ಮಹೇಶ್ ಬಾಬು ರವರ ಮುಂದಿನ ಚಿತ್ರಕ್ಕೆ ಬಾಲಿವುಡ್ ಟಾಪ್ ಬೆಡಗಿಯರನ್ನು ಕರೆತರಲು ಮುಂದಾದ ರಾಜಮೌಳಿ. ಯಾರಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ, ಸದ್ಯ ಮಾರ್ಚ್ 25 ಕ್ಕೆ ಬಹುನಿರೀಕ್ಷೆಯ ಆರ್ ಆರ್ ಆರ್ ಚಿತ್ರ ಬಿಡುಗಡೆಯಾಗಲಿದೆ. ರಾಜಮೌಳಿ ನಿರ್ದೇಶನದ ಈ ಚಿತ್ರ ಈಗಾಗಲೇ ಸಾಕಷ್ಟು ಹೈಪ್ ಪಡೆದುಕೊಂಡಿದೆ. ಜ್ಯುನಿಯರ್ ಎನ್ ಟಿ ಆರ್ ಮತ್ತು ರಾಮ್ ಚರಣ್ ಅಭಿನಯದ ಒಂದು ಹಾಡು ಕೂಡ ಸಕ್ಕತ್ ಫೇಮಸ್ ಆಗಿದ್ದು, ಅದೆಷ್ಟೋ ಜನ ಆ ಹಾಡಿಗೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದನ್ನು ನೋಡಬಹುದು.
ಈ ಚಿತ್ರ ರಿಲೀಸ್ ಗೂ ಮುನ್ನವೇ ರಾಜಮೌಳಿ ಹಾಗೂ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಕಂಬಿನೇಷನ್ ನಲ್ಲಿ ಇನ್ನೊಂದು ಚಿತ್ರ ಸಿದ್ಧವಾಗ್ತಾ ಇದೆ. ಈ ಚಿತ್ರದ ಬಗ್ಗೆಆಗಲಿ, ಸಿನಿಮಾ ಹೆಸರಾಗಲಿ ಇನ್ನೂ ಬಹಿರಂಗಪಡಿಸಿಲ್ಲವಾದರೂ ಈ ಸಿನಿಮಾಕ್ಕೆ ಸಂಬಂಧಿಸಿದಂತೆ ಒಂದು ರೋಚಕ ವಿಷಯ ಬಯಲಾಗಿದೆ.
ಇತ್ತೀಚಿಗೆ ಪ್ಯಾನ್ ಇಂಡಿಯ ಸಿನಿಮಾಗಳು ಅಂದ್ರೆ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಸಿದ್ಧವಾಗುವ ಚಿತ್ರಗಳಿಂದಾಗಿ ಬಾಲಿವುಡ್ ನಟಿಯರು ದಕ್ಷಿಣ ಭಾರತ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹೌದು. ಸದ್ಯ, ಬಾಲಿವುಡ್ ಸ್ಟಾರ್ ನಟಿಯರಾದ ಆಲಿಯಾ ಭಟ್ ಹಾಗೂ ದೀಪಿಕಾ ಪಡುಕೋಣೆ ಟಾಲಿವುಡ್ ಗೆ ಸಿನಿಮಾದಲ್ಲಿ ನಟಿಸಿದ್ದು ಸಕ್ಕತ್ ಸುದ್ದಿಯಲ್ಲಿದ್ದಾರೆ.
ಈಗಾಗಲೇ ಆರ್ ಆರ್ ಆರ್ ಚಿತ್ರದಲ್ಲಿ ಆಲಿಯಾ ಭಟ್ ಲುಕ್ ನ್ನು ಜನ ಮೆಚ್ಚಿಕೊಂಡಿದ್ದಾರೆ. ಆಕೆಯ ಸೀತೆಯ ಪಾತ್ರಕೆ ಸೈ ಎಂದಿದ್ದಾರೆ. ಇನ್ನು ಮಹೇಶ್ ಬಾಬು ಜೊತೆಯಾಗಿ ಆವರ ಮುಂದಿನ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರಂತೆ ಆಲಿಯಾ. ಅಲ್ಲದೇ ಜ್ಯೂನಿಯರ್ ಎನ್ ಟಿ ಆರ್ ಅಭಿನಯದ, ಎನ್ ಟಿ ಆರ್ 30ಚಿತ್ರದಲ್ಲಿಯೂ ಕೂಡ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಆಲಿಯಾ. ಅಲ್ಲಿಗೆ ಈಗಾಗಲೇ ಮೂರು ಟಾಲಿವುಡ್ ಚಿತ್ರಗಳಲ್ಲಿ ಆಲಿಯಾ ಕಾಣಿಸಿಕೊಳ್ಳಲಿದ್ದು, ಇನ್ನೂ ಹಲವು ಚಿತ್ರಗಳಲ್ಲಿ ನಟಿಸುವ ಸಾಧ್ಯತೆಗಳಿವೆ.