ಅಪ್ಪು ಜನ್ಮದಿನದಂದು ಅಮೇರಿಕ ದಲ್ಲಿ ಇದ್ದರೂ ಮಗಳು ದೃತಿ ಏನು ಮಾಡಿದ್ದಾರೆ ಗೊತ್ತೇ?? ಕಠಿಣ ನಿರ್ಧಾರ ತೆಗೆದುಕೊಂಡಿದ್ದು ಯಾಕೆ ಗೊತ್ತೇ??

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮೆಲ್ಲರ ನೆಚ್ಚಿನ ಯುವರತ್ನ ಕನ್ನಡಿಗರ ನೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನಾಚರಣೆಯ ಅವರಿಲ್ಲದೆ ಅವರ ಅಭಿಮಾನಿಗಳ ಮೂಲಕ ನಡೆದಿದೆ. ರಾಜ್ಯಾದ್ಯಂತ ಅಭಿಮಾನಿಗಳು ಸಮಾಜಕ್ಕೆ ಒಳ್ಳೆಯದಾಗುವ ರೀತಿಯಲ್ಲಿ ಅಪ್ಪು ಅವರ ಜನ್ಮದಿನವನ್ನು ಆಚರಿಸಿದ್ದಾರೆ. ಜೇಮ್ಸ್ ಚಿತ್ರವು ಕೂಡ ಪ್ರಪಂಚದಾದ್ಯಂತ 4000ಕ್ಕೂ ಅಧಿಕ ತರೆಗಳ ಮೇಲೆ ಅದ್ದೂರಿಯಾಗಿ ತೆರೆಕಂಡಿದೆ.

ರಾಜರತ್ನ ಪುನೀತ್ ರಾಜಕುಮಾರ್ ಅವರ ಮಡದಿ ಆಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಅಭಿಮಾನಿಗಳು ಸಿನಿಮಾ ಥಿಯೇಟರ್ ಗೆ ಬಂದು ಸಿನಿಮಾವನ್ನು ನೋಡಲು ಕೋರಿಕೊಂಡಿದ್ದರು. ಆದರೆ ಹಲವಾರು ಸಮಸ್ಯೆಗಳ ಕಾರಣದಿಂದಾಗಿ ಅಶ್ವಿನಿ ಪುನೀತ್ ರಾಜಕುಮಾರ್ ರವರು ಬಂದು ನೋಡಲಾಗಲಿಲ್ಲ. ಇನ್ನು ನಿಮಗೆಲ್ಲರಿಗೂ ಗೊತ್ತಿರುವಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹಿರಿಯ ಪುತ್ರಿ ಆಗಿರುವ ದೃತಿ ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಹಲವಾರು ಸಂದರ್ಶನಗಳಲ್ಲಿ ಹಾಗೂ ಸಮಾರಂಭಗಳಲ್ಲಿ ಹೆಣ್ಣುಮಕ್ಕಳು ಸ್ವಾವಲಂಬಿಯಾಗಿ ಇರಬೇಕು ಎನ್ನುವುದನ್ನು ಹೇಳುತ್ತಾ ಬಂದವರು. ಅವರ ಮಕ್ಕಳು ಹಾಗೆ ಅದರಲ್ಲೂ ವಿಶೇಷವಾಗಿ ದೃತಿ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವುದು ಯಾವುದೇ ಹಣದಲ್ಲಿ ಅಲ್ಲ ಬದಲಾಗಿ ಅವಳು ತನ್ನ ಸ್ವಂತ ಪ್ರತಿಭೆ ಮೂಲಕ ಪಡೆದಿರುವ ಅಂತಹ ಸ್ಕಾಲರ್ಶಿಪ್ ಮೂಲಕ. ಇದನ್ನು ಪ್ರತಿಯೊಬ್ಬರೂ ಕೂಡ ಹೆಮ್ಮೆಯಿಂದ ಕೇಳಬೇಕು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಹೇಳಿಕೊಟ್ಟ ದಾರಿಯಲ್ಲಿ ಅವರ ಮಗಳಾಗಿರುವ ದೃತಿ ವಂದಿತ ಹಾಗೂ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಡೆಯುತ್ತಿದ್ದಾರೆ. ಇನ್ನು ಜೇಮ್ಸ್ ಚಿತ್ರ ಬಿಡುಗಡೆ ಆಗಿರುವ ಹಿನ್ನೆಲೆಯಲ್ಲಿ ಹಾಗೂ ತಂದೆಯ ಜನ್ಮದಿನದ ವಿಶೇಷವಾಗಿ ದೃತಿ ಭಾರತಕ್ಕೆ ಬಂದಿದ್ದಾಳೆ. ಎಲ್ಲರೂ ಕೇವಲ ಇಷ್ಟಕ್ಕೆ ಮಾತ್ರ ದೃತಿ ಬಂದಿದ್ದಾಳೆ ಎಂಬುದಾಗಿ ಅಂದುಕೊಂಡಿದ್ದರು. ಕೇವಲ ಇಷ್ಟಕ್ಕೆ ಮಾತ್ರವಲ್ಲದೆ ಅನಾಥ ಮಕ್ಕಳ ಜೊತೆಗೆ ಸಮಯ ಕಳೆಯುವುದು ಹಾಗೂ ಅವರಿಗೆ ಊಟ ಬಟ್ಟೆ ಪುಸ್ತಕಗಳನ್ನು ನೀಡುವುದು ಕೂಡ ಅವರ ಉದ್ದೇಶವಾಗಿತ್ತು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಚಿತ್ರ ಈಗಾಗಲೇ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಒಂದೊಂದೇ ದಾಖಲೆಗಳನ್ನು ನೆಲಸಮ ಮಾಡುತ್ತಿದೆ. ಬಾಕ್ಸಾಫೀಸ್ ಕಲೆಕ್ಷನ್ ವಿಚಾರದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿ ಮಾಡುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಕೊನೆಯ ಸಿನಿಮಾ ಅವರ ಅತ್ಯಂತ ಯಶಸ್ವಿ ಸಿನಿಮಾ ಆಗಿತ್ತು ಎನ್ನುವುದನ್ನು ಎಲ್ಲರೂ ಹೆಮ್ಮೆಯಿಂದ ಹೇಳುವಂತೆ ಮಾಡಿದ್ದಾರೆ.

