ಪ್ರತಿಯೊಬ್ಬರೂ ಬಹಳ ಸುಲಭವಾಗಿ ಮನೆಯಲ್ಲಿಯೇ ಕೂತು ಇನ್ಸ್ಟಾಗ್ರಾಮ್ ನಿಂದಲೂ ಆದಾಯ ಗಳಿಸಬಹುದು. ಹೇಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ, ಇತ್ತೀಚಿಗೆ ಸಾಮಾಜಿಕ ಜಾಲತಣಗಳು ಹಣ ಗಲಿಸುವ ವೇದಿಕೆಯೂ ಆಗಿ ಮಾರ್ಪಟ್ಟಿವೆ. ಕೇವಲ ಮನೋರಂಜನೆಗೆ ಶುರುವಾಗಿದ್ದರೂ ಇದೀಗ ತನ್ನ ಬಳಕೆದಾರರಿಗೆ ಹಣ ಗಳಿಸಲು ಇಲ್ಲಿ ಅವಕಾಶ ಮಾಡಿಕೊಡಲಾಗುತ್ತಿದೆ. ಹಾಗೆಯೇ ಇನ್ಸ್ಟಾಗ್ರಾಮ್ ಕೂಡ ಹಣ ಸಂಪಾದಿಸಲು ಅನುವು ಮಾಡಿಕೊಡುತ್ತದೆ. ಇದಕ್ಕಾಗಿ ನೀವು ಏನೆಲ್ಲಾ ಮಾಡಬೇಕು ಬನ್ನಿ ನೋಡೋಣ.
ಇನ್ಸ್ಟಾದಲ್ಲಿ ಹಣ ಗಳಿಸಬೇಕೆಂದರೆ ಖಾತೆ ತೆರೆದರೆ ಸಾಲದು ಅದರಲ್ಲಿ ಇಷ್ಟೇ ಫಾಲೋವರ್ಸ್ ನ್ನು ಹೊಂದಿರಬೇಕು. ನೀವು ಇಲ್ಲಿ ಹಣ ಗಳಿಸುವುದಕ್ಕೆ ಕೇವಲ ಬೇರೆ ಬೇರೆ ಬ್ರ್ಯಾಂಡ್ ಅಥವಾ ಕಂಪನಿಯನ್ನು ಪ್ರಚಾರ ಮಾಡುವ ಮೂಲಕ ಹಣವನ್ನು ಗಳಿಸಬಹುದು. ಇಲ್ಲಿ ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕವೂ ನೀವು ಹಣವನ್ನು ಗಳಿಸಬಹುದು.
ಯಾವುದೇ ಉತ್ಪನ್ನವನ್ನು ಜಾಹೀರಾತು ಮಾಡಲು ನೀವು ಹಣವನ್ನು ಪಡೆಯಬಹುದು. ಆದರೆ ಇದಕ್ಕಾಗಿ ನೀವು ಕನಿಷ್ಟ 5 ಸಾವಿರ ಫಾಲೋವರ್ಸ್ ಹೊಂದಿರಬೇಕು, ಇದರೊಂದಿಗೆ ಎಂಗೇಜ್ ದರವೂ ಹೆಚ್ಚಿರಬೇಕು. ಬ್ರ್ಯಾಂಡ್‌ಗಳನ್ನು ಸಂಪರ್ಕಿಸಿ, ಪ್ರಾಯೋಜಕತ್ವ ಪಡೆಯಬಹುದು. ಇದನ್ನು ನಿಮ್ಮ ಖಾತೆಯಲ್ಲಿ ಹಂಚಿಕೊಂಡು ಬ್ರ್ಯಾಂಡಿಂಗ್ ಮಾಡಬಹುದು. ಅಲ್ಲದೇ ಅಫಿಲಿಯೇಟ್ ಲಿಂಕ್‌ಗಳ ಮೂಲಕ ಹಣ ಸಂಪಾದಿಸಬಹುದು. ನೀವು ಪ್ರಾಯೋಜಕರ ಪೋಸ್ಟ್‌ಗಳಿಂದ ನೇರ ಹಣವನ್ನು ಪಡೆಯಬಹುದು. ಆದರೆ ನಿಮ್ಮ ಹಂಚಿಕೊಂಡ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಎಷ್ಟು ಜನರು ಉತ್ಪನ್ನವನ್ನು ಖರೀದಿಸುತ್ತಾರೆ ಎಂಬುದು ಇಲ್ಲಿ ಮುಖ್ಯವಾಗಿರುತ್ತದೆ.
ಇನ್ನು ಇನ್ಸ್ಟಾದಲ್ಲಿ ಆನ್‌ಲೈನ್ ಶಾಪಿಂಗ್ ಪೇಜ್ ಶುರು ಮಡಬಹುದು. ಇಲ್ಲಿ ಬಳಕೆದಾರರು ನಿಮ್ಮ ಉತ್ಪನ್ನಗಳನ್ನು ಖರೀದಿಸಬಹುದು ಮತ್ತು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಬಹುದು. ಈ ರೀತಿಯೂ ಕೂಡ ಹಣಗಳಿಸಲು ಇನ್ಸ್ಟಾ ದಾರಿ ಮಾಡಿಕೊಟ್ಟಿದೆ. ಇನ್ನು ಯಾವುದೇ ಉತ್ಪನ್ನಗಳ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ನೀವು ಹಣವನ್ನು ಗಳಿಸಬಹುದು. ಇನ್ನು ಹಲವು ರೀತಿಯ ಸಲಹೆಗಳು, ಟಿಪ್ಸ್, ಆಹಾರ ತಯಾರಿಸುವುದು ಹೀಗೆ ಬೇರೆ ಬೇರೆ ರೀತಿಯ ಬ್ರ್ಯಾಂಡಿಂಗ್ ನ್ನು ನೀವೇ ಸೃಷ್ಟಿಸಿ ಹಣ ಗಳಿಸಬಹುದು. ಸಾಮಾಜಿಕ ಜಾಲ ತಾಣಗಳ ಬಗ್ಗೆ ಸರಿಯಾಗಿ ಅರಿತುಕೊಂಡರೆ ಇದರಲ್ಲಿ ಕುಳಿತಲ್ಲೇ ಸಾಕಷ್ಟು ಹಣ ಗಳಿಸಬಹುದಾಗಿದೆ.