ಮಾಸ್ಟರ್ ಆನಂದ್ ತನ್ನ ಮಗಳನ್ನ ಬೆಳಿಗೆ ಹೇಗೆ ಎದ್ದೇಳಿಸುತ್ತಾರೆ ಗೊತ್ತೇ?? ವಿಡಿಯೋ ಬಿಡುಗಡೆ ಮಾಡಿದ್ದಾರೆ ಮೊದಲ ಬಾರಿಗೆ ತೋರಿಸ್ತೇವೆ.

13

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಸ್ಟಾರ್ ನಟರಿಗಿಂತ ಹೆಚ್ಚಾಗಿ ಬಾಲನಟರಾಗಿ ನಟಿಸುವ ಮಕ್ಕಳೇ ಹೆಚ್ಚಿನ ಜನಪ್ರಿಯತೆ ಹಾಗೂ ಕೆಲವೊಮ್ಮೆ ಸಂಭಾವನೆಯನ್ನು ಕೂಡ ಪಡೆದಿದ್ದುಂಟು. ಅಂದಿನ ಕಾಲದಲ್ಲಿ ಜನಪ್ರಿಯರಾಗಿರುವ ಅಂತಹ ಸ್ಟಾರ್ ಬಾಲ ನಟರಲ್ಲಿ ಮಾಸ್ಟರ್ ಆನಂದ್ ಅವರು ಕೂಡ ಒಬ್ಬರು. ಮಾಸ್ಟರ್ ಆನಂದ್ ರವರು ಎಂದಾಗ ಮೊದಲಿಗೆ ನೆನಪಾಗುವುದು ಅನಂತನಾಗ್ ರವರ ಜೊತೆಗೆ ನಟಿಸಿದ್ದ ಗೌರಿ ಗಣೇಶ ಚಿತ್ರ. ಅದರಲ್ಲಿ ಒಂದು ಲೆಕ್ಕದಲ್ಲಿ ಹೇಳುವುದಾದರೆ ಮಾಸ್ಟರ್ ಆನಂದ್ ರವರ ಎಲ್ಲಾ ದೃಶ್ಯಗಳಲ್ಲಿ ಕೂಡ ತುಂಬಿಕೊಂಡಿದ್ದರು.

ಪ್ರೇಕ್ಷಕರಿಗೆ ಅವರನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಮುಂದೆ ಖಂಡಿತವಾಗಿ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟನಾಗಿ ಮಾಸ್ಟರ್ ಆನಂದ್ ರವರು ಬೆಳೆಯುತ್ತಾರೆ ಎನ್ನುವುದಾಗಿ ಎಲ್ಲರೂ ಅಂದುಕೊಂಡಿದ್ದರು. ಆದರೆ ಮಾಸ್ಟರ್ ಆನಂದ್ ರವರು ಸಿನಿಮಾರಂಗದಲ್ಲಿ ನಾಯಕನಟನಾಗಿ ಅಲ್ಲ ಬದಲಾಗಿ ಹಾಸ್ಯ ಕಲಾವಿದನಾಗಿ ಜನಪ್ರಿಯರಾಗುತ್ತಾರೆ. ಸಿನಿಮಾಗಳಿಗಿಂತ ಹೆಚ್ಚಾಗಿ ಕಿರುತೆರೆಯಲ್ಲಿ ನಿರೂಪಕರಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಾರೆ. ಸದ್ಯಕ್ಕೆ ಈಗ ಅವರ ಮಗಳು ವಂಶಿಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದ ಮೂಲಕ ಕಿರುತೆರೆ ಪ್ರೇಕ್ಷಕರ ಕಣ್ಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾಳೆ.

ತನ್ನ ಚಟಪಟ ಮಾತಿನಿಂದಾಗಿ ಎಲ್ಲರ ನೆಚ್ಚಿನ ಮನೆಮಗಳು ಆಗಿದ್ದಾರೆ ಎಂದರು ತಪ್ಪಾಗಲಾರದು. ಸದ್ಯಕ್ಕೆ ಅವಳ ಕುರಿತಂತೆ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೌದು ಬೆಳ್ಳಂಬೆಳಗ್ಗೆ ಹೇಳಲು ಒಪ್ಪದಂತಹ ವಂಶಿಕಾ ಳನ್ನು ಅವಳ ತಂದೆಯಾಗಿರುವ ಮಾಸ್ಟರ್ ಆನಂದರವರು ಎದ್ದೇಳಿಸಲು ಪ್ರಯತ್ನಿಸುತ್ತಿರುವಂತಹ ರವರ ವಿಡಿಯೋವನ್ನು ಅವರ ತಾಯಿ ಯಶಸ್ವಿನಿ ಚಿತ್ರೀಕರಿಸಿರುವುದು ಈಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಕ್ಯೂಟ್ ವಿಡಿಯೋವನ್ನು ನೀವು ಕೂಡ ನೋಡಬಹುದಾಗಿದ್ದು ತಪ್ಪದೇ ಇದರ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.

Get real time updates directly on you device, subscribe now.