ಇಷ್ಟು ಮಾತ್ರವಲ್ಲದೆ ಜೇಮ್ಸ್ ಚಿತ್ರವನ್ನು ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ ನಟಿ ನಟ ಎಲ್ಲರೂ ಕೂಡ ನೋಡಿದ್ದಾರೆ. ಇನ್ನು ದೃತಿ ಹಾಗೂ ವಂದಿತ ತಮ್ಮ ತಂದೆಯ ಕೊನೆಯ ಚಿತ್ರವನ್ನು ತಮ್ಮ ಸಹೋದರರಾದ ವಿನಯ್ ರಾಜಕುಮಾರ್ ಹಾಗೂ ಯುವ ರಾಜಕುಮಾರ್ ರವರ ಜೊತೆಗೆ ಹೋಗಿ ಚಿತ್ರಮಂದಿರಗಳಲ್ಲಿ ನೋಡಿ ಭಾವುಕರಾಗಿದ್ದಾರೆ. ತಮ್ಮ ತಂದೆಯ ಧ್ವನಿಗೆ ತಮ್ಮ ದೊಡ್ಡಪ್ಪನ ಧ್ವನಿ ಇರುವುದನ್ನು ನೋಡಿ ಕೂಡ ಭಾವುಕರಾಗಿದ್ದಾರೆ.

ಒಟ್ಟಾರೆಯಾಗಿ ತಮ್ಮ ತಂದೆಯ ಕೊನೆಯ ಚಿತ್ರವನ್ನು ನೋಡುವಾಗ ಇಬ್ಬರು ಹೆಣ್ಣುಮಕ್ಕಳ ಕಣ್ಣಿನಿಂದ ಕಣ್ಣೀರು ಹೊಳೆಯಾಗಿ ಹರಿದಿದ್ದಂತೂ ಸುಳ್ಳಲ್ಲ. ನಿಜಕ್ಕೂ ಕೂಡ ಇಷ್ಟು ಚಿಕ್ಕ ವಯಸ್ಸಿನಲ್ಲೇ ತಮ್ಮ ತಂದೆಯ ಕೊನೆಯ ಸಿನಿಮಾವನ್ನು ನೋಡುವ ದೌರ್ಭಾಗ್ಯ ಬರುತ್ತದೆ ಎಂಬುದಾಗಿ ಯಾರೂ ಕೂಡ ಊಹಿಸಲು ಸಾಧ್ಯವಿಲ್ಲ. ಅದೇನೇ ಇರಲಿ ತಮ್ಮ ತಂದೆ ಸಿನಿಮಾವನ್ನು ನೋಡುವ ಜೊತೆಗೆ ಅಶಕ್ತರ ಪಾಲಿಗೆ ಬೆಳಕಾಗಿದ್ದು ಕೂಡ ಎಲ್ಲರೂ ಮೆಚ್ಚುವಂತಹ ವಿಚಾರ. ತಂದೆಯಂತೆ ಮಕ್ಕಳು ಕೂಡ ಸಾಮಾಜಿಕ ಕಾರ್ಯಗಳಲ್ಲಿ ಇಷ್ಟು ಚಿಕ್ಕ ವಯಸ್ಸಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿರುವುದು ದೊಡ್ಡಮನೆಯ ದೊಡ್ಡಗುಣ ಎತ್ತಿಹಿಡಿಯುತ್ತಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಿ.

Get real time updates directly on you device, subscribe now.