ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ತಬಲಾನಾಣಿ ಅವರ ಮಗಳು, ಆದರೆ ನಟಿಯಾಗಿ ಅಲ್ಲ, ಬೇರೆ ಯಾವ ರೀತಿ ಗೊತ್ತೇ??

18

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಹಲವಾರು ವರ್ಷಗಳಿಂದ ಕೇವಲ ನಾಯಕನಟರು ಮಾತ್ರವಲ್ಲದೆ ಸಿನಿಮಾಗಳ ಮೂಲಕ ಹಲವಾರು ಹಾಸ್ಯ ಕಲಾವಿದರು ಕೂಡ ಕನ್ನಡ ಪ್ರೇಕ್ಷಕರ ಮನ ರಂಜಿಸಿದ್ದಾರೆ. ಇಂದು ನಾವು ಮಾತನಾಡುತ್ತಿರುವುದು ಕನ್ನಡ ಚಿತ್ರರಂಗದ ಒಂದು ಕಾಲದ ಬಹುಬೇಡಿಕೆಯ ಹಾಗೂ ಸ್ಟಾರ್ ಹಾಸ್ಯನಟ ಆಗಿದ್ದಂತಹ ತಬಲನಾಣಿ ಅವರ ಕುರಿತಂತೆ. ತಬಲಾ ನಾಣಿ ಅವರ ಹಾಸ್ಯಮಯ ಡೈಲಾಗ್ ಕೇಳುತ್ತಿದ್ದಂತೆ ಪ್ರೇಕ್ಷಕರು ನಕ್ಕುನಲಿಯುತ್ತಿದ್ದರು.

ಕಿರುತೆರೆಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸುತ್ತಿದ್ದ ತಬಲಾ ನಾಣಿ ಯವರು ನವರಸನಾಯಕ ಜಗ್ಗೇಶ್ ಅವರ ಮಠ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುತ್ತಾರೆ. ಈಗಾಗಲೇ ಹಲವಾರು ಸಿನಿಮಾಗಳಲ್ಲಿ ಅದರಲ್ಲೂ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುವ ಮೂಲಕ ತಾವು ಏನೆಂಬುದನ್ನು ಕನ್ನಡ ಪ್ರೇಕ್ಷಕರಿಗೆ ಸಾಬೀತು ಪಡಿಸಿರುವ ತಬಲನಾಣಿ ಅವರು ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ನಟಿಸುವುದನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡಿದ್ದಾರೆ ಎಂದು ಹೇಳಬಹುದಾಗಿದೆ.

ಇನ್ನು ಅವರ ಮಗಳಾಗಿರುವ ಚಿತ್ರ ರವರು ಕೂಡ ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ತಂದೆ ಕಲಾವಿದನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರೆ ಮಗಳು ಚಿತ್ರ ಕನ್ನಡ ಚಿತ್ರರಂಗದಲ್ಲಿ ಗಾಯಕಿಯಾಗಿ ಪಾದಾರ್ಪಣೆ ಮಾಡುವ ಯೋಚನೆ ಮಾಡಿದ್ದಾರೆ. ಇವರು ಡಬ್ಬಿಂಗ್ ಆರ್ಟಿಸ್ಟ್ ಕೂಡ ಆಗಿದ್ದಾರೆ. ಚಿತ್ರ ರವರು ಹಾಡಿರುವ ಹಾಡುಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿದೆ. ತಂದೆಯಂತೆಯೇ ಮುಂದಿನ ದಿನಗಳಲ್ಲಿ ಮಗಳು ಕೂಡ ಯಶಸ್ವಿಯಾಗಲಿ ಎಂದು ಹಾರೈಸೋಣ.

Get real time updates directly on you device, subscribe now.