14 ದಿನಗಳ ನ್ಯಾಯಾಂಗ ಬಂಧನವನ್ನು ಹೊಂದಿದ ಬೆನ್ನಲ್ಲೇ ವಕೀಲ ಜಗದೀಶ್ ರವರಿಗೆ ಇನ್ನೊಂದು ಶಾಕ್?? ಏನು ಗೊತ್ತೇ??

10

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಹಲವಾರು ಚಿತ್ರ ವಿಚಿತ್ರವಾದ ಘಟನೆಗಳು ನಡೆಯುತ್ತಿವೆ. ಅದರಲ್ಲೂ ಇಂದು ನಾವು ಮಾತನಾಡಲು ಹೊರಟಿರುವುದು ವಕೀಲ ಜಗದೀಶ್ ರವರ ಕುರಿತಂತೆ. ವಕೀಲ ಜಗದೀಶ್ ರವರ ಕುರಿತಂತೆ ಇತ್ತೀಚಿನ ದಿನಗಳಲ್ಲಿ ಹಲವಾರು ಪ್ರಕರಣಗಳು ಹಾಗೂ ವಿಚಾರಗಳು ಹೊರಬರುತ್ತಿವೆ. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಸಮ್ಮುಖದಲ್ಲಿ ನಡೆದಂತಹ ಗಲಾಟೆಯ ವಿಚಾರವಾಗಿ ವಕೀಲ ಜಗದೀಶ್ ರವರನ್ನು ಬೆಂಗಳೂರು ಪೊಲೀಸ್ ರವರು ಮೊನ್ನೆಯಷ್ಟೇ ಬಂಧಿಸಿದ್ದರು.

ಈಗಾಗಲೇ ವಕೀಲ ಜಗದೀಶ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ 14 ದಿನಗಳ ನ್ಯಾಯಾಂಗ ಬಂಧನವನ್ನು ಕೂಡ ಈಗಾಗಲೇ ವಿಧಿಸಲಾಗಿದೆ. ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದಂತಹ ಗಲಾಟೆ ವಿಚಾರವಾಗಿ ವಕೀಲರ ಸಂಘದ ಅಧ್ಯಕ್ಷರಾಗಿರುವ ವಿವೇಕ್ ರೆಡ್ಡಿ ಪೊಲೀಸ್ ಕಮಿಷನರ್ ಆಗಿರುವ ಕಮಲ್ ಪಂತ್ ಅವರಿಗೆ ದೂರನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಮಿಷನರ್ ಕೇಂದ್ರ ವಿಭಾಗಕ್ಕೆ ಸೂಚನೆಯನ್ನು ನೀಡಿದರು ಬೆಳಗಿನ ಜಾವವೇ ವಕೀಲ ಜಗದೀಶ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಅಧೀನ ಪಡಿಸಲಾಯಿತು.

ಆದರೆ ಇವುಗಳ ನಡುವೆಯೇ ವಕೀಲ ಜಗದೀಶ್ ರವರಿಗೆ ಇನ್ನೊಂದು ಸಂಕಷ್ಟ ಎದುರಾಗಿದೆ. ಈ ಕುರಿತಂತೆ ಕೂಡ ನಾವು ನಿಮಗೆ ತಿಳಿಸಲಿದೆ. ಹೌದು 14 ದಿನಗಳ ನ್ಯಾಯಾಂಗ ಬಂಧನವನ್ನು ಎದುರಿಸಲು ಸಿದ್ಧರಾಗಿರುವ ವಕೀಲ ಜಗದೀಶ್ ರವರಿಗೆ ಮತ್ತೊಂದು ಮಾಸ್ಟರ್ ಸ್ಟ್ರೋಕ್ ಎದುರಾಗಿದೆ. ವಕೀಲರ ಸಂಘ ವಾಗಿರುವ ಬಾರ್ ಕೌನ್ಸಿಲ್ ವಿರುದ್ಧ ವಕೀಲ ಜಗದೀಶ್ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವುದಕ್ಕಾಗಿ ಅವರನ್ನು ಬ್ಯಾನ್ ಮಾಡಲಾಗಿದ್ದು ಇನ್ನು ಮುಂದೆ ಅವರು ಕರ್ನಾಟಕದಲ್ಲಿ ವಕೀಲಿಕೆ ಮಾಡುವ ಹಾಗಿಲ್ಲ. 14 ದಿನಗಳ ನ್ಯಾಯಾಂಗ ಬಂಧನವನ್ನು ಮುಗಿಸಿ ಬಂದ ನಂತರ ಈ ಕುರಿತಂತೆ ವಕೀಲ ಜಗದೀಶ್ ರವರು ಏನೆಂದು ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Get real time updates directly on you device, subscribe now.