆ ನೋಡಿ ತಮ್ಮ ಆಸೆಯನ್ನು ತೀರಿಸಿಕೊಂಡಿದ್ದಾರೆ. ಕೇವಲ ಒಮ್ಮೆ ಮಾತ್ರವಲ್ಲದೆ ಮತ್ತೊಮ್ಮೆ ಮಗದೊಮ್ಮೆ ಚಿತ್ರವನ್ನು ನಾವು ಮಾತನಾಡುವುದಲ್ಲದೆ ತಮ್ಮ ಕುಟುಂಬದವರಿಗೂ ಕೂಡ ತೋರಿಸುತ್ತಿದ್ದಾರೆ. ಕಮರ್ಷಿಯಲ್ ಚಿತ್ರವಾಗಿದ್ದರೂ ಕೂಡ ಫ್ಯಾಮಿಲಿ ಪ್ರೇಕ್ಷಕರು ಅವರನ್ನು ಕೊನೆಯ ಬಾರಿಗೆ ನೋಡಲು ಮುಗಿಬೀಳುತ್ತಿದ್ದಾರೆ.

ಚಿತ್ರವನ್ನು ಕೇವಲ ಅಭಿಮಾನಿಗಳು ಪ್ರೇಕ್ಷಕರು ಮಾತ್ರವಲ್ಲದೆ ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡ ಮೊದಲ ದಿನವೇ ವೀಕ್ಷಿಸಿದ್ದಾರೆ. ಕೆಲವರು ಸಾಮಾನ್ಯ ಚಿತ್ರಮಂದಿರಗಳಲ್ಲಿ ಚಿತ್ರವನ್ನು ವೀಕ್ಷಿಸಿದರೇ ಇನ್ನು ಕೆಲವು ನಟರು ತಮ್ಮ ಪ್ರೈವೇಟ್ ಥಿಯೇಟರ್ಗಳಲ್ಲಿ ಚಿತ್ರವನ್ನು ವೀಕ್ಷಿಸಿ ಭಾವುಕರಾಗಿದ್ದಾರೆ.಼

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಅಜಾತಶತ್ರು ನಟನಾಗಿದ್ದರು. ಅವರು ಎಂದರೆ ಪ್ರತಿಯೊಬ್ಬ ಕನ್ನಡದ ಸ್ಟಾರ್ ನಟರು ಕೂಡ ಒಡಹುಟ್ಟಿದ ಸಹೋದರನಂತೆ ಕಾಣುತ್ತಿದ್ದರು. ಅವರಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಕೂಡ ಒಬ್ಬರು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸ್ನೇಹ ಇಂದು ನಿನ್ನೆಯದಲ್ಲ. ಚಿಕ್ಕವಯಸ್ಸಿನಿಂದಲೂ ಕೂಡ ಪವರ್ ಸ್ಟಾರ್ ಕಿಚ್ಚ ಅವರನ್ನು ನೋಡಿಕೊಂಡು ಬೆಳೆದವರು. ಕಿಚ್ಚ ಸುದೀಪ್ ರವರು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಟನೆಗೆ ಚಿಕ್ಕವಯಸ್ಸಿನಲ್ಲಿ ಫಿದಾ ಆಗಿದ್ದರು.

ಚಿಕ್ಕಂದಿನಿಂದ ಪ್ರಾರಂಭವಾದ ಗೆಳೆತನ ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ಕೂಡ ಮುಂದುವರಿಯಿತು. ರಾಜಕುಮಾರ ಚಿತ್ರದ ನೂರು ದಿನದ ಕಾರ್ಯಕ್ರಮದಲ್ಲಿ ಅಪ್ಪು ಹಾಗೂ ಕಿಚ್ಚ ಇಬ್ಬರು ತಮ್ಮ ಸ್ನೇಹವನ್ನು ವ್ಯಕ್ತಪಡಿಸಿದ ರೀತಿ ಎಲ್ಲರ ಮನವನ್ನು ಗೆದ್ದಿತ್ತು. ಕಿಚ್ಚ ಸುದೀಪ್ ರವರ ಸಿನಿಮಾ ಕಾರ್ಯಕ್ರಮಕ್ಕೆ ಅಪ್ಪು ಅತಿಥಿಯಾಗಿ ಬಂದರೆ, ಈ ಕಡೆ ಅಪ್ಪು ಅವರ ಸಿನಿಮಾ ಕಾರ್ಯಕ್ರಮಗಳಿಗೆ ಕಿಚ್ಚ ಸುದೀಪ್ ರವರು ಅತಿಥಿಯಾಗಿ ಬರುತ್ತಿದ್ದರು.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮರಣ ಸಂಭವಿಸಿದ ದಿನದಲ್ಲಿ ಕೂಡ ಕಿಚ್ಚ ಸುದೀಪ್ ರವರು ಹೈದರಾಬಾದ್ನಲ್ಲಿ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಅಪ್ಪು ಅವರ ಮರಣ ಸುದ್ದಿ ಕೇಳಿದ ತಕ್ಷಣವೇ ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ಕರೆದುಕೊಂಡು ಹೈದರಾಬಾದ್ ನಿಂದ ಬೆಂಗಳೂರಿಗೆ ಓಡೋಡಿ ಬಂದಿದ್ದರು. ಇದು ನಿಜಕ್ಕೂ ಅವರಿಬ್ಬರ ನಡುವೆ ಇದ್ದಂತಹ ಸ್ನೇಹವನ್ನು ಎತ್ತಿಹಿಡಿಯುತ್ತದೆ.

ಇನ್ನು ಇದೀಗ ಜೇಮ್ಸ್ ಚಿತ್ರವನ್ನು ವೀಕ್ಷಿಸಿರುವ ಕಿಚ್ಚ ಸುದೀಪ್ ರವರು ಪುನೀತ್ ರಾಜಕುಮಾರ್ ಅವರು ಎಲ್ಲೂ ಹೋಗಿಲ್ಲ ಜೇಮ್ಸ್ ಚಿತ್ರದ ಮೂಲಕ ಇದ್ದಾರೆ ಎನ್ನುವ ಭಾವನೆಯನ್ನು ನೀಡುತ್ತಿದ್ದಾರೆ. ತಪ್ಪದೆ ಚಿತ್ರವನ್ನು ಕುಟುಂಬಸಮೇತರಾಗಿ ಚಿತ್ರಮಂದಿರದಲ್ಲಿ ವೀಕ್ಷಿಸಿ ಎಂಬುದಾಗಿ ಪ್ರೇಕ್ಷಕರಲ್ಲಿ ಕೋರಿಕೊಂಡಿದ್ದಾರೆ. ಇನ್ನು ಜೇಮ್ಸ್ ಚಿತ್ರದ ಹಾಡನ್ನು ಕೂಡ ಸ್ವತಹ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ ಗೆಳೆಯ ಪುನೀತ್ ರಾಜಕುಮಾರ್ ರವರ ನೆನಪಿನಲ್ಲಿ ಬಿಡುಗಡೆ ಮಾಡಿದ್ದರು. ಈಗ ಅಪ್ಪು ಇಲ್ಲದೆ ಅವರ ಸಿನಿಮಾವನ್ನು ನೋಡುತ್ತಿರುವುದು ನಿಜಕ್ಕೂ ಕೂಡ ಅವರಿಗೆ ದುಃಖಕರ ಸಂಗತಿಯಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳು ನಮ್ಮನಿಗೆ ತಪ್ಪದೇ ಹಂಚಿಕೊಳ್ಳಿ.

Get real time updates directly on you device, subscribe now.