ನೇರಾ ನೇರಾ ಹಣಾಹಣಿಯಲ್ಲಿ ಎದುರಾದ ಕನ್ನಡತಿಯರಾದ ಪೂಜಾ ಹೆಗ್ಡೆ ಹಾಗೂ ರಶ್ಮಿಕಾ. ಕೊನೆಗೂ ಗೆದ್ದದ್ದು ಯಾರು ಗೊತ್ತೇ?? ಏನ್ ಹವಾ ಅಂತೀರಾ.
ನಮಸ್ಕಾರ ಸ್ನೇಹಿತರೇ ಇತ್ತೀಚಿಗೆ ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಚ್ಚು ಹೆಸರು ಗಳಿಸುತ್ತಿರುವುದು ಅಂದ್ರೆ ಅದು ರಶ್ಮಿಕಾ ಮಂದಣ್ಣ. ಪುಷ್ಪಾ ಚಿತ್ರದ ನಂತರವಂತೂ ಅತೀ ಹೆಚ್ಚಿನ ಬೇಡಿಕೆಯ ಹಾಗೂ ಅತೀ ಬ್ಯುಸಿಯಾದ ನಟಿ ಎನಿಸಿಕೊಂಡಿದ್ದಾರೆ ರಶ್ಮಿಕಾ.
ರಶ್ಮಿಕಾ ಈಗಾಗಲೇ ಹಲವು ಸ್ಟಾರ್ ನಟರ ಜೊತೆ ಅಭಿನಯಿಸಿದ್ದು ಅವರ ಮುಂದಿನ ಚಿತ್ರಗಳಲ್ಲಿ ಯಾರ ಜೊತೆ ಅಭಿನಯಿಸಲಿದ್ದಾರೆ ಎನ್ನುವುದು ಪ್ರತಿಯೊಬ್ಬರ ಕುತೂಹಲ. ಯಾಕಂದ್ರೆ ಈಗಾಗಲೇ ಬಹುತೇಕ ಸ್ಟಾರ್ ನಟರ ಜೊತೆ ರಶ್ಮಿಕಾ ನಟಿಸಿದ್ದಾರೆ. ಇದೀಗ ಮುಂದಿನ ಚಿತ್ರಕ್ಕೆ, ಚಿತ್ರತಂಡವೊದು ತಮಿಳು ಸ್ಟಾರ್ ನಟ ವಿಜಯ್ ಜೊತೆ ಅಭಿನಯಿಸುವುದಕ್ಕೆ ನಟಿ ರಶ್ಮಿಕಾ ಮಂದಣ್ಣರನ್ನು ಕೇಳಿದ್ಡಾರೆ ಎಂದು ಹೇಳಲಾಗುತ್ತಿದೆ. ಇದೇನಾದ್ರೂ ಫಿಕ್ಸ್ ಆದ್ರೆ ನಟ ವಿಜಯ್ ಅವರ 66ನೇ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಲಿದ್ದಾರೆ.
ಸದ್ಯ ಟಾಲಿವುಡ್, ಬಾಲಿವುಡ್ ನಲ್ಲಿ ಮುಂಚುತ್ತಿರುವ ಮಂದಣ್ಣ ತಮಿಳು ಚಿತ್ರರಂಗದಲ್ಲಿ ಕಾಣಿಸಿಕೊಳ್ಳುವುದು ಬಾಕಿ ಇದೆ. ವಿಜಯ್ ಅಭಿನಯದ ಈ ಹೊಸ ಚಿತ್ರಕ್ಕೆ ತೆಲುಗು ನಿರ್ದೇಶಕ ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಸ್ಕ್ರಿಪ್ಟ್ ಫೈನಲ್ ಆಗಿದ್ದು, ನಾಯಕಿಯ ಹುಡುಕಾಟದಲ್ಲಿದೆ ಚಿತ್ರತಂಡ. ಈ ಕಥೆಗೆ ರಶ್ಮಿಕಾ ಮಂದಣ್ಣನೇ ಸರಿ ಹೋಗುತ್ತಾರೆ ಅಂತ ನಿರ್ದೇಶಕ ಸಲಹೆ ನೀಡಿದ್ದಾರಂತೆ. ಹಾಗಾಗಿ ರಶ್ಮಿಕಾ ಅವರನ್ನು ಅಪ್ರೋಚ್ ಮಾಡಲಾಗಿದೆ ಎಂಬ ಸುದ್ದಿ ಹರಡಿದೆ. ಅಂದಹಾಗೆ ವಿಜಯ್ ನಟನೆಯ ಈ ಚಿತ್ರಕ್ಕೆ ನಟಿ ಕಿಯಾರ ಹಾಗೂ ನಟಿ ಪೂಜಾ ಹೆಗ್ಡೆ ಹೆಸರು ಕೇಳಿಬಂದಿತ್ತು. ಆದರೆ ಇದೀಗ ರಶ್ಮಿಕಾ ಮಂದಣ್ಣ ಮುನ್ನೆಲೆಗೆ ಬಂದಿದ್ದಾರೆ. ಇಟ್ಟಿನಲ್ಲಿ ನಟಿ ರಶ್ಮಿಕಾ ಮಂದಣ್ಣ ತಮಿಳುನಲ್ಲಿಯೂ ನಂ1 ನಾಯಾಕಿ ನಟಿ ಎನಿಸಿಕೊಳ್ಳಲಿದ್ದಾರಾ ಎಂಬುದು ಹಲವರ ಕುತೂಹಲ.