ಹರಾಜು ನಡೆದ ಬೆನ್ನಲ್ಲೇ ಆರ್ಸಿಬಿ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ ಕನ್ನಡಿಗರು, ಯಾಕೆ ಗೊತ್ತೇ?? ಖರೀದಿ ಮಾಡದಿದ್ದಕ್ಕೆ ಅಲ್ಲ, ಮತ್ಯಾಕೆ ಗೊತ್ತೇ??

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂದರೇ ಅದು ಕನ್ನಡಿಗರ, ಕರ್ನಾಟಕದ ತಂಡ ಎಂದೇ ಹೆಸರು ಮಾಡಿರುವುದು. ಆದರೇ ವಿಪರ್ಯಾಸವೆಂದರೇ , ತಂಡದಲ್ಲಿ ಕನ್ನಡಿಗ ಆಟಗಾರರು ಮಾತ್ರ ಇರುವುದಿಲ್ಲ. ಕಳೆದ ಭಾರಿ ದೇವದತ್ ಪಡಿಕ್ಕಲ್ ಮಾತ್ರ ತಂಡದಲ್ಲಿದ್ದರು. ಆದರೇ ಕರ್ನಾಟಕದಲ್ಲಿ ಹಲವಾರು ಜನ ಪ್ರತಿಭಾನ್ವಿತ ಆಟಗಾರರಿದ್ದು, ಅವರು ಬೇರೆ ಫ್ರಾಂಚೈಸಿಗಳಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಆದರೇ ಆರ್ಸಿಬಿ ಮಾತ್ರ ಅವರನ್ನು ಆಡಿಸುವುದಿಲ್ಲ.

ಈ ಭಾರಿಯ ಆಟಗಾರರ ಮೆಗಾ ಹರಾಜಿನಲ್ಲಿ, ಆರ್ಸಿಬಿ ಕನ್ನಡಿಗ ಆಟಗಾರರನ್ನ ಖರೀದಿಸುವು ನೀರಿಕ್ಷೆಯಿತ್ತು. ಆದರೇ ಕನ್ನಡಿಗ ಆಟಗಾರರು ಹರಾಜಿಗೆ ಬಂದಾಗ ಕನಿಷ್ಠ ಬಿಡ್ ಮಾಡುವ ಸೌಜನ್ಯವನ್ನು ತೋರಲಿಲ್ಲ. ಕೇವಲ ದೇವದತ್ ಪಡಿಕ್ಕಲ್ ಹರಾಜಿಗೆ ಬಂದಾಗ ಸ್ವಲ್ಪ ಹೊತ್ತು ಬಿಡ್ ನಡೆಸಿ , ದುಬಾರಿ ಎಂದು ಬೇರೆ ತಂಡಕ್ಕೆ ಬಿಟ್ಟುಕೊಟ್ಟಿತ್ತು.ಕೊನೆಗೆ ದೇವದತ್ 7 ಕೋಟಿಗೆ ಆರ್.ಆರ್ ತಂಡದ ಪಾಲಾದರು. ಆದರೇ ಆರ್ಸಿಬಿ ಮ್ಯಾನೆಜ್ ಮೆಂಟ್ ಶ್ರೀಲಂಕಾದ ಅನನುಭವಿ ಆಟಗಾರ ವನಿಂದು ಹಸರಂಗನಿಗೆ ಬರೋಬ್ಬರಿ 10.75 ಕೋಟಿ ನೀಡಿ ಖರೀದಿಸಿದೆ.

ಇದಲ್ಲದೇ ಕನ್ನಡಿಗ ಆಟಗಾರರಾದ ಮನೀಶ್ ಪಾಂಡೆ, ರಾಬಿನ್ ಉತ್ತಪ್ಪ, ಪ್ರಸಿದ್ಧ್ ಕೃಷ್ಣ, ಅಭಿನವ್ ಮನೋಹರ್ ಹರಾಜಿಗೆ ಬಂದಾಗ, ಆರ್ಸಿಬಿ ಮ್ಯಾನೇಜ್ ಮೆಂಟ್ ಅವರ ಪರ ಕನಿಷ್ಠ ಬಿಡ್ ಮಾಡುವ ಧೈರ್ಯವನ್ನು ಮಾಡಲಿಲ್ಲ. ಇದು ಆರ್ಸಿಬಿ ತಂಡದ ಮ್ಯಾನೇಜ್ ಮೆಂಟ್, ಕನ್ನಡಿಗ ಆಟಗಾರರಿಗೆ ತೋರಿಸುವ ಗೌರವ ಬಟಾಬಯಲಾಗಿದೆ. ಇನ್ನಾದರೂ ಆರ್ಸಿಬಿ ತಂಡದ ಮ್ಯಾನೇಜ್ ಮೆಂಟ್ ಕನ್ನಡಿಗ ಆಟಗಾರರನ್ನ ಐಪಿಎಲ್ ನಲ್ಲಿ ಆಡಿಸಲು ಮುಂದಾಗಬೇಕು. ಕನ್ನಡಿಗರು ಈ ಬಗ್ಗೆ ಆರ್ಸಿಬಿ ತಂಡದ ಮ್ಯಾನೇಜ್ ಮೆಂಟ್ ನ್ನು ಗಮನ ಸೆಳೆಯಬೇಕು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.