ಅಪ್ಪು ಎಂದರೆ ಎಲ್ಲರಿಗೂ ಇಷ್ಟ, ಆದರೆ ಅಪ್ಪು ರವರ ಫೇವರಿಟ್ ಕನ್ನಡದ ನಟ ಯಾರು ಗೊತ್ತೇ?? ನಿಜಕ್ಕೂ ಶಾಕ್ ಆಗ್ತೀರಾ.
ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ನಿಜವಾಗಲು ಕೂಡ ಕನ್ನಡ ಚಿತ್ರರಂಗ ಶೂನ್ಯವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಕನ್ನಡ ಕಂಠೀರವ ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರನ್ನು ಕಳೆದುಕೊಂಡ ನಂತರ ಅವರ ಸ್ಥಾನವನ್ನು ತುಂಬಿದ ಸಮರ್ಥ ನಟ ಎಂದರೆ ಅದು ಅವರ ಪುತ್ರ ಪವರ್ ಸ್ಟಾರ್ ಪುನೀತ್ ರಾಜಕುಮಾರ್.
ಈಗಾಗಲೇ ನಟನಾಗಿ ನಿರ್ಮಾಪಕನಾಗಿ ಗಾಯಕನಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹಲವಾರು ದೊಡ್ಡಮಟ್ಟದ ಸಾಧನೆಯನ್ನು ಮಾಡಿದ್ದಾರೆ. ಅವರು ಕನ್ನಡ ಚಿತ್ರರಂಗದಲ್ಲಿ ಸಾಧಿಸುವುದು ಇನ್ನೂ ಕೂಡ ಬಾಕಿ ಇತ್ತು. ಅರ್ಧದಲ್ಲಿ ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಹೋಗಿರುವುದು ಎಷ್ಟರಮಟ್ಟಿಗೆ ನ್ಯಾಯ ಎಂದು ದೇವರ ಬಳಿ ದೂರನ್ನು ನೀಡುವಷ್ಟರ ಮಟ್ಟಿಗೆ ದುಃಖ ಕನ್ನಡಿಗರಲ್ಲಿ ಕಾಡುತ್ತಿದೆ. ಬಂಗಾರದ ಮನುಷ್ಯನಿಗೆ ತಕ್ಕನಾದ ಮಗ ಎಂಬ ಜನಪ್ರಿಯತೆಯನ್ನು ಕೂಡ ಪುನೀತ್ ರಾಜಕುಮಾರ್ ರವರು ಪಡೆದುಕೊಂಡಿದ್ದರು. ಕನ್ನಡ ಚಿತ್ರರಂಗದಲ್ಲಿ ಅಜಾತಶತ್ರುವಾಗಿ ಮೆರೆಯುತ್ತಿದ್ದರು. ಪ್ರತಿಯೊಬ್ಬ ಕಲಾವಿದ ಪ್ರತಿಯೊಬ್ಬ ತಂತ್ರಜ್ಞಾನ ನಿರ್ಮಾಪಕ ನಿರ್ದೇಶಕರಿಗೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಎಂದರೆ ಎಲ್ಲಿಲ್ಲದ ಅಚ್ಚುಮೆಚ್ಚು.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಕಳೆದುಕೊಳ್ಳುವ ಮೂಲಕ ಕನ್ನಡ ಚಿತ್ರರಂಗ ಎರಡನೇ ಬಾರಿಗೆ ಅಣ್ಣಾವ್ರನ್ನು ಕಳೆದುಕೊಂಡಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಯಾಕೆಂದರೆ ತಾವು ಜೀವಂತ ಇದ್ದಷ್ಟು ದಿನ ಪುನೀತ್ ರಾಜಕುಮಾರ್ ರವರು ತಮ್ಮ ತಂದೆಯ ಆದರ್ಶಗಳನ್ನು ಸಮಾಜದಲ್ಲಿ ಹರಡಲು ಪ್ರಯತ್ನಿಸಿದವರು. ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿ ಸಮಾಜಸೇವೆಗಾಗಿ ಮೀಸಲಿಟ್ಟವರು. ಅದಕ್ಕಾಗಿ ಯಾವುದೇ ಪ್ರಚಾರವನ್ನು ಕೂಡ ಪಡೆಯದೆ ನಿಸ್ವಾರ್ಥವಾಗಿ ಸೇವೆಯನ್ನು ಸಲ್ಲಿಸಿದ ಮಹಾನ್ ವ್ಯಕ್ತಿತ್ವ ಅವರದ್ದು.
