ಕನ್ನಡ ಚಿತ್ರರಂಗದ ಖ್ಯಾತ ನಟಿಯರು ಹೆಣ್ಣುಮಕ್ಕಳು ಈಗ ಹೇಗಿದ್ದಾರೆ ಗೊತ್ತೇ?? ಟಾಪ್ ಸ್ಟಾರ್ ನಟಿಯರ ಮಕ್ಕಳ್ನು ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

36

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಹಲವಾರು ಸೆಲೆಬ್ರಿಟಿಗಳು ನಂತರ ಅವರ ಮಕ್ಕಳು ಚಿತ್ರರಂಗಕ್ಕೆ ಆಗಮಿಸುವುದನ್ನು ನೀವು ನೋಡಿರುತ್ತೀರಿ. ಇದಕ್ಕೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವಾರು ಉದಾಹರಣೆಗಳಿವೆ. ಕೆಲವರು ಯಶಸ್ವಿಯಾದರೆ ಇನ್ನು ಕೆಲವರು ಹೇಳಹೆಸರಿಲ್ಲದಂತೆ ಕಾಣೆಯಾಗುತ್ತಾರೆ. ಇಂದಿನ ಲೇಖನಿಯಲ್ಲಿ ನಾವು ಕನ್ನಡ ಚಿತ್ರರಂಗದ ಖ್ಯಾತ ನಟಿಯರ ಮಕ್ಕಳ ಕುರಿತಂತೆ ಹೇಳಲು ಹೊರಟಿದ್ದೇವೆ. ಹಾಗಿದ್ದರೆ ಈ ಪಟ್ಟಿಯಲ್ಲಿ ಯಾರೆಲ್ಲ ಇರುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ನಟಿ ಶ್ರುತಿ ಅವರ ಮಗಳ ಹೆಸರು ಗೌರಿ ಎನ್ನುವುದಾಗಿದೆ.

ಚಿತ್ರರಂಗಕ್ಕೆ ಕಾಲಿಡುವಂತಹ ನಿರೀಕ್ಷೆಗಳು ಕೂಡ ಇವೆ. ಕನ್ನಡದ ಖ್ಯಾತ ನಟಿ ಸುಧಾರಾಣಿ ಅವರ ಮಗಳು ನಿಧಿ ರವರು ಕೂಡ ಚಿತ್ರರಂಗಕ್ಕೆ ಕಾಲಿಡುವ ಸಾಧ್ಯತೆಗಳಿವೆ. ಜನುಮದ ಜೋಡಿ ಖ್ಯಾತಿಯ ನಟಿ ಶಿಲ್ಪಾ ರವರ ಮಗಳ ಹೆಸರು ಅವಂತಿಕ. ಖ್ಯಾತ ನಟಿ ಅನುಪ್ರಭಾಕರ್ ಮುಖರ್ಜಿ ಅವರ ಮಗಳ ಹೆಸರು ನಂದನ ಇನ್ನೂ ಚಿಕ್ಕವಳು. ನಟಿ ಜಯಮಾಲಾರವರ ಮಗಳ ಹೆಸರು ಸೌಂದರ್ಯ. ಬಹುಭಾಷೆ ತಾರೆಯಾಗಿರುವ ಹಿರಿಯ ನಟಿ ಲಕ್ಷ್ಮಿ ಅವರ ಮಗಳ ಹೆಸರು ಐಶ್ವರ್ಯ. ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ರವರ ಮಕ್ಕಳ ಹೆಸರು ಕೀರ್ತಿ ವಿಷ್ಣುವರ್ಧನ್ ಹಾಗೂ ಚಂದನ ವಿಷ್ಣುವರ್ಧನ್. ಶಂಕರ್ ನಾಗ್ ರವರ ಪತ್ನಿಯಾಗಿರುವ ನಟಿ ಅರುಂಧತಿ ನಾಗ್ ರವರ ಮಗಳ ಹೆಸರು ಕಾವ್ಯನಾಗ್. ನಟಿ ಮೀನಾ ರವರ ಮಗಳ ಹೆಸರು ನೈನಿಕ.

ಖ್ಯಾತನಟಿ ಪ್ರಿಯಾಂಕಾ ಉಪೇಂದ್ರ ಅವರ ಮಗಳ ಹೆಸರು ಐಶ್ವರ್ಯ ಉಪೇಂದ್ರ. ನಟಿ ಖುಷ್ಬು ರವರಿಗೆ ಕೂಡ ಇಬ್ಬರು ಮಕ್ಕಳಿದ್ದು ಚಿತ್ರರಂಗಕ್ಕೆ ಅವರು ಕಾಲಿಟ್ಟಿಲ್ಲ. ಬಹುಭಾಷಾ ತಾರೆ ನಟಿ ಮಧುಬಾಲಾ ಅವರಿಗೂ ಕೂಡ ಇಬ್ಬರು ಪುತ್ರಿಯರಿದ್ದಾರೆ. ನಟಿ ಸುಧಾ ಬೆಳವಾಡಿಯವರ ಮಗಳು ಸಂಯುಕ್ತ ಹೊರನಾಡು ಈಗಾಗಲೇ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡದಲ್ಲಿ ಸೂಪರ್ ಸ್ಟಾರ್ ನಟಿ ಮಾಲಾಶ್ರೀ ಅವರ ಮಗಳ ಹೆಸರು ಅನನ್ಯ. ಆಶಾರಾಣಿ ಅವರ ಮಕ್ಕಳ ಹೆಸರು ಐಶ್ವರ್ಯ ಅರ್ಜುನ್ ಹಾಗೂ ಅಂಜನ ಸರ್ಜಾ. ಮುಂದಿನ ದಿನಗಳಲ್ಲಿ ಈ ನಟಿಯರ ಹೆಣ್ಣುಮಕ್ಕಳು ಕನ್ನಡ ಚಿತ್ರರಂಗದಲ್ಲಿ ಜನಮೆಚ್ಚಿದ ನಟಿಯರಾಗಿ ಮೂಡಿ ಬರುತ್ತಾರೋ ಎನ್ನುವುದನ್ನು ಕಾದು ನೋಡಬೇಕಾಗಿದೆ.

Get real time updates directly on you device, subscribe now.