ಅಪ್ಪು ಹುಟ್ಟುಹಬ್ಬದ ದಿನ ರಶ್ಮಿಕಾ ನಡೆಗೆ ಗರಂ ಆದ ಅಭಿಮಾನಿಗಳು ಅಷ್ಟಕ್ಕೂ ರಶ್ಮಿಕ ಅವರು ಏನು ಮಾಡಿದ್ದಾರೆ ಗೊತ್ತೆ??
ನಮಸ್ಕಾರ ಸ್ನೇಹಿತರೇ ರಶ್ಮಿಕ ಮಂದಣ್ಣ ನವರು ಒಂದಲ್ಲ ಒಂದು ಕಾರಣದಿಂದಾಗಿ ಸದಾಕಾಲ ಸುದ್ದಿಯಾಗುತ್ತಲೇ ಇರುತ್ತಾರೆ. ಕೆಲವೊಮ್ಮೆ ನೆಗೆಟಿವ್ ಆಗಿ ಸುದ್ದಿಯಾದರೆ ಇನ್ನೊಮ್ಮೆ ಪಾಸಿಟಿವ್ ಆಗಿ ಕೂಡ ಸುದ್ದಿಯಾಗುತ್ತಾರೆ. ಕೆಲವೊಮ್ಮೆ ಅವರು ವಿವಾ’ದಾತ್ಮಕ ಸುದ್ದಿಗಳಲ್ಲಿ ಸಿಲುಕಿದಾಗ ಬೇಕಂತಲೇ ಮಾಡಿಕೊಳ್ಳುತ್ತಾರೆ ಎಂಬ ಭಾವನೆ ಕೂಡ ಬರೋದು ಸುಳ್ಳಲ್ಲ. ಸದ್ಯಕ್ಕೆ ನಟಿ ರಶ್ಮಿಕಾ ಮಂದಣ್ಣ ನವರು ತೆಲುಗು ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ಬಿಸಿಯಾಗಿರುವುದು ಕೂಡ ನಿಮಗೆ ಗೊತ್ತಿದೆ. ಅಲ್ಲಿಯೇ ಇರಲು ಹೊಸ ಹೊಸ ಮನೆಗಳನ್ನು ಕೂಡ ಖರೀದಿಸುತ್ತಾರೆ ಎಂಬ ಸುದ್ದಿಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸದ್ದು ಮಾಡಿದವು.
ಇದರ ನಡುವಲ್ಲೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ವಿಚಾರವಾಗಿ ರಶ್ಮಿಕ ಮಂದಣ್ಣ ನವರು ಈಗ ಪೇಚಿಗೆ ಸಿಲುಕಿಕೊಂಡಿದ್ದಾರೆ. ಹೌದು ಇದು ಮೊದಲ ಬಾರಿಯಲ್ಲ ಇಂದ ಕೂಡ ಪುನೀತ್ ರಾಜಕುಮಾರ್ ಅವರ ವಿಚಾರವಾಗಿಯೇ ಅವರ ಅಭಿಮಾನಿಗಳಿಂದ ಹಿಗ್ಗಾಮುಗ್ಗಾ ಟೀಕೆಯನ್ನು ಪಡೆದಿದ್ದರು. ಈ ಬಾರಿ ಕೂಡ ಇದೇ ರೀತಿ ಆಗಿದೆ ಎಂದರೆ ತಪ್ಪಾಗಲಾರದು. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಅಂಜನಿಪುತ್ರ ಚಿತ್ರದಲ್ಲಿ ಕೂಡ ಅವರ ನಾಯಕಿಯಾಗಿ ರಶ್ಮಿಕ ಮಂದಣ್ಣ ಕಾಣಿಸಿಕೊಂಡಿದ್ದರು. ಅಷ್ಟಕ್ಕೂ ಈಗ ಅಪ್ಪು ಅಭಿಮಾನಿಗಳಿಂದ ಬೈಸಿಕೊಳ್ಳುತ್ತಿರುವುದು ಯಾಕೆ ಎಂಬುದನ್ನು ತಿಳಿಯೋಣ ಬನ್ನಿ.
ಹೌದು ಮಾರ್ಚ್ 17 ರಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನದ ವಿಶೇಷವಾಗಿ ಅಭಿಮಾನಿಗಳಿಂದ ಹಿಡಿದು ದೊಡ್ಡ ದೊಡ್ಡ ಸ್ಟಾರ್ ನಟರ ವರೆಗೆ ಅಪ್ಪು ಅವರಿಗೆ ಶುಭಾಶಯಗಳನ್ನು ಕೋರಿದರು. ಆದರೆ ನಟಿ ರಶ್ಮಿಕಾ ಮಂದಣ್ಣ ಕುರಿತಂತೆ ಮೌನವನ್ನು ವಹಿಸಿದ್ದರು. ಇದೇ ಕಾರಣಕ್ಕಾಗಿ ಕೋಪಗೊಂಡ ಅಪ್ಪು ಅಭಿಮಾನಿಗಳು ನಿಯತ್ತಿಲ್ಲ ಎನ್ನುವುದಾಗಿ ರಶ್ಮಿಕ ಮಂದಣ್ಣ ನವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಿಂದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮರಣದ ಸಂದರ್ಭದಲ್ಲಿ ಕೂಡ ಮೌನವಹಿಸಿದ್ದಾರೆ ಹಿನ್ನೆಲೆಯಲ್ಲಿ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದರು. ಈ ವಿಚಾರಕ್ಕೆ ಮುಂದಿನ ದಿನಗಳಲ್ಲಿ ರಶ್ಮಿಕಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.