ಆರ್ಸಿಬಿ ಬಳಿ ಹಣ ಇಲ್ಲದೆ ಇದ್ದರೂ ಮಧ್ಯಮ ಕ್ರಮಾಂಕ ಬಲಪಡಿಸಲು ರೈನಾ ಬರಬಹುದು, ಹೇಗೆ ಗೊತ್ತೇ?? ಅದಕ್ಕೂ ಇದೆ ದಾರಿ.

97

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈ ಬಾರಿಯ ಐಪಿಎಲ್ 2022 ರ ಮೆಗಾ ಹರಾಜು ಪ್ರಕ್ರಿಯೆ ಸಾಂಗವಾಗಿ ನೆರವೇರಿದ್ದು ಬಹುತೇಕ ಎಲ್ಲಾ ತಂಡಗಳು ಕೂಡ ಸಮಾಧಾನಕರ ರೀತಿಯಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮಗೆ ಬೇಕಾದಂತಹ ಆಟಗಾರರನ್ನು ಖರೀದಿಸಿದೆ. ಇನ್ನು ನಮ್ಮೆಲ್ಲರ ನೆಚ್ಚಿನ ಹಾಗೂ ಹೆಮ್ಮೆಯ ಕರ್ನಾಟಕದ ತಂಡವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕುರಿತಂತೆ ಮಾತನಾಡೋಣ ಬನ್ನಿ. ವಿದೇಶಿ ಆಟಗಾರರು ಪರೀಕ್ಷೆಯಲ್ಲಿ ಗುರುತಿಸುವುದಾದರೆ ಗ್ಲೆನ್ ಮ್ಯಾಕ್ಸ್ವೆಲ್ ಡುಪ್ಲೆಸಿಸ್ ಹೆಜಲ್ ವುಡ್ ಹಸರಂಗ ಸೇರಿದಂತೆ ಹಲವಾರು ಆಟಗಾರರ ಹೆಸರು ಕೇಳಿ ಬರುತ್ತದೆ.

ಪ್ಲೇಯಿಂಗ್ 11ರಲ್ಲಿ ಕೇವಲ ಗರಿಷ್ಠವೆಂದರೆ 4 ವಿದೇಶಿ ಆಟಗಾರರನ್ನು ತಂಡ ಹೊಂದಬಹುದಾಗಿದೆ. ಉಳಿದ ಏಳು ಆಟಗಾರರು ಭಾರತೀಯರೇ ಆಗಬೇಕು. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಭಾರತೀಯರ ಅದರಲ್ಲೂ ಹೆಸರಾಂತ ಭಾರತೀಯ ಆಟಗಾರರ ಕುರಿತಂತೆ ಹೇಳುವುದಾದರೆ ವಿರಾಟ್ ಕೊಹ್ಲಿ ದಿನೇಶ್ ಕಾರ್ತಿಕ್ ಹಾಗೂ ಹರ್ಷಲ್ ಪಟೇಲ್ ಅವರನ್ನು ಬಿಟ್ಟರೆ ಬೇರೆ ಯಾರು ಅಷ್ಟೊಂದು ಕಾಣಿಸುವುದಿಲ್ಲ. ಅದರಲ್ಲೂ ಬ್ಯಾಟಿಂಗ್ ವಿಭಾಗದಲ್ಲಿ ಕೇವಲ ವಿರಾಟ್ ಕೊಹ್ಲಿ ಹಾಗೂ ದಿನೇಶ್ ಕಾರ್ತಿಕ್ ರವರು ಮಾತ್ರ ಕಾಣಿಸಿಕೊಳ್ಳುತ್ತಾರೆ. ಹೀಗಾಗಿ ಯಾಕೆ ಸುರೇಶ್ ರೈನಾ ರವರನ್ನು ಕರೆತರಬಹುದು ಎಂಬುದು ಅಭಿಮಾನಿಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಲೇ ಇರುತ್ತಾರೆ.

ಹರಾಜು ಪ್ರಕ್ರಿಯೆಯಲ್ಲಿ ಮಾರಾಟವಾಗಿದೆ ಉಳಿದುಕೊಂಡಿರುವ ಆಟಗಾರರಲ್ಲಿ ಸುರೇಶ್ ರೈನಾ ಕೂಡ ಒಬ್ಬರು. ಅವರನ್ನು ಈಗ ಖರೀದಿಸಬಹುದಾ ಎನ್ನುವ ಪ್ರಶ್ನೆಗೆ ಖಂಡಿತವಾಗಿಯೂ ಇಲ್ಲ ಎಂಬುದು ಉತ್ತರವಾಗಿದೆ. ಆದರೆ ಅವರನ್ನು ತಂಡಕ್ಕೆ ಕರೆತರುವ ಇನ್ನೊಂದು ಮಾರ್ಗ ಕೂಡ ಇದೆ. ಅದೇನೆಂದರೆ ಯಾವುದೇ ಭಾರತೀಯ ಆಟಗಾರ ಇಂಜುರಿ ಅಥವಾ ವೈಯಕ್ತಿಕ ಕಾರಣದಿಂದಾಗಿ ಈ ಬಾರಿಯ ಐಪಿಎಲ್ ನಲ್ಲಿ ನಾನು ಭಾಗವಹಿಸಲು ಸಾಧ್ಯವಿಲ್ಲ ಎಂದು ಹೇಳಿದರೆ ಅವರ ಬದಲಿಗೆ ಸುರೇಶ್ ರೈನಾ ರವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಕರೆತರಬಹುದಾಗಿದೆ. ಈ ಅವಕಾಶವನ್ನು ಮುಂದಿನ ದಿನಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉಪಯೋಗಿಸಿ ಕೊಳ್ಳುತ್ತಾ ಇಲ್ಲವೇ ಎಂಬುದನ್ನು ಕಾದುನೋಡಬೇಕಾಗಿದೆ.rain

Get real time updates directly on you device, subscribe now.