ರಾಜ್ಯ ಕಂದಾಯ ಇಲಾಖೆಯಲ್ಲಿದೆ ಹಲವು ಹುದ್ದೆಗಳು, ನೀವು ಪದವಿ ಮುಗಿಸಿದ್ರೆ ಇಂದೇ ಅಪ್ಲೈ ಮಾಡಿ
ನಮಸ್ಕಾರ ಸ್ನೇಹಿತರೇ, ಸರ್ಕಾರಿ ಕ್ಶೇತ್ರದಲ್ಲಿ ಕೆಲಸ ಗಿಟ್ಟಿಸಿಕೊಳಬೇಕು ಎಂಬುದು ನಿಮ್ಮ ಕನಸಾಗಿದ್ರೆ, ನೀವು ಈಗ ತಾನೆ ಡಿಗ್ರಿ ಮುಗಿಸಿದ್ದು ಕೆಲಸಕ್ಕಾಗಿ ಹುಡುಕಾಟ ನಡೆಸಿದ್ರೆ ನಿಮಗಿಲ್ಲಿ ಉತ್ತಮ ಉದ್ಯೋಗಾವಕಾಶವಿದೆ. ರಾಜ್ಯ ಕಂದಾಯ ಇಲಾಖೆಯಲ್ಲಿ ಗಳನ್ನು ಭರ್ತಿ ಮಾಡಲು ಇಲಾಖೆ ನಿರ್ಧರಿಸಿದೆ. ಹಾಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗುತ್ತಿದೆ.
ಹೌದು ಕರ್ನಾಟಕ ಕಂದಾಯ ಇಲಾಖೆಯಲ್ಲಿ 5 ಸಾಫ್ಟ್ವೇರ್ ಡೆವಲಪರ್ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ತಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 12. ಅಂದರೆ ಇಂದೇ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ಕರ್ನಾಟಕ ಕಂದಾಯ ಇಲಾಖೆಯ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಕಂಪ್ಯೂಟರ್ ಸೈನ್ಸ್/ಇಸಿಇ/ಐಟಿ/ಮಾಹಿತಿ ವಿಜ್ಞಾನದಲ್ಲಿ ಬಿ.ಇ ಅಥವಾ ಬಿ.ಟೆಕ್ & ಎಂಸಿಎ ಪೂರ್ಣಗೊಳಿಸಿರಬೇಕು. ಇನ್ನು ಉದ್ಯೋಗ ಸಿಕ್ಕರೆ ಬೆಂಗಳೂರಿನಲ್ಲಿಯೇ ಪೋಸ್ಟಿಂಗ್ ಕೊಡಲಾಗುವುದು.
ಸಾಫ್ಟವೇರ್ ಡೆವಲಪರ್ ಹುದ್ದೆಗಳಿಗೆ, ಅರ್ಜಿ ಸಲ್ಲಿಸಿ ಆಯ್ಕೆಯಾದ ಅರ್ಭರ್ಥಿಗಳಿಗೆ ತಿಂಗಳ ವೇತನವು 80,000 ರೂ. ಗಳಾಗಿರುತ್ತವೆ. ಇನ್ನು ಅರ್ಜಿಯನ್ನು ಆಫ್ಲೈನ್ ಮೂಲಕವೇ ಸಲ್ಲಿಸಬೇಕು. ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಡಲಾಗುವುದು. ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ಹಾಗೂ ಅಗತ್ಯ ದಾಖಲಾತಿಗಳನ್ನು ಈ ವಿಳಾಸಕ್ಕೆ ಕಳುಹಿಸಬೇಕು. ನಿರ್ದೇಶಕರು, ಅಟಲ್‌ಜಿ ಜನಸ್ನೇಹಿ ನಿರ್ದೇಶನಾಲಯ, ಎಸ್.ಎಸ್.ಎಲ್.ಆರ್ ಕಟ್ಟಡ, ಕೆ.ಆರ್ ವೃತ್ತ, ಬೆಂಗಳೂರು – 560001 ಅಥವಾ ajs.directorate1@gmail.com ಗೆ ಇಮೇಲ್ ಮಾಡಿ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ kandaya.karnataka.gov.in ಗೆ ಭೇಟಿ ನೀಡಿ.