ಇಷ್ಟು ಮಾತ್ರವಲ್ಲದೆ ಅವರ ತಾಯಿಯವರು ನಡೆಸಿಕೊಂಡು ಬಂದಿರುವಂತಹ ಮೈಸೂರಿನ ಶಕ್ತಿಧಾಮ ಆಶ್ರಮದ ಹೆಣ್ಣುಮಕ್ಕಳನ್ನು ಕೂಡ ಹಲವಾರು ವರ್ಷಗಳಿಂದ ತಮ್ಮ ಸ್ವಂತ ಖರ್ಚಿನಿಂದ ನೋಡಿಕೊಂಡು ಬರುತ್ತಿದ್ದಾರೆ. ಇಂದು ಹಲವಾರು ಜನ ಸ್ವಾವಲಂಬಿಯಾಗಿ ದುಡಿದು ತಿನ್ನುತ್ತಿದ್ದಾರೆ ಎಂದರೆ ಅದಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೂಡ ಕಾರಣರಾಗಿದ್ದಾರೆ. ನಿರ್ಮಾಪಕನಾಗಿ ಕೂಡ ಹಲವಾರು ಜನರಿಗೆ ಕೆಲಸವನ್ನು ನೀಡುವಂತಹ ದೇವರು ಕೂಡ ಆಗಿದ್ದರು.
ಇಷ್ಟೆಲ್ಲಾ ಒಳ್ಳೆಯ ಗುಣಗಳನ್ನು ಹೊಂದಿರುವ ಹಾಗೂ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನೆಚ್ಚಿನ ನಟ ಯಾರು ಎಂಬುದಾಗಿ ನೀವು ಕೇಳಬಹುದು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನೆಚ್ಚಿನ ನಟ ಯಾರು ಎಂಬುದನ್ನು ಕೇಳಿದರೆ ನೀವು ಕೂಡ ಆಶ್ಚರ್ಯ ಪಡಬಹುದು. ಹೌದು ಗೆಳೆಯರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನೆಚ್ಚಿನ ನಟ ನವರಸನಾಯಕ ಜಗ್ಗೇಶ್.
ಒಂದು ಸಂದರ್ಶನದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೇ ಸ್ವತಃ ಖುದ್ದಾಗಿ ವಿಚಾರದ ಕುರಿತಂತೆ ಖುಲಾಸೆ ಮಾಡಿದ್ದಾರೆ. ಹೌದು ತರ್ಲೆ ನನ್ ಮಗ ಸಿನಿಮಾವನ್ನು ನೋಡಿದ ನಂತರ ನವರಸನಾಯಕ ಜಗ್ಗೇಶ್ ಅವರ ಅಭಿಮಾನಿಯಾಗಿದ್ದರು ನಮ್ಮೆಲ್ಲರ ನೆಚ್ಚಿನ ಅಪ್ಪು. ನವರಸ ನಾಯಕ ಜಗ್ಗೇಶ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಬ್ಬರೂ ಕೂಡ ಸಹೋದರತ್ವದ ಬಾಂಧವ್ಯವನ್ನು ಹೊಂದಿದ್ದರು. ಇಬ್ಬರು ಹಲವಾರು ಕಡೆಗಳಲ್ಲಿ ಹಲವಾರು ದೇವಸ್ಥಾನಗಳಿಗೆ ಒಟ್ಟಿಗೆ ಹೋಗಿರುವುದನ್ನು ಕೂಡ ನಾವು ಹಲವಾರು ಬಾರಿ ಭಾವಚಿತ್ರಗಳಲ್ಲಿ ನೋಡಿದ್ದೇವೆ. ಈಗ ನಾವೆಲ್ಲರೂ ಏನೇ ಯೋಚಿಸಿದರೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮರಳಿ ಮತ್ತೆ ಬರಲಾರರು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ವಾಗಿರುವ ಜೇಮ್ಸ್ ಚಿತ್ರವನ್ನು ನಾವೆಲ್ಲರೂ ಚಿತ್ರಮಂದಿರಗಳಲ್ಲಿ ವೀಕ್ಷಿಸುವ ಮೂಲಕ ಅವರಿಗೆ ಅರ್ಥಪೂರ್ಣ ವಿದಾಯವನ್ನು ಹೇಳೋಣ.