ಹೊಸ ಧಾರವಾಹಿ ಬಂದಮೇಲೆ ಮತ್ತೆ ಬದಲಾದ ರೇಟಿಂಗ್, ಈ ಬಾರಿಯ ಟಾಪ್-5 ರೇಟಿಂಗ್ ಹೊಂದಿರುವ ಧಾರಾವಾಹಿಗಳು ಯಾವ್ಯಾವು ಗೊತ್ತೇ??
ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬ ಮನುಷ್ಯ ಕೂಡ ದಿನನಿತ್ಯ ಕೆಲಸ ಕಾರ್ಯ ಜವಾಬ್ದಾರಿಗಳು ಎಂದು ಜಂಜಾಟದಲ್ಲಿ ಮುಳುಗಿರುತ್ತಾರೆ. ಆತನಿಗೆ ಕೆಲಸ ಮುಗಿಸಿ ಮನೆಗೆ ಬಂದಾಗ ವಿಶ್ರಾಂತಿಯ ನೆಪದಲ್ಲಿ ಮನೋರಂಜನೆ ರಿಲ್ಯಾಕ್ಸೇಷನ್ ಅನ್ನು ನೀಡುತ್ತದೆ. ಅದರಲ್ಲೂ ಕೂಡ ಪ್ರತಿನಿತ್ಯ ಕೆಲಸ ಬಿಟ್ಟು ಮನೆಗೆ ಬಂದು ಊಟವಾದ ನಂತರ ಎಲ್ಲರೂ ಒಟ್ಟಾಗಿ ಕುಳಿತು ನೋಡುವುದೇ ಕಿರುತೆರೆ ವಾಹಿನಿಯಲ್ಲಿ ಪ್ರಸಾರವಾಗುವ ಅಂತಹ ಧಾರವಾಹಿ ಹಾಗೂ ಸಿನಿಮಾಗಳನ್ನು.
ಅದರಲ್ಲಿ ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯ ಮಟ್ಟಿಗೆ ಹೇಳುವುದಾದರೆ ರಿಯಾಲಿಟಿ ಶೋ ಹಾಗೂ ಸಿನಿಮಾಗಳನ್ನು ಹಿಂದಿಕ್ಕಿ ಕನ್ನಡದ ಧಾರವಾಹಿಗಳು ಕಿರುತೆರೆಯನ್ನು ಆಕ್ರ’ಮಿಸಿಕೊಂಡಿವೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಅದರಲ್ಲೂ ಇತ್ತೀಚಿಗೆ ಕಿರುತೆರೆಯ ಧಾರಾವಾಹಿಯ ನಟರ ಜನಪ್ರಿಯತೆಯನ್ನು ವುದು ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಸಾಮಾಜಿಕವಾಗಿ ದ್ವಿಗುಣಗೊಂಡಿದೆ ಎಂದರೆ ತಪ್ಪಾಗಲಾರದು. ಸಿನಿಮಾ ನಟರಷ್ಟೇ ಜನರ ಪ್ರೀತಿಯನ್ನು ಧಾರವಾಹಿಯ ನಟ-ನಟಿಯರು ಕೂಡ ಪಡೆಯುತ್ತಾರೆ. ಧಾರವಾಹಿಗಳು ಜನರ ಜೀವನಕ್ಕೆ ಇನ್ನಷ್ಟು ಹತ್ತಿರವಾಗಲು ಮುಖ್ಯಕಾರಣ ದೈನಂದಿನ ವಾಗಿ ಪ್ರಸಾರವಾಗುವ ಸಾಮಾನ್ಯವಾಗಿ ಎಲ್ಲರಿಗೂ ಮನಸ್ಸಿಗೆ ಹತ್ತಿರವಾಗುವ ಅಂತಹ ಕಥೆಯನ್ನು ಹೊಂದಿರುವುದಾಗಿದೆ.
ಇನ್ನು ಕನ್ನಡ ಕಿರುತೆರೆ ಮಟ್ಟಿಗೆ ಧಾರವಾಹಿಗಳನ್ನು ತೆಗೆದುಕೊಂಡರೆ ಟಾಪ್ ಎರಡು ವಾಹಿನಿಗಳು ಎಂದರೆ ಜೀ ಕನ್ನಡ ಹಾಗೂ ಕಲರ್ಸ್ ಕನ್ನಡ ವಾಹಿನಿ. ಜೀ ಕನ್ನಡ ವಾಹಿನಿಯಿಂದ ಪುಟ್ಟಕ್ಕನ ಮಕ್ಕಳು ಹಿಟ್ಲರ್ ಕಲ್ಯಾಣ ಜೊತೆ ಜೊತೆಯಲಿ ಸತ್ಯ ಕಮಲಿ ಕೃಷ್ಣ ಸುಂದರಿ ಮುಂತಾದ ದಾರವಾಹಿಗಳು ಮುಂಚೂಣಿಯಲ್ಲಿ ಕಂಡುಬರುತ್ತವೆ. ಇನ್ನು ಕಲರ್ಸ್ ಕನ್ನಡವನ್ನು ತೆಗೆದುಕೊಂಡರೆ ಕನ್ನಡತಿ ರಾಮಾಚಾರಿ ಗಿಣಿರಾಮ ಗೀತಾ ಹೀಗೆ ಹತ್ತು ಹಲವಾರು ಧಾರವಾಹಿಗಳು ಕಂಡುಬರುತ್ತದೆ. ಕಿರುತೆರೆ ವಾಹಿನಿಗಳ ಜೀವಾಳವಾಗಿರುವುದೇ ಧಾರವಾಹಿಗಳ ಜನಪ್ರಿಯತೆ. ಇನ್ನು ಟಿ ಆರ್ ಪಿ ವಿಚಾರಕ್ಕೆ ಬಂದರೆ ಸ್ಥಾನಗಳು ಪ್ರತಿವಾರ ಬದಲಾವಣೆ ಆಗುತ್ತಲೇ ಇದೆ.
