ಸಮಂತಾ ರವರ ಕಿಚ್ಚು ಹಬ್ಬಿಸುವ ಫೋಟೋಗಳಿಗೆ ಷಾಕಿಂಗ್ ಕಾಮೆಂಟ್ ಮಾಡಿದ ನಾಗಚೈತನ್ಯ ಸಂಬಂಧಿ, ಏನು ಗೊತ್ತೇ??

16

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಹಲವಾರು ವರ್ಷಗಳ ಕಾಲ ಪ್ರೀತಿ ಹಾಗೂ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ನಟಿ ಸಮಂತಾ ರವರು ಕೆಲವು ತಿಂಗಳುಗಳ ಹಿಂದೆ ತಿಲಾಂಜಲಿ ಇಟ್ಟಿದ್ದರು. ಕಳೆದ ವರ್ಷ ಅತ್ಯಂತ ಹೆಚ್ಚು ಸುದ್ದಿ ಆದಂತಹ ವಿಚಾರವೇ ಸಮಂತ ಹಾಗೂ ನಾಗಚೈತನ್ಯ ರವರ ವಿವಾಹ ವಿಚ್ಛೇದನದ ಸುದ್ದಿ. ಮೊದಮೊದಲಿಗೆ ಸಮಂತಾ ರವರು ಈ ದುಃಖದಿಂದ ಹೊರಬರಲು ಚಿತ್ರರಂಗದಿಂದ ದೂರವಿದ್ದು ತಮ್ಮನ್ನು ತಾವು ಒಂಟಿಯಾಗಿ ಇಟ್ಟುಕೊಂಡಿದ್ದರು.

ನಂತರ ಹಲವಾರು ಸ್ಥಳಗಳಿಗೆ ಭೇಟಿ ಕೊಟ್ಟು ತಮ್ಮ ದುಃಖವನ್ನು ಮರೆಯಲು ಪ್ರಾರಂಭಿಸಿದರು. ಸದ್ಯಕ್ಕಂತೂ ಕೈಯಲ್ಲಿ ಹಲವಾರು ಚಿತ್ರಗಳ ಅವಕಾಶವನ್ನು ಹಿಡಿದುಕೊಂಡಿರುವ ಬಹುಬೇಡಿಕೆ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಐಟಂ ಡ್ಯಾನ್ಸ್ ನಿಂದ ಹಿಡಿದು ಮಹಿಳಾ ಪ್ರಾಧಾನ್ಯತೆ ಹೊಂದಿರುವ ಚಿತ್ರದವರೆಗೂ ಎಲ್ಲದರಲ್ಲೂ ಕೂಡ ಸಮಾಂತರ ಅವರೇ ಬೇಕು ಎಂದು ನಿರ್ಮಾಪಕ ಹಾಗೂ ನಿರ್ದೇಶಕರು ಸಾಲಿನಲ್ಲಿ ನಿಂತಿದ್ದಾರೆ. ಇತ್ತೀಚಿಗಷ್ಟೇ ನಟಿ ಸಮಂತ ರವರು ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ ನಲ್ಲಿ ಪಚ್ಚೆ ಹಸಿರು ಬಣ್ಣದ ಬಟ್ಟೆಯನ್ನು ಹಾಕಿಕೊಂಡು ಹೋಗಿದ್ದರು.

ಈ ಬಟ್ಟೆಯೊಂದಿಗೆ ಇರುವಂತಹ ಫೋಟೋಗಳನ್ನು ಇನ್ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಮಂತಾ ರವರು ಅಪ್ಲೋಡ್ ಮಾಡಿದ್ದರು. ಈ ಸಂದರ್ಭದಲ್ಲಿ ಅವರ ಮಾಜಿ ಪತಿ ಆಗಿರುವ ನಾಗಚೈತನ್ಯ ರವರ ಸಂಬಂಧಿಕರೊಬ್ಬರು ಕೂಡ ಕಾಮೆಂಟ್ ಮಾಡಿದ್ದಾರೆ. ನಟ ನಾಗಚೈತನ್ಯ ರವರ ಸೋದರಸಂಬಂಧಿ ಆಗಿರುವ ಹಾಗು ವೃತ್ತಿಯಲ್ಲಿ ವೈದ್ಯರಾಗಿರುವ ಆಶ್ರಿತಾ ದಗ್ಗುಬಾಟಿ ರವರು ಹಾರ್ಟ್ ಸಿಂಬಲ್ ಮೂಲಕ ಮೆಚ್ಚುಗೆಯ ಕಾಮೆಂಟನ್ನು ಈ ಫೋಟೋದ ಕಾಮೆಂಟ್ ಬಾಕ್ಸ್ನಲ್ಲಿ ಹಾಕಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ನಲ್ಲಿ ಶೇರ್ ಮಾಡಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Get real time updates directly on you device, subscribe now.