ಬಚ್ಚನ್ ಕುರಿತಂತೆ ಶಾಕಿಂಗ್ ಹೇಳಿಕೆ ನೀಡಿದ ರಶ್ಮಿಕಾ, ಮತ್ತೊಮ್ಮೆ ಟ್ರೊಲ್ ಆದ ರಶ್ಮಿಕಾ, ನೆಟ್ಟಿಗರು ಬಕೆಟ್ ರಶ್ಮಿಕಾ ಎಂದದ್ದು ಯಾಕೆ ಗೊತ್ತೇ??

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ಕನ್ನಡ ತಮಿಳು ತೆಲುಗು ಹಿಂದಿ ಯಾವುದೇ ಭಾಷೆಯ ಚಿತ್ರರಂಗವನ್ನು ತೆಗೆದುಕೊಂಡಿರುವುದು ಕೇಳಿಬರುತ್ತಿರುವ ಏಕೈಕ ಹೆಸರು ಎಂದರೆ ಅದು ನಮ್ಮ ಕನ್ನಡ ಮೂಲದ ಕೊಡಗಿನ ಕುವರಿ ಯಾಗಿರುವ ರಶ್ಮಿಕ ಮಂದಣ್ಣ ನವರ ಹೆಸರು. ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಮಂದಣ್ಣ ನವರ ಮಾರುಕಟ್ಟೆ ಎನ್ನುವುದು ನಿಜಕ್ಕೂ ಕೂಡ ಬೇರೆ ಎಲ್ಲಾ ಇತ್ತೀಚಿನ ದಿನಗಳಲ್ಲಿ ಬಂದಿರುವ ನಟಿಯರಿಗೆ ಹೋಲಿಸಿದರೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಅದರಲ್ಲೂ ಪುಷ್ಪ ಚಿತ್ರದ ಯಶಸ್ಸು ಎನ್ನುವುದು ಅವರ ಜನಪ್ರಿಯತೆಯನ್ನು ದ್ವಿಗುಣಗೊಳಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಕೋಟ್ಯಾಂತರ ಅಭಿಮಾನಿಗಳನ್ನು ರಶ್ಮಿಕ ಮಂದಣ್ಣ ನವರು ಹೊಂದಿದ್ದಾರೆ. ಇತ್ತೀಚಿನ ಕೆಲವು ವರ್ಷಗಳಿಂದ ಗಮನಿಸಿದರೆ ರಶ್ಮಿಕ ಮಂದಣ್ಣ ನವರಷ್ಟು ಜನಪ್ರಿಯತೆಯನ್ನೇ ಆಗಲಿ ಅಥವಾ ಸಂಭಾವನೆ ವಿಚಾರದಲ್ಲೇ ಆಗಲಿ ಬೇಡಿಕೆಯ ವಿಚಾರದಲ್ಲಿ ಆಗಲಿ ಯಾರು ಕೂಡ ಅವರಷ್ಟು ಯಶಸ್ಸನ್ನು ಹೊಂದಿಲ್ಲ. ಇತ್ತೀಚಿಗೆ ರಶ್ಮಿಕ ಮಂದಣ್ಣ ನವರು ಹಿಂದಿ ಚಿತ್ರರಂಗಕ್ಕೂ ಕೂಡ ಕಾಲಿಟ್ಟಿದ್ದಾರೆ. ಈಗಾಗಲೇ ಸಿದ್ಧಾರ್ಥ್ ಮಲ್ಹೋತ್ರ ನಟನೆಯ ಮಿಷನ್ ಮಜ್ನು ಹಾಗೂ ಅಮಿತಾಬ್ ಬಚ್ಚನ್ ನಟನೆಯ ಗುಡ್ ಬೈ ಚಿತ್ರದಲ್ಲಿ ಕೂಡ ನಟಿಸಿದ್ದಾರೆ.

ಇತ್ತೀಚಿಗಷ್ಟೇ ರಶ್ಮಿಕ ಮಂದಣ್ಣ ನವರು ಬಾಲಿವುಡ್ ಚಿತ್ರರಂಗದ ಅನಭಿಷಕ್ತ ದೊರೆ ಆಗಿರುವ ಅಮಿತಾ ಬಚ್ಚನ್ ರವರ ಕುರಿತಂತೆ ಆಶ್ಚರ್ಯಕರ ಹೇಳಿಕೆ ನೀಡಿದ್ದಾರೆ. ಹೌದು ಗೆಳೆಯರೇ ಇತ್ತೀಚಿಗಷ್ಟೇ ನ್ಯಾಷನಲ್ ಕೃಷ್ ಆಗಿರುವ ರಶ್ಮಿಕ ಮಂದಣ್ಣ ನವರು ಇತ್ತೀಚೆಗಷ್ಟೇ ಅಮಿತಾಬ್ ಬಚ್ಚನ್ ರವರ ಕೇಳಿದಾಗ ಅವರನ್ನು ಸುಂದರವಾದಂತಹ ಗೊಂಬೆಗೆ ಹೋಲಿಸಿ ಹೊಗಳಿದ್ದಾರೆ. ಅವರ ವ್ಯಕ್ತಿತ್ವ ಗೊಂಬೆಯ ರೀತಿ ಅದ್ಭುತವಾದದ್ದು. ಅವರು ಸೆಟ್ ನಲ್ಲಿ ಇದ್ದಷ್ಟು ಕಾಲ ಎಲ್ಲರೂ ಹಸನ್ಮುಖಿಯಾಗಿ ಇರುತ್ತಾರೆ ಎಂಬುದಾಗಿ ವಿವರಿಸಿದ್ದಾರೆ. ಅಮಿತಾ ಬಚ್ಚನ್ ರವರ ಕುರಿತಂತೆ ಎಷ