ತಮಗೆಲ್ಲರಿಗೂ ತಿಳಿದಿರುವಂತೆ ಧಾರವಾಹಿಗಳ ರೇಟಿಂಗ್ ಸ್ಥಾನವನ್ನು ವೀಕ್ಷಕರ ವೀಕ್ಷಣೆ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಇನ್ನು ಈ ಬಾರಿಯ ಟಾಪ್-5 ಧಾರವಾಹಿಗಳು ಯಾವುದು ಎನ್ನುವ ಕುರಿತಂತೆ ವೀಕ್ಷಕರಲ್ಲಿ ಕುತೂಹಲ ಮನೆ ಮಾಡಿತ್ತು. ಈಗಾಗಲೇ ಕುರಿತಂತೆ ಫಲಿತಾಂಶ ಹೊರಬಿದ್ದಿದ್ದು ಯಾವ ದಾರವಾಹಿ ಯಾವ ಫಲಿತಾಂಶವನ್ನು ಪಡೆದಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಪ್ರತಿಯೊಂದು ಧಾರವಾಹಿಗಳು ಕೂಡ ಕರ್ನಾಟಕದ ಮೂಲೆಮೂಲೆಯಲ್ಲೂ ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಹೊಂದಿವೆ.
ಪ್ರತಿಬಾರಿ ಟಾಪ್-5 ಧಾರವಾಹಿಗಳನ್ನು ನೋಡಿದಾಗ ಐದು ಸ್ಥಾನದಲ್ಲಿ ಕೂಡ ಜೀ ಕನ್ನಡ ವಾಹಿನಿಯ ಧಾರವಾಹಿಗಳೇ ಕುಳಿತುಕೊಂಡು ಇರುತ್ತಿದ್ದವು. ಆದರೆ ಕಳೆದ ಬಾರಿ ರಾಮಾಚಾರಿ ಟಾಪ್ 5ರ ಲಿಸ್ಟಿಗೆ ಲಗ್ಗೆ ಇಟ್ಟಿತ್ತು. ಹೌದು ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರವಾಹಿ ಯಾಗಿರುವ ಸತ್ಯ ಈ ಬಾರಿ ರಾಮಾಚಾರಿಯನ್ನು ಹಿಂದಿಕ್ಕಿ 5ನೇ ಸ್ಥಾನವನ್ನು ಪಡೆದುಕೊಂಡಿದೆ. ಹೀಗಾಗಿ ಈ ಬಾರಿಯ ಟಾಪ್-5 ಧಾರವಾಹಿಗಳಲ್ಲಿ ಕೊಂಚ ಬದಲಾವಣೆ ಕೂಡ ಕಂಡುಬರುತ್ತದೆ.
ಹಾಗಿದ್ದರೆ ಈ ಬಾರಿ ಬದಲಾವಣೆ ಹೊಂದಿರುವ ಈ ಪಟ್ಟಿಯಲ್ಲಿ ಯಾವ ಧಾರವಾಹಿ ಯಾವ ಸ್ಥಾನವನ್ನು ಪಡೆದುಕೊಂಡಿದೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಮೊದಲ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಎರಡನೇ ಸ್ಥಾನದಲ್ಲಿ ಗಟ್ಟಿಮೇಳ ಧಾರಾವಾಹಿ ಮೂರನೇ ಸ್ಥಾನದಲ್ಲಿ ಹಿಟ್ಲರ್ ಕಲ್ಯಾಣ ಧಾರಾವಾಹಿ ನಾಲ್ಕನೇ ಸ್ಥಾನದಲ್ಲಿ ಜೊತೆ ಜೊತೆಯಲ್ಲಿ ಧಾರವಾಹಿ ಹಾಗೂ 5ನೇ ಸತ್ಯ ಧಾರವಾಹಿ ಕಂಡುಬರುತ್ತದೆ. ಇನ್ನು ಜನಪ್ರಿಯ ಧಾರವಾಹಿ ಯಾಗಿರುವ ರಾಮಾಚಾರಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇವುಗಳಲ್ಲಿ ನಿಮ್ಮ ನೆಚ್ಚಿನ ಧಾರವಾಹಿ ಯಾವುದು ಎನ್ನುವುದನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಶೇರ್ ಮಾಡಿಕೊಳ್ಳುವುದನ್ನು ಮಾತ್ರ ಮರಿಬೇಡಿ.