57 ವರ್ಷ ವಯಸ್ಸಾಗಿದ್ದರೂ ಕೂಡ ನೀತಾ ಅಂಬಾನಿ ಅದೇಗೆ ಇಷ್ಟು ಸುಂದರವಾಗಿ ಕಾಣುತ್ತಾರೆ ಗೊತ್ತೇ?? ಫಿಟ್ ಆಗಿರಲು ಕಾರಣವೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ, ಈ ಬೊಜ್ಜು, ಸ್ಥೂಲಕಾಯತೆ ಅಥವಾ ಅತಿಯಾದ ದೇಹ ತೂಕ ಯಾರಿಗೆ ಬೇಕು ಹೇಳಿ! ಹೀಗೆ ಹೆಚ್ಚು ತೂಕ ಇರುವವರು ತೂಕ ಇಳಿಸಲು ನಾನಾ ಬಗೆಯ ಪ್ರಯತ್ನಗಳನ್ನು ಮಾಡುತ್ತಾರೆ. ಎಷ್ಟೋ ಸ್ಟಾರ್ ನಟಿಯರು ತಮ್ಮ 40ರ ವಯಸ್ಸಿನಲ್ಲೂ ಫೀಟ್ ಆಂಡ್ ಫೈನ್ ಆಗಿರುವುದನ್ನು ನೋಡಿದಾಗ ನಾವೂ ಹೀಗಿರಬೇಕು ಅನ್ನಿಸುತ್ತೆ. ಹೀಗೆ ಇರುವುದಕ್ಕೆ ತಾರೆಯರ ಡೆಡಿಕೇಶನ್ ಕೂಡ ಅಷ್ಟೇ ಇರುತ್ತೆ. ಉದಾಹರಣೆಗೆ ನೀತಾ ಅಂಬಾನಿ 90 ಕೆಜಿ ತೂಕವನ್ನು ಹೊಂದಿದ್ರು. ಆದರೆ ಈಗ ಅವರನ್ನು ನೋಡಿದ್ರೆ ಇವರೇನಾ ನೀತಾ ಅಂಬಾನಿ ಅಂತ ಕೇಳುವಷ್ಟು ಫೀಟ್ ಹಾಗೂ ಸುಂದರವಾಗಿ ಕಾಣಿಸುತ್ತಾರೆ. ಇದಕ್ಕೆ ಕಾರಣ ಏನು ಗೊತ್ತಾ?
ನೀತಾ ತನ್ನ ಆಹಾರ ಮತ್ತು ಜೀವನಶೈಲಿಯನ್ನು ಸರಿಯಾದ ರೀತಿಯಲ್ಲಿ ಬದಲಾಯಿಸಿಕೊಳ್ಳುತ್ತಾ ಹೋದರು. ಆರೋಗ್ಯಕರವಾದ ಹಣ್ಣುಗಳು, ತರಕಾರಿಗಳು ಮತ್ತು ನಟ್ಸ್ ಗಳನ್ನ ಮಾತ್ರ ತಿನ್ನೋದಕ್ಕೆ ಶುರು ಮಾಡಿದ್ರು. ಅಷ್ಟೇ ಅಲ್ಲ, ನೀತಾ ಈಗ ವ್ಯಾಯಾಮ, ಯೋಗ ವರ್ಕೌಟ್ ಕಡೆ ಹೆಚ್ಚು ಗಮನ ಕೊಡ್ತಾರೆ. ದಿನಕ್ಕೆ ಕನಿಷ್ಠ 40 ನಿಮಿಷಗಳ ಕಾಲ ವ್ಯಾಯಾಮ, ಯೋಗ ಮತ್ತು ಸ್ಪಿಮ್ಮಿಂಗ್ ಮಾಡ್ತಾರೆ.
ಇನ್ನು ನೀತಾ ಅವರು ರನ್ನಿಂಗ್ ನ್ನ ತುಂಬಾ ಇಷ್ಟಪಡುತ್ತಾರೆ. ಫಿಟ್ನೆಸ್ ತಜ್ಞರು ಸಹ ತೂಕ ಇಳಿಸೋದಕ್ಕೆ ರನ್ನಿಂಗ್ ಹಾಗೂ ಸರಿಯಾದ ಆಹಾರ ಕ್ರಮ ಇವೆರಡೂ ಇದ್ದರೆ ಒಳ್ಳೆಯದು ಎಂದು ಸಲಹೆ ನೀಡುತ್ತಾರೆ. ಇನ್ನು ನೀತಾ ಅವರ ರುಟೀನ್ ಹೇಳೋದಾದ್ರೆ ಬೆಳಗ್ಗೆ ಎದ್ದು ಬಾದಾಮಿ ಮತ್ತು ವಾಲ್ ನಟ್ ತಿನ್ನುತ್ತಾರೆ. ಉಪಾಹಾರಕ್ಕೆ ಮೊಟ್ಟೆಯ ಬಿಳಿ ಭಾಗದ ಆಮ್ಲೆಟ್ ತಿನ್ನೋದನ್ನ ರೂಢಿಸಿಕೊಂಡಿದ್ದಾರೆ, ಅಲ್ಲದೇ ಕಾರ್ಬೋಹೈಡ್ರೇಟ್ ಕಡಿಮೆ ಇರುವ ಆಹಾರ ಪದಾರ್ಥಗಳನ್ನೇ ಸೇವಿಸುತ್ತಾರೆ.
ನೀತಾ ಅವರು ಮಧ್ಯಾಹ್ನದ ಊಟಕ್ಕೆ ಹಸಿರು ತರಕಾರಿ ಅಥವಾ ಸೂಪ್, ಸಂಜೆ ಪ್ರೋಟಿನ್ ಯುಕ್ತ ಲಘು ಆಹಾರ ಹಾಗೂ ರಾತ್ರಿ ಊಟಕ್ಕೆ ಮತ್ತೆ ಹಸಿರು ತರಕಾರಿ ಹಾಗೂ ಸೂಪ್ ನ್ನೇ ತಿನ್ನುತ್ತಾರೆ. ಇನ್ನೂ ತೂಕ ಇಳಿಸುವುದಕ್ಕೆ ಸಹಾಯಕವಾಗುವ ಬೀಟರೂಟ್ ಜ್ಯೂಸ್ ಕೂಡ ಕುಡಿತಾರೆ ನೀತಾ. ಸ್ನೇಹಿತರೆ, ಈ ವಯಸ್ಸಿನಲ್ಲಿಯೇ ಇಷ್ಟು ಕಟ್ಟುನಿಟ್ಟಿನ ಜೀವನ ಶೈಲಿ ರೂಢಿಸಿಕೊಂಡಿದ್ದಕ್ಕೆ ನೀತಾ ಅಂಬಾನಿ ಇನ್ನೂ ಯಂಗ್ ಆಗಿಯೇ ಇರೋದು. ಹಾಗಾದ್ರೆ ಯಾರಿಗೆ ನಿಜವಾಗಿ ತೂಕ ಇಳಿಸಬೇಕೆಂದಿದೆಯೋ, ಫೀಟ್ ಆಗಬೇಕೆಂದು ಬಯಸುತ್ತೀರೋ ಅಂಥವರು ಒಮ್ಮೆ ಈ ಜೀವನ ಶೈಲಿಯನ್ನ ಅಳವಡಿಸಿಕೊಂಡು ನೋಡಿ.