ಕನ್ನಡ, ತೆಲುಗು, ಹಿಂದಿ ಅಷ್ಟೇ ಅಲ್ಲಾ, ಇಡೀ ಪ್ಯಾನ್ ಇಂಡಿಯಾ ನಟಿಯಾಗಬೇಕು ಎಂದ ರಶ್ಮಿಕಾ, ಯಾಕಂತೆ ಗೊತ್ತೇ?? ಅದಕ್ಕೂ ಇದೆ ಬಲವಾದ ಕಾರಣ.
ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ನಮ್ಮ ಭಾರತೀಯ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಕಲ್ಪನೆ ಹೆಚ್ಚಾಗಿದೆ. ಇದಕ್ಕೆ ಪ್ರಮುಖ ಕಾರಣವಾಗಿರುವುದು ಬಾಹುಬಲಿ ಚಿತ್ರ ಎಂದರೆ ಖಂಡಿತವಾಗಿ ತಪ್ಪಾಗಲಾರದು. ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದ ನಂತರ ಕೆಜಿಎಫ್ ಹಾಗೂ ಪುಷ್ಪಾ ಚಿತ್ರಗಳು ಪ್ಯಾನ್ ಇಂಡಿಯಾ ಹೆಸರಿಗೆ ನ್ಯಾಯ ಒದಗಿಸುವಂತಹ ಕಾರ್ಯವನ್ನು ಮಾಡಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ ಈಗಾಗಲೇ ಮಲಯಾಳಂ ಭಾಷೆಯನ್ನು ಹೊರತುಪಡಿಸಿ ನಟಿ ರಶ್ಮಿಕಾ ಮಂದಣ್ಣ ನವರು ಬಹುತೇಕ ಎಲ್ಲಾ ಪ್ರಮುಖ ಭಾಷೆಗಳಲ್ಲಿ ನಟಿಸಿದ್ದಾರೆ ಹಾಗೂ ನಟಿಸುತ್ತಿದ್ದಾರೆ.
ಇದಕ್ಕಾಗಿ ಅವರನ್ನು ನ್ಯಾಷನಲ್ ಕೃಷ್ ಎಂದು ಕರೆಯುತ್ತಾರೆ. ಇನ್ನು ಇವರು ಈಗಾಗಲೇ ಹಿಂದಿಯಲ್ಲಿ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಕೈಹಾಕಿದ್ದಾರೆ. ಉದಾಹರಣೆಗೆ ಅಮಿತಾಬ್ ಬಚ್ಚನ್ ನಟನೆಯ ಗುಡ್ ಬೈ ಸಿದ್ಧಾರ್ಥ್ ಮಲ್ಹೋತ್ರ ನಟನೆಯ ಮಿಷನ್ ಮಜ್ನು ಇನ್ನೂ ಹಲವಾರು ಸಿನಿಮಾಗಳಿಗೆ ನಟಿಸಲಿದ್ದು ಹಲವಾರು ಆಲ್ಬಮ್ ಸಾಂಗ್ ಗಳಲ್ಲಿ ಕೂಡ ಕಾಣಿಸಿ ಕೊಂಡಿದ್ದಾರೆ. ಆದರೆ ಇತ್ತೀಚಿಗಷ್ಟೇ ಸಂದರ್ಶನವೊಂದರಲ್ಲಿ ರಶ್ಮಿಕ ಮಂದಣ್ಣ ನವರು ತಾನು ಪ್ಯಾನ್ ಇಂಡಿಯನ್ ನಟಿ ಆಗಬೇಕು ಎಂದು ಹೇಳಿಕೊಂಡಿದ್ದಾರೆ. ಅರೆ ಇದೇನು ಈಗಾಗಲೇ ದೇಶಾದ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ

ಇನ್ನೂ ಯಾವರೀತಿಯ ಪ್ಯಾನ್ ಇಂಡಿಯನ್ ನಟಿ ಎಂಬುದಾಗಿ ನೀವು ಕೇಳಬಹುದು. ಅದಕ್ಕೂ ಒಂದು ಬಲವಾದ ಕಾರಣವಿದೆ ಹೇಳುತ್ತೇವೆ ಬನ್ನಿ. ರಶ್ಮಿಕ ಮಂದಣ್ಣ ಹೇಳುವಂತೆ ನಾನು ಕರ್ನಾಟಕದಲ್ಲಿದ್ದಾಗ ಕನ್ನಡ ಮಾತಾಡುತ್ತೇನೆ ತೆಲುಗು ಸಿನಿಮಾ ಗಳಿಗೆ ಹೋದಾಗ ತೆಲುಗು ತಮಿಳು ಸಿನಿಮಾಗಳಿಗೆ ಹೋದಾಗ ತಮಿಳು ಹಿಂದಿ ಸಿನಿಮಾಗಳಿಗೆ ಹೋದಾಗ ಹಿಂದಿ ಮಾತನಾಡುತ್ತೇನೆ. ಆದರೆ ಹಿಂದಿ ಭಾಷೆಯಲ್ಲಿ ನಾನು ನಟಿಸಲು ಹೋದಾಗ ನನ್ನನ್ನು ದಕ್ಷಿಣ ಭಾರತ ಚಿತ್ರರಂಗದ ನಟಿ ಎಂಬುದಾಗಿ ಗುರುತಿಸುತ್ತಾರೆ. ಯಾವುದೇ ಭಾಷೆಯ ಅಡ್ಡಿ ನಟನೆಗೆ ಬರಬಾರದು ಎಂಬುದು ನನ್ನ ಆಸೆ. ಹೀಗಾಗಿಯೇ ನಾನು ಪ್ಯಾನ್ ಇಂಡಿಯನ್ ನಟಿ ಎಂಬ ಗುರುತನ್ನು ಹೊಂದಿರಬೇಕು ಎಂಬುದು ನನ್ನ ಆಸೆ ಎಂಬುದಾಗಿ ಹೇಳಿದ್ದಾರೆ.