ಪವನ್ ಕಲ್ಯಾಣ್ ರವರನ್ನು ಸಿಕ್ಕಸಿಕ್ಕಲ್ಲಿ ಟೀಕಿಸುತ್ತಿದ್ದ ರಾಮ್ ಗೋಪಾಲ್ ವರ್ಮಾ ಈಗ ಮಾಡ್ತಿರೋದೇನು ಗೊತ್ತಾ??

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪವನ್ ಕಲ್ಯಾಣ್ ರವರ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ. ಅವರು ತೆಲುಗು ಚಿತ್ರರಂಗದ ಪ್ರಮುಖ ನಟನಾಗಿದ್ದರು ಕೂಡ ಅವರ ಜನಪ್ರಿಯತೆಯನ್ನುವುದು ಭಾರತದ ಮೂಲೆಮೂಲೆಯಲ್ಲಿ ಪಸರಿಸಿದೆ. ಇನ್ನು ಹಲವಾರು ಸಮಯಗಳಿಂದ ಅವರು ರಾಜಕೀಯ ಕ್ಷೇತ್ರದಲ್ಲಿ ವ್ಯಸ್ತರಾಗಿದ್ದರು. ಆದರೆ ಈಗ ಮತ್ತೊಮ್ಮೆ ತೆರೆಯ ಮೇಲೆ ಅಬ್ಬರಿಸಲು ಬಂದಿದ್ದಾರೆ. ಹೌದು ಪವನ್ ಕಲ್ಯಾಣ ರವರು ಭೀಮ್ಲಾ ನಾಯಕ್ ಚಿತ್ರದ ಮೂಲಕ ಮತ್ತೆ ದೊಡ್ಡ ಪರದೆ ಮೇಲೆ ಅಬ್ಬರಿಸಲು ಬಂದಿದ್ದಾರೆ.

ಇನ್ನು ನಾವು ಹೇಳಲು ಹೊರಟಿರುವ ವಿಚಾರದ ಮುಖ್ಯ ಕೇಂದ್ರಬಿಂದು ರಾಮ್ ಗೋಪಾಲ್ ವರ್ಮ. ನೀವು ಮೊದಲಿನಿಂದಲೂ ತೆಲುಗು ಚಿತ್ರರಂಗವನ್ನು ಅನುಸರಿಸಿಕೊಂಡು ಬಂದಿದ್ದರೆ ಈ ವಿಚಾರ ನಿಮಗೆ ಖಂಡಿತವಾಗಿ ಮನದಟ್ಟಾಗುತ್ತದೆ. ಮೊದಲಿನಿಂದಲೂ ರಾಮ್ ಗೋಪಾಲ್ ವರ್ಮಾ ಪವನ್ ಕಲ್ಯಾಣ್ ಅವರನ್ನು ಟೀಕಿಸುತ್ತಲೇ ಬಂದಿದ್ದರು. ರಾಮ್ ಗೋಪಾಲ್ ವರ್ಮಾ ಈಗಾಗಲೆ ತೆಲುಗು ಕನ್ನಡ ಸೇರಿದಂತೆ ಹಿಂದಿ ಚಿತ್ರರಂಗದಲ್ಲಿ ಕೂಡ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಿರುವ ಸ್ಟಾರ್ ನಿರ್ದೇಶಕ. ಮೊದಲಿನಿಂದಲೂ ತಮ್ಮ ಸೋಶಿಯಲ್ ವಿಡಿಯೋ ಖಾತೆಗಳ ಮೂಲಕ ಪವನ್ ಕಲ್ಯಾಣ್ ಅವರನ್ನು ಒಂದಲ್ಲ ಒಂದು ಕಾರಣಕ್ಕಾಗಿ ರಾಮ್ ಗೋಪಾಲ್ ವರ್ಮಾ ಟೀಕಿಸುತ್ತಿದ್ದರು.

ಇಷ್ಟೇ ಏಕೆ ತಮ್ಮ ಸಿನಿಮಾದಲ್ಲಿ ಕೂಡ ರಾಮ್ ಗೋಪಾಲ್ ವರ್ಮಾ ರವರು ಪವನ್ ಕಲ್ಯಾಣ್ ಅವರ ಪಾತ್ರವನ್ನು ಡಮ್ಮಿ ಪಾತ್ರವನ್ನಾಗಿ ತೋರಿಸಿದ್ದರು. ಆದರೆ ಇತ್ತೀಚೆಗಷ್ಟೇ ನಡೆದಿರುವ ಕೆಲವು ಬೆಳವಣಿಗೆಗಳು ಎಲ್ಲರಿಗೆ ಆಶ್ಚರ್ಯವನ್ನು ಮೂಡುವಂತೆ ಮಾಡಿದೆ. ಹೌದು ಇತ್ತೀಚಿನ ದಿನಗಳಲ್ಲಿ ಅಂದರೆ ಭೀಮ್ಲಾ ನಾಯಕ್ ಚಿತ್ರದ ಬಿಡುಗಡೆ ಆದಾಗಿನಿಂದ ಪವನ್ ಕಲ್ಯಾಣ್ ಅವರನ್ನು ರಾಮ್ ಗೋಪಾಲ್ ವರ್ಮಾ ರವರು ಹಾಡಿ ಹೊಗಳುತ್ತಿದ್ದಾರೆ. ಸದಾಕಾಲ ಬದ್ಧವೈರಿ ಗಳಂತೆ ಕಾಣುತ್ತಿದ್ದ ರಾಮ್ ಗೋಪಾಲ್ ವರ್ಮಾ ರವರು ಸಡನ್ನಾಗಿ ಪವನ್ ಕಲ್ಯಾಣ್ ಅವರನ್ನು ಮೇರುನಟ ಎಂದು ಹೊಗಳುತ್ತಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Get real time updates directly on you device, subscribe now.