ರತನ್ ಟಾಟಾರವರ ಜನುಮದಿನದ ವಿಡಿಯೋದಲ್ಲಿ ವೈರಲ್ ಆದ ಆ ಹುಡುಗ ಯಾರು ಗೊತ್ತೆ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್??

18

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇಂದು ನಾವು ಮಾತನಾಡಲು ಹೊರಟಿರುವುದು ದೇಶ ಕಂಡಂತಹ ಹಾಗೂ ಈಗಲೂ ಕೂಡ ಜೀವಂತ ದಂತಕಥೆಯಾಗಿರುವ ವ್ಯಕ್ತಿಯೊಬ್ಬರ ಕುರಿತಂತೆ. ಯಾವಾಗಲೆಲ್ಲಾ ದೇಶ ಕಷ್ಟಕ್ಕೆ ಈಡಾಗುತ್ತದೆಯೋ ಆವಾಗ ದೇಶದ ಜನರಿಗೆ ಸಹಾಯ ಮಾಡಲು ಸದಾಕಾಲ ಮುಂದೆ ಬಂದು ನಿಲ್ಲುವಂತಹ ವ್ಯಕ್ತಿತ್ವ ಇವರದ್ದು. ಈಗಾಗಲೇ ದೇಶದಲ್ಲಿ ಮಹಾಮಾರಿ ಬಂದ ಸಂದರ್ಭದಲ್ಲಿ ಸಾವಿರಾರು ಕೋಟಿ ರೂಪಾಯಿಯನ್ನು ಕಷ್ಟದಲ್ಲಿರುವ ಜನರ ಸಹಾಯಕ್ಕಾಗಿ ವಿನಿಯೋಗಿಸಿದ್ದಾರೆ. ದೇಶಕ್ಕೆ ಆಪತ್ತು ಬಂದಾಗಲೆಲ್ಲ ನನ್ನ ಇಡೀ ಆಸ್ತಿಯನ್ನು ನಾನು ನೀಡಲು ಸಿದ್ದನಿದ್ದೇನೆ ಎಂಬುದಾಗಿ ಹೇಳಿದವರು. ಹೌದು ನಾವು ಮಾತನಾಡಲು ಹೊರಟಿರುವುದು ದೇಶ ಕಂಡಂತಹ ಮೇರು ವ್ಯಕ್ತಿತ್ವವುಳ್ಳ ವ್ಯಕ್ತಿಯಾಗಿರುವ ರತನ್ ಟಾಟಾರವರ ಕುರಿತಂತೆ. ಕೇವಲ ರತನ್ ಟಾಟಾರವರ ಕುರಿತಂತೆ ಮಾತ್ರವಲ್ಲ ಇತ್ತೀಚಿಗಷ್ಟೇ ರತನ್ ಟಾಟಾರವರ ಜನ್ಮದಿನದ ವಿಶೇಷವಾಗಿ ಒಂದು ವಿಡಿಯೋ ವೈರಲ್ ಆಗಿತ್ತು.

ಆ ವಿಡಿಯೋದಲ್ಲಿರುವ ಹುಡುಗ ಯಾರು ಎನ್ನುವುದರ ಕುರಿತಂತೆ ನಿಮಗೆ ಇಲ್ಲಿನ ಲೇಖನಿಯಲ್ಲಿ ಹೇಳಲು ಹೊರಟಿದ್ದೇವೆ. ಈ ಹುಡುಗನ ಹೆಸರು ಶಾಂತ ಎಂದು. ಈಗ ಇಂಜಿನಿಯರಿಂಗ್ ಮುಗಿಸಿ ಟಾಟಾ ಗ್ರೂಪ್ ಕಂಪನಿ ಕೆಲಸಕ್ಕೆ ಸೇರುತ್ತಾನೆ. ಒಂದು ದಿನ ರಾತ್ರಿ ಕೆಲಸ ಮುಗಿಸಿಕೊಂಡು ಬರುವಾಗ ರಸ್ತೆಯ ಮೇಲೆ ನಾಯಿಯೊಂದು ಗಾಡಿಯ ಚಕ್ರಕ್ಕೆ ಸಿಲುಕಿ ಮರಣಹೊಂದಿದ್ದನ್ನು ನೋಡುತ್ತಾನೆ. ಅದನ್ನು ಪಕ್ಕಕ್ಕೆ ಇಡಬೇಕು ಎಂದು ಅಂದುಕೊಳ್ಳುವಷ್ಟರಲ್ಲಿ ಆತನ ಸಮೀಪದಲ್ಲೇ ಇನ್ನೊಂದು ಕಾರು ವೇಗವಾಗಿ ಹೋಗಿರುವುದು ನೋಡುತ್ತಾನೆ. ಆಗ ಆ ಹುಡುಗ ಹೀಗೆ ನಾಯಿಗಳು ವಾಹನಕ್ಕೆ ಸಿಲುಕಿ ಮರಣ ಹೊಂದಬಾರದು ಎಂಬುದಾಗಿ ಏನಾದರೂ ಮಾಡಬೇಕೆಂದು ನಿರ್ಧರಿಸುತ್ತಾನೆ. ಆಗ ಆತ ತನ್ನ ಸ್ನೇಹಿತರ ಜೊತೆಗೂಡಿ ರೆಫ್ಲೆಕ್ಟರ್ ಬೆಲ್ಟನ್ನು ತಯಾರಿಸುತ್ತಾನೆ.

