ಭಾರತೀಯ ಕ್ರಿಕೆಟ್ ತಂಡದ ಈ ಖ್ಯಾತ ಆಟಗಾರನನ್ನು ಮದುವೆಯಾಗಲು ಇಷ್ಟಪಟ್ಟಿದ್ದರಂತೆ ಪ್ರಿಯಾಂಕ ಚೋಪ್ರಾ; ಯಾರು ಗೊತ್ತಾ??

16

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೆ ಗೊತ್ತಿರುವ ಹಾಗೆ ಈಗಾಗಲೇ ಪ್ರಿಯಾಂಕ ಚೋಪ್ರಾ ಅವರು ಹಾಲಿವುಡ್ ಚಿತ್ರರಂಗದ ಖ್ಯಾತ ನಟ ಹಾಗೂ ಗಾಯಕ ಆಗಿರುವ ನಿಕ್ ಜೋನಸ್ ರವರನ್ನು ಮದುವೆಯಾಗಿದ್ದಾರೆ. ಇನ್ನು ಯಾರ ಶಿಫಾರಸ್ಸು ಇಲ್ಲದೆ ಪ್ರಿಯಾಂಕ ಚೋಪ್ರಾ ರವರು ಇಲ್ಲಿಯವರೆಗೂ ಬೆಳೆದುಬಂದಿರುವ ಹಾದಿ ನಿಜಕ್ಕೂ ಕೂಡ ಸ್ಪೂರ್ತಿದಾಯಕ ವಾದದ್ದು. ನಿಕ್ ಜೋನಸ್ ರವರನ್ನು ಮದುವೆ ಆಗುವ ಮುನ್ನ ಪ್ರಿಯಾಂಕ ಚೋಪ್ರಾ ರವರ ಹೆಸರು ಹಲವಾರು ಸೆಲೆಬ್ರಿಟಿಗಳ ಜೊತೆಗೆ ಕೇಳಿಬಂದಿತ್ತು.

ಆದರೆ ಪ್ರಿಯಾಂಕ ರವರು ಮದುವೆಯಾಗಿದ್ದು ಮಾತ್ರ ನಿಕ್ ಜೋನಸ್ ಅವರನ್ನು. ಇವರಿಬ್ಬರ ನಡುವೆ 10 ವರ್ಷದ ವಯಸ್ಸಿನ ಅಂತರವಿದ್ದರೂ ಕೂಡ ಇವರಿಬ್ಬರ ಪ್ರೀತಿಗೆ ವಯಸ್ಸಿನ ಅಡ್ಡಿ ಆಗಿಲ್ಲ. ಇನ್ನು ಒಂದು ಸಂದರ್ಭದಲ್ಲಿ ಪ್ರಿಯಾಂಕ ರವರಿಗೆ ಒಂದು ಪ್ರಶ್ನೆ ಬಂದಿತ್ತು. ಆಗ ನಟಿ ಪ್ರಿಯಾಂಕ ಚೋಪ್ರಾ ರವರು ಒಬ್ಬ ಕ್ರಿಕೆಟಿಗ ನನ್ನು ಮದುವೆಯಾಗುವ ಕುರಿತಂತೆ ಮಾತನಾಡಿದರು. ಹಾಗಿದ್ದರೆ ಅದು ಯಾರು ಎಂದು ತಿಳಿಯೋಣ ಬನ್ನಿ.

2000 ಇಸ್ವಿಯಲ್ಲಿ ಮಿಸ್ ಇಂಡಿಯಾ ಕಾಂಪಿಟೇಶನ್ ನಡೆಯುವಾಗ ಪ್ರಿಯಾಂಕ ಚೋಪ್ರಾ ರವರು ಕೂಡ ಸ್ಪರ್ಧಿಯಾಗಿದ್ದಾರು. ಆ ಸಂದರ್ಭದಲ್ಲಿ ತೀರ್ಪುಗಾರರ ಸ್ಥಾನದಲ್ಲಿ ಶಾರುಖ್ ಖಾನ್ ರವರು ಕೂಡ ಇದ್ದರು. ಈ ಸಂದರ್ಭದಲ್ಲಿ ಮೂರು ಜನರನ್ನು ಮದುವೆಯಾಗುವ ಆಯ್ಕೆಯನ್ನು ನೀಡುತ್ತೇನೆ ಯಾರನ್ನು ಮದುವೆಯಾಗುತ್ತೀರಿ ಎಂಬುದಾಗಿ ಉತ್ತರಿಸಿ ಎಂದು ಶಾರುಖ್ ಖಾನ್ ರವರು ಪ್ರಿಯಾಂಕ ಚೋಪ್ರಾ ರವರನ್ನು ಕೇಳಿದ್ದರು

ಶಾರುಖ್ ಖಾನ್ ರವರ ಆಯ್ಕೆ ಹೇಗಿತ್ತು ಇಡೀ ವಿಶ್ವವೇ ಮೆಚ್ಚುವಂತಹ ಕ್ರಿಕೆಟ್ ಕ್ರೀಡಾಪಟು ಅಜರುದ್ದಿನ್, ಚಿನ್ನ ವಜ್ರಾಭರಣಗಳನ್ನು ಖರೀದಿಸ ಬಲ್ಲಂತಹ ಉದ್ಯಮಿ ಸ್ವರೋಸ್ಕಿ ಅಥವಾ ಇಲ್ಲಿ ಕುಳಿತಿರುವ ಅಂತಹ ಬಾಲಿವುಡ್ ಚಿತ್ರರಂಗದ ನನ್ನಂತಹ ತಾರೆ. ಯಾರನ್ನು ಆಯ್ಕೆ ಮಾಡುತ್ತೀರಿ ಎಂಬುದಾಗಿ ಹೇಳುತ್ತಾರೆ. ಆಗ ಪ್ರಿಯಾಂಕ ಚೋಪ್ರಾ ರವರು ಕ್ರಿಕೆಟಿಗ ಅಜರುದ್ದೀನ್ ಅವರನ್ನು ಆಯ್ಕೆ ಮಾಡುತ್ತಾರೆ. ಅದಕ್ಕೆ ಅವರು ನೀಡುವ ಕಾರಣವೇನೆಂದರೆ ಇಡೀ ದೇಶವೇ ಹೆಮ್ಮೆ ಪಡುವಂತಹ ವ್ಯಕ್ತಿ ನನ್ನ ಪತಿಯಾದರೆ ನನಗೂ ಕೂಡ ಹೆಮ್ಮೆಯಾಗುತ್ತದೆ ಎಂಬುದಾಗಿ ಹೇಳುತ್ತಾರೆ. ಈ ಉತ್ತರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ತಪ್ಪದೇ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.