ಬಿಗ್ ನ್ಯೂಸ್: ಯಶಸ್ಸಿನ ಮೇಲೆ ಯಶಸ್ಸು ಪಡೆಯುತ್ತಿರುವ ಸಮಯದಲ್ಲಿ ಸಾವಿನ ಕುರಿತಂತೆ ಮಾತನಾಡಿದ ಸಮಂತಾ ಯಾಕೆ ಗೊತ್ತೇ??

13

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ನಟಿ ಸಮಂತಾ ರವರು ದಕ್ಷಿಣ ಭಾರತ ಚಿತ್ರರಂಗದ ಅನಭಿಷಕ್ತ ರಾಣಿಯಾಗಿ ಮಿಂಚಿ ಮೆರೆದವರು. ದಕ್ಷಿಣ ಭಾರತ ಚಿತ್ರರಂಗದ ಅದರಲ್ಲೂ ತಮಿಳು ಮಗು ತೆಲುಗು ಚಿತ್ರದಲ್ಲಿ ನಿರ್ದೇಶಕರ ಮೊದಲ ಆಯ್ಕೆ ಸಮಂತ ರವರೇ ಆಗಿದ್ದರು. ಇದಾದನಂತರ ತಮ್ಮ ನೆಚ್ಚಿನ ನಾಗಚೈತನ್ಯ ರವರನ್ನು ಹಲವಾರು ವರ್ಷಗಳ ಕಾಲ ಪ್ರೀತಿಸಿ 2017 ರಲ್ಲಿ ಎಲ್ಲರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗುತ್ತಾರೆ. ಆದರೆ ಯಾರ ಕಣ್ಣು ಬಿತ್ತೋ ಏನೋ ಇಬ್ಬರೂ ಕೂಡ ನಾಲ್ಕು ವರ್ಷಗಳಲ್ಲಿ ಅಂದರೆ ಕಳೆದ ವರ್ಷ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ.

ಅತಿ ಚಿಕ್ಕ ವಯಸ್ಸಿಗೆ ಜೀವನದಲ್ಲಿ ಎಲ್ಲಾ ರೀತಿಯ ಏಳುಬೀಳುಗಳನ್ನು ಕಂಡಿದ್ದರು ನಮ್ಮ ನಟಿ ಸಮಂತಾ ರವರು. ಇತ್ತೀಚಿಗಿನ ದಿನಗಳಲ್ಲಿ ಸಿನಿಮಾಗಳಲ್ಲಿ ಅವರು ತಮ್ಮನ್ನು ತಾವು ಸಾಕಷ್ಟು ತೊಡಗಿಸಿಕೊಂಡಿದ್ದಾರೆ. ಆದರೆ ವಿವಾಹ ವಿಚ್ಛೇದನವನ್ನು ಪಡೆದುಕೊಂಡ ನಂತರ ಕೆಲವು ಕಾಲಗಳ ಕಾಲ ಸಮಂತ ರವರು ಪಟ್ಟಿರುವ ಪಾಡು ನಿಜಕ್ಕೂ ಅವರಿಗೆ ಗೊತ್ತು. ಈ ಸಮಯದಲ್ಲಿ ಅವರಿಗೆ ಸ್ವಿಜರ್ಲ್ಯಾಂಡ್ನ ದಂಪತಿಗಳು ಕೂಡ ನೆರವಾಗಿದ್ದರು ಎನ್ನುವುದನ್ನು ಈಗಾಗಲೇ ಹಲವಾರು ಬಾರಿ ಹೇಳಿದ್ದಾರೆ. ಎಲ್ಲಕ್ಕಿಂತ ಮೆಚ್ಚುವ ವಿಚಾರವೇನೆಂದರೆ ವಿವಾಹ ವಿಚ್ಛೇದನ ಪಡೆದ ನಂತರ ಇಬ್ಬರೂ ಕೂಡ ಪರಸ್ಪರ ಎಲ್ಲೂ ಕೆಟ್ಟ ವಿಚಾರವನ್ನು ಮಾತನಾಡಿಲ್ಲ.

ತಮ್ಮ ಪಾಡಿಗೆ ತಮ್ಮ ಜೀವನವನ್ನು ನಡೆಸಿಕೊಂಡು ಹೋಗಿದ್ದಾರೆ. ಇನ್ನು ಇದೇ ಒಂಟಿತನದ ಸಂದರ್ಭದಲ್ಲಿ ಇಂಗ್ಲಿಷ್ ಚಿತ್ರಗಳ ಸ್ಟಾರ್ ನಟನಾಗಿರುವ ವಿಲ್ ಸ್ಮಿತ್ ರವರ ಪುಸ್ತಕವನ್ನು ಸಮಂತಾ ರವರು ಓದುತ್ತಿದ್ದರಂತೆ. ಈ ಮೂವತ್ತು ವರ್ಷಗಳಲ್ಲಿ ಸೋಲು ಕಷ್ಟ ಅವಮಾನ ವಿವಾಹ ವಿಚ್ಛೇದನ ಹಾಗೂ ಮರಣಗಳ ಕಹಿ ಅನುಭವಗಳೊಂದಿಗೆ ಬದುಕಿದ್ದೇನೆ. ಬಾಹ್ಯ ಶಕ್ತಿಗಳಿಂದ ಭೀ’ತಿಯನ್ನು ಕೂಡ ಎದುರಿಸಿಕೊಂಡು ಬದುಕಿದ್ದೇನೆ. ಇಂತಹ ವೈರಾಗ್ಯದ ಸಾಲುಗಳನ್ನು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸಮಂತರವರು ಹಂಚಿಕೊಂಡಿದ್ದಾರೆ. ಇನ್ನು ಕೂಡ ಹಳೆಯ ನೆನಪುಗಳಿಂದ ಸಮಂತಾ ರವರು ಹೊರಬಂದಿಲ್ಲ ಅದಕ್ಕಾಗಿ ಅವರು ಫಿಲಾಸಫಿಯ ಮೊರೆ ಹೋಗಿದ್ದಾರೆ ಎಂದು ಹೇಳಬಹುದಾಗಿದೆ. ಅದೇನೇ ಇರಲಿ ಸಮಂತ ರವರು ಇದನ್ನೆಲ್ಲ ಮರೆತು ಹೊಸ ಜೀವನದ ಕಡೆ ಮುಖ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ.

Get real time updates directly on you device, subscribe now.