ತಯಾರಿಸಿದ ನಂತರ ಸಿಕ್ಕಸಿಕ್ಕ ನಾಯಿಗಳಿಗೆ ರಿಫ್ಲೆಕ್ಟರ್ ಬೆಲ್ಟ್ ಗಳನ್ನು ಹಾಕುತ್ತಾನೆ. ಕತ್ತಲೆಯಲ್ಲಿ ವಾಹನಗಳು ಬರುವ ಹೊತ್ತಿಗೆ ಅವುಗಳ ಲೈಟ್ ಗಳು ಈ ರಿಫ್ಲೆಕ್ಟರ್ ಮೇಲೆ ತಾಗುವುದರಿಂದಾಗಿ ಅದು ಪ್ರಜ್ವಲಿಸುತ್ತದೆ. ಹೀಗಾಗಿ ಅವರ ಸ್ಲೋ ಆಗಿ ಬರುತ್ತಾರೆ ನಾಯಿಗಳ ಜೀವನ ಕೂಡ ಉಳಿಯುತ್ತದೆ ಎಂಬುದಾಗಿ ಯೋಚಿಸುತ್ತಾನೆ. ಇದರ ಜನಪ್ರಿಯತೆ ಸಾಕಷ್ಟು ಹೆಚ್ಚಾಗಿ ಹೊರಗಿನವರು ಕೂಡ ನಮಗೂ ಕೂಡ ಇದೆ ತರಹದಲ್ಲಿ ರೆಫ್ಲೆಕ್ಟರ್ ಬೆಲ್ಟ್ ಗಳು ಬೇಕು ಎಂಬುದಾಗಿ ಹೇಳುತ್ತಾರೆ. ಆದರೆ ಶಾಂತನ ಬಳಿ ಅಷ್ಟೊಂದು ಬೆಲ್ಟ್ ಗಳನ್ನು ತಯಾರಿಸಲು ಹಣವಿರಲಿಲ್ಲ ಹೀಗಾಗಿ ಆತನ ತಂದೆ ರತನ್ ಟಾಟಾ ರವರಿಗೆ ಪತ್ರವನ್ನು ಬರೆದು ಕಳುಹಿಸು ಅವರು ನಿನಗೆ ಸಹಾಯ ಮಾಡಬಹುದು ಎಂಬುದಾಗಿ ಹೇಳುತ್ತಾರೆ. ಆಗ ಶಾಂತ ನನ್ನ ಪತ್ರವನ್ನು ಯಾಕೆ ನೋಡುತ್ತಾರೆ ಅವರು ಎಂಬುದಾಗಿ ಹೇಳುತ್ತಾನೆ ಆದರೂ ಕೂಡ ಒಂದು ಟ್ರೈ ಮಾಡೋಣ ಎಂದು ಪತ್ರವನ್ನು ಬರೆದು ಕಳುಹಿಸುತ್ತಾನೆ.

ಹಲವಾರು ದಿನಗಳ ನಂತರ ರತನ್ ಟಾಟಾ ರವರು ಆ ಹುಡುಗನಿಗೆ ಪಾತ್ರದ ಮೂಲಕವೇ ನನ್ನನ್ನು ಭೇಟಿಯಾಗು ಎಂಬುದಾಗಿ ಉತ್ತರ ನೀಡುತ್ತಾರೆ. ಶಾಂತನು ರತನ್ ಟಾಟಾ ರವರನ್ನು ಮುಂಬೈ ಆಫೀಸ್ನಲ್ಲಿ ಹೋಗಿ ಬೇಟಿ ಮಾಡಿದ್ದಾನೆ. ಆ ಸಂದರ್ಭದಲ್ಲಿ ರತನ್ ಟಾಟಾರವರು ನೀನು ಮಾಡುವ ಕೆಲಸಕ್ಕೆ ನಾನು ಹಣ ನೀಡುತ್ತೇನೆ ಎಂಬುದಾಗಿ ಹೇಳುತ್ತಾರೆ. ಮೊದಲ ಭೇಟಿಯಲ್ಲೇ ರತನ್ ಟಾಟಾ ರವರಿಗೆ ಆ ಹುಡುಗ ಇಷ್ಟವಾಗುತ್ತಾನೆ ಹಾಗೂ ಸ್ನೇಹ ಬೆಳೆಯುತ್ತದೆ. ಶಾಂತ ಮುಂದಿನ ದಿನಗಳಲ್ಲಿ ಉನ್ನತ ಅಭ್ಯಾಸಕ್ಕಾಗಿ ರತನ್ ಟಾಟಾ ರವರಿಂದ ದೂರವಾಗಿ ಹೊರದೇಶದಲ್ಲಿ ವಿದ್ಯಾಭ್ಯಾಸ ಮಾಡಬೇಕಾದಂತಹ ಪರಿಸ್ಥಿತಿ ಒದಗಿ ಬರುತ್ತದೆ.

ಗ್ರಾಜುಯೇಷನ್ ದಿನವೂ ಕೂಡ ಶಾಂತ ನಿಗೆ ರತನ್ ಟಾಟಾರವರ ಸರ್ಪ್ರೈಸ್ ನೀಡುತ್ತಾರೆ. ಶಾಂತ ನಿಗೆ ಕರೆಮಾಡಿ ರತನ್ ಟಾಟಾರವರ ಒಮ್ಮೆಲೆ ಆಫೀಸ್ನಲ್ಲಿ ತುಂಬಾನೇ ಕೆಲಸ ಇದೆ ಇಂಡಿಯಾಗೆ ವಾಪಸಾದ ಮೇಲೆ ಬಂದು ನನ್ನ ಜೊತೆಗೆ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತೀಯಾ ಎಂಬುದಾಗಿ ಹೇಳುತ್ತಾರೆ. ಶಾಂತ ನಿಗೆ ಎಲ್ಲಿಲ್ಲದ ಸಂತೋಷ ಎನ್ನುವುದು ಒಮ್ಮೆಲೆ ಆತನಿಗೆ ಬಂದಂತಹ ಅನುಭವವಾಗುತ್ತದೆ.

ಶಾಂತ ನಿಗೆ ಆತನ ಜೀವನದಲ್ಲಿ ಇದಕ್ಕಿಂತ ದೊಡ್ಡ ಅವಕಾಶ ಸಿಗುವುದಕ್ಕೆ ಸಾಧ್ಯವೇ ಇರಲಿಲ್ಲ. ಈಗ ಶಾಂತ ರತನ್ ಟಾಟಾರವರ ಎಲ್ಲಾ ಕೆಲಸಗಳನ್ನು ಕೂಡ ನಿರ್ಧರಿಸುತ್ತಾನೆ ಕೆಲಸ ಆದ ನಂತರ ಅವರ ಜೊತೆಗೆ ಭುಜಕ್ಕೆ ಕಾಯಿ ಹಾಕಿ ಸ್ನೇಹಿತರಂತೆ ಮಾತನಾಡುತ್ತಾನೆ. ರತನ್ ಟಾಟಾರವರ ಬಹುತೇಕ ಎಲ್ಲಾ ನಿರ್ಧಾರಗಳನ್ನು ಆತನೇ ನಿರ್ಧರಿಸುತ್ತಾನೆ. ಒಟ್ಟಿಗೆ ಟಿವಿ ಶೋ ಗಳನ್ನು ಹಾಗೂ ಸಿನಿಮಾಗಳನ್ನು ಕೂಡ ನೋಡುತ್ತಾರೆ. ಕಂಪನಿಯಲ್ಲಿ ಕೆಲಸಗಾರನಾಗಿ ಇದ್ದ ಶಾಂತ ಎಂಬ ಹುಡುಗನನ್ನು ಆತನ ಜೀವನವೇ ಬದಲಾಗುವಂತೆ ಮಾಡಿದ ರತನ್ ಟಾಟಾರವರ ಒಳ್ಳೆಯ ಗುಣದ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂಬುದನ್ನು ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.