ರಶ್ಮಿಕಾಗೆ ಠಕ್ಕರ್ ಕೊಟ್ಟ ಟಾಮ್ & ಜರ್ರಿ ಡ್ಯಾನ್ಸ್, ರಶ್ಮಿಕಾ ಮಾಡುವ ಕೆಲಸವನ್ನು ಮೊದಲೇ ಮಾಡಿತ್ತೇ ಟಾಮ್?? ಮಸ್ತ್ ವೈರಲ್ ಆಯಿತು ವಿಡಿಯೋ, ಹೇಗಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ, ಸಾಮಾಜಿಕ ಜಾಲತಾಣಗಳಿಂದಲೇ ಎಷ್ಟೋ ಜನರ ದಿನ ಶುರುವಾಗೋದು. ಅದರಲ್ಲೂ ಯಾವುದಾದರೂ ಉತ್ತಮ ವಿಡಿಯೋ ಅಥವಾ ಕಾಮೆಡಿ ವಿಡಿಯೋ ವೈರಲ್ ಆಗಿದ್ದು ಅದೇನಾದ್ರೂ ಬೆಳಬೆಳಗ್ಗೆ ಕಣ್ಣಿಗೆ ಬಿದ್ದರೆ ಆನಂದವೋ ಆನಂದ. ಇನ್ನು ಆಫೀಸ್ ನಲ್ಲಿ ಬಾಸ್ ಬೈದ್ರೆ, ನಿದ್ದೆ ಬರದೇ ಇದ್ರೆ, ಬೋರ್ ಆದ್ರೆ ಎಲ್ಲದಕ್ಕೂ ಇರೋ ಒಂದೇ ಸೊಲ್ಯೂಶನ್ ಅಂದ್ರೆ ಅದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊಗಳನ್ನ ನೋಡೋದು.
ಇತ್ತೀಚಿಗೆ ವೈರಲ್ ಆದ ಒಂದು ವಿಡಿಯೋ, ಹೀಗೆ ನೋಡಿ ನೋಡಿ ನಕ್ಕು ನಕ್ಕು ಇನ್ನಷ್ಟು ವೈರಲ್ ಮಾಡಿಬಿಟ್ಟಿದ್ದಾರೆ ನೆಟ್ಟಿಗರು. ನಿವೇನಾದ್ರೂ ಇನ್ನೂ ಈ ವಿಡಿಯೋ ನೋಡಿಲ್ಲಾ ಅಂದ್ರೆ ತಪ್ಪದೇ ನೋಡಿ. ಟಾಮ್ & ಜರ್ರಿ ಡ್ಯಾನ್ಸ್ ವಿಡಿಯೋ ಇದು. ಟಾಮ್ & ಜರ್ರಿ ಈ ಬಾರಿ ಪೈಪೋಟಿ ಕೊಟ್ಟಿದ್ದು ಯಾರೆಗೆ ಗೊತ್ತಾ? ನಟಿ ರಶ್ಮಿಕಾ ಮಂದಣ್ಣ ಅವರಿಗೆ!
ಹೌದು ಸಾಮಾಜಿಕ ಜಾಲತಾಣ ಬಳಸುವವರಲ್ಲಿ ಎಂಥೆಂಥ ಟ್ಯಾಲೆಂಟ್ ಇರುವವರು ಇರುತ್ತಾರೆ ಅನ್ನೋದನ್ನ ಇಂಥ ಕೆಲವು ಎಡಿಟೆಟ್ ವಿಡಿಯೋಗಳು ಹೇಳುತ್ತವೆ. ಪುಷ್ಫ ಚಿತ್ರದ ಸಾಮಿ ಸಾಮಿ ಹಾಡನ್ನು ನೀವು ಕೇಳಿರುತ್ತೀರಿ. ಈ ಹಾಡಿಗೆ ಈಗಾಗಲೇ ಸಿಕ್ಕಾಪಟ್ಟೆ ರೀಲ್ಸ್ ಗಳನ್ನೂ ಜನ ಮಾಡಿದ್ದಾರೆ. ಜೊತೆಗೆ ಅಲ್ಲೂ ಅರ್ಜುನ್ ಅವರ ಶ್ರೀವಲ್ಲಿ ಹಾಡೂ ಕೂಡ ಸಕ್ಕತ್ ವೈರಲ್ ಆಗಿದೆ. ಈ ಎರಡೂ ಹಾಡು ಹಾಗೂ ದೃಶ್ಯವನ್ನು ಒಳಗೊಂಡ ಎಡಿಟೆಡ್ ವಿಡಿಯೋ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಸಕ್ಕತ್ ಸದ್ದು ಮಾಡಿದೆ.
ಇಷ್ಟು ದಿನ ಪುಷ್ಪ ಹಾಡಿಗೆ ಪುಟ್ಟ ಮಗುವಿನಿಂದ ಹಿಡಿದು ಹಿರಿಯ ಜೀವಗಳೂ ಸ್ಟೆಪ್ ಹಾಕಿದ್ದನ್ನ ನೀವು ನೋಡಿರಬಹುದು. ಆದರೆ ಇದೀಗ ಪ್ರಖ್ಯಾತ ಕಾರ್ಟೂನ್ ಆದ ಟಾಮ್ & ಜರ್ರಿ ಕೂಡ ಸಾಮಿ ಸಾಮಿ ಅಂಥ ನೃತ್ಯ ಮಾಡಿವೆ. ರಶ್ಮಿಕಾ ಮಂದಣ್ಣ ಹಾಗೂ ಕಾರ್ಟೂನ್ ನ್ನು ಒಂದೇ ಫ್ರೇಮ್ ನಲ್ಲಿಟ್ಟು ಸಾಮಿ ಹಾಡಿಗೆ ಇಬ್ಬರೂ ಡ್ಯಾನ್ ಮಾಡಿದಂತೆ ಎಡಿಟ್ ಮಾಡಲಾಗಿದೆ. ಟಾಮ್ & ಜರ್ರಿ ಯ ಕೆಲವು ಸೀನ್ ಗಳನ್ನು ಕಟ್ ಮಾಡಿ ಈ ಹಾಡಿಗೆ ಜೋಡಿಸಲಾಗಿದೆ.
ಟಾಮ್ ಆಂಡ್ ಜರಿಯನ್ನು ನೋಡಿ ನೀವು ನಕ್ಕಿದ್ರೆ, ಈ ವಿಡಿಯೊ ನೋಡಿ ನಕ್ಕುನಕ್ಕು ಹೊಟ್ಟೆ ಹುಣ್ಣಾಗೋದು ಗ್ಯಾರಂಟಿ! ಈ ವಿಡಿಯೋವನ್ನು Edits MukheshG ಎಂಬ ಯು ಟ್ಯೂಬ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಪುಷ್ಪ ಚಿತ್ರದ ಹಲವು ಸೀನ್ ಗಳಿಗೆ ಟಾಮ್ & ಜರ್ರಿ ಕಾರ್ಟೂನ್ ಸಿಂಕ್ ಮಾಡಲಾಗಿದೆ. ಈ ವಿಡಿಯೋ ನೋಡಿದವರಲ್ಲೇ ಹಂಚಿಕೊಂಡು ಕಮೆಂಟ್ ಮಾಡುತ್ತಿದ್ದಾರೆ.