ಮೊದಲ ಬಾರಿಗೆ ಲಕ್ಷಣ ಧಾರವಾಹಿ ಬಗ್ಗೆ ಮಾತನಾಡಿದ ನಟಿ ಭಾಗ್ಯಶ್ರೀ, ಪ್ರೇಕ್ಷಕರಿಗೆ ವಿಷಯ ಗೊತ್ತಿದ್ರು, ಇವರಿಗೆ ಗೊತ್ತಿಲ್ಲ. ಏನು ಹೇಳಿದ್ದಾರೆ ಗೊತ್ತೇ??
ನಮಸ್ಕಾರ ಸ್ನೇಹಿತರೇ, ಇತ್ತೀಚಿಗೆ ಧಾರಾವಾಹಿಗಳು ಇಷ್ಟವಾಗುತ್ತಿರೋದು ಅವುಗಳ ಕಥೆ ಹಾಗೂ ಚಿತ್ರೀಕರಣದ ಮೂಲಕ. ಯಾಕಂದ್ರೆ ಯಾವುದೇ ಹಿಂದಿ ಧಾರಾವಾಹಿಗೂ ಕಡಿಮೆ ಇಲ್ಲದಂತೆ, ಕನ್ನಡ ಧಾರಾವಾಹಿಗಳ ಚಿತ್ರೀಕರಣ ನಡೆಸಲಾಗುತ್ತದೆ. ಅದರಲ್ಲೂ ಧಾರಾವಾಹಿಗಳಲ್ಲಿ ನಡೆಯುವ ಮದುವೆ ಸೀನ್ ಗಳಂತೂ ಬಹಳ ಅದ್ಧೂರಿಯಾಗಿ ಚಿತ್ರೀಕರಣ ನಡೆಸಲಾಗುತ್ತದೆ.
ಇದೀಗ ಲಕ್ಷಣ ಧಾರಾವಾಹಿ ಈ ಸಾಲಿಗೆ ಸೇರುತ್ತದೆ. ನಟ ಜಗನ್ ನಟನೆ ಹಾಗೂ ನಿರ್ಮಾಣ ಹೊಂದಿರುವ ಈ ಧಾರಾವಾಹಿ ಆರಂಭದಿಂದಲೂ ಕಥೆಯಲ್ಲಿ ಹಿಡಿತ ಇಟ್ಟುಕೊಂಡು ಪ್ರಸಾರವಾಗುತ್ತಿದೆ. ಹಾಗಾಗಿ ಸಾಕಷ್ಟು ವೀಕ್ಷಕರನ್ನು ಗಳಿಸಿಕೊಂಡು ಬಂದಿದೆ ಲಕ್ಷಣ ಧಾರಾವಾಹಿ ತಂಡ. ಇದೀಗ ಲಕ್ಷಣ ಧಾರಾವಾಹಿ ತಂಡ ನೇರವಾಗಿ ಗೋವಾ ಗೆ ಶಿಫ್ಟ್ ಆಗಿದೆ. ಹೌದು, ಭೂಪತಿ ಹಾಗೂ ಶ್ವೇತಾ ಮದುವೆ ತಯಾರಿ ಗೋವಾದಲ್ಲಿ ನಡೆದಿದೆ. ಈ ಸಮಯದಲ್ಲಿ ಧಾರಾವಾಹಿ ಶೋಟಿಂಗ್ ನಲ್ಲಿದ್ದ ಕಲಾವಿದರು ಧಾರಾವಾಹಿಯ ಬಗ್ಗೆ ಮಾತನಾಡಿದ್ದಾರೆ.
ಶ್ವೇತಾ ನಿಜವಾದ ಅಮ್ಮನಾಗಿ ಜಯಾ ಪಾತ್ರವನ್ನು ನಿಭಾಯಿಸುತ್ತಿರುವ ಭಾಗ್ಯಶ್ರೀ ತಮ್ಮ ಪಾತ್ರದ ಬಗ್ಗೆ ಅತ್ಯಂತ ಖುಷಿಯನ್ನು ವ್ಯಕ್ತಪಡಿಸುತ್ತಾರೆ. ನಟಿ ಭಾಗ್ಯಶ್ರಿಯವರು ಇತ್ತೀಚಿನ ವರ್ಷಗಳಲ್ಲಿ ನೆಗೆಟಿವ್ ಪಾತ್ರಗಳನ್ನೇ ಮಾಡಿಕೊಂಡು ಬಂದಿದ್ದವರು. ಅದರಲ್ಲೂ ಅವರ ಲಕ್ಷಿ ಬಾರಮ್ಮಾ ಸೀರಿಯಲ್ ನ ಕುಮುದಾ ಮಾತ್ರ ನೆಗೆಟಿವ್ ರೋಲ್ ಆಗಿದ್ದರೂ ಹಲವರಿಗೆ ಇಷ್ಟವಾಗಿತ್ತು. ಇದೀಗ ಮತ್ತೆ ಜಯಾ ಎನ್ನುವ ಪಾಸಿಟಿವ್ ಪಾತ್ರದಲ್ಲಿ ಭಾಗ್ಯಶ್ರೀ ನಟಿಸುತ್ತಿದ್ದಾರೆ.
ತಮ್ಮ ಪಾತ್ರದ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸುವ ಇವರು ಅಭಿಮಾನಿಗಳು ಬಂದು ಮೇಡಂ ಜಯಾ ಪಾತ್ರದಲ್ಲಿ ತುಂಬಾ ಮುದ್ದಾಗಿ ಕಾಣಿಸುತ್ತೀರಿ ಎನ್ನುವಾಗ ಸಾಕಷ್ಟು ಖುಷಿಯಾಗುತ್ತದೆ. ಜಯಾ ಪಾತ್ರದ ಮುಗ್ದತೆ, ಉಡುಪುಗಳನ್ನು ಜನ ಇಷ್ಟಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಜೊತೆಗೆ ಧಾರಾವಾಹಿಯಲ್ಲಿ ಜನ ಎಷ್ಟು ಲೀನವಾಗಿರುತ್ತಾರೆ ಎಂದರೆ ಎಷ್ಟೋ ಜನ ನನ್ನ ಬಳಿ ಬಂದು ಮೇಡಂ ಶ್ವೇತಾಳೇ ನಿಮ್ಮ ಮಗಳು ನಿಮಗಿನ್ನೂ ಗೊತ್ತಿಲ್ವಲ್ಲ ಎಂದು ಧಾರಾವಾಹಿಯನ್ನು ನಿಜ ಎನ್ನುವಂತೆ ಫೀಲಿಂಗ್ಸ್ ವ್ಯಕ್ತಪಡಿಸುತ್ತಾರೆ. ಸಂತೋಷವಾಗುತ್ತದೆ ಎಂಡು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಸದ್ಯ ಭಾಗ್ಯಶ್ರೀ 2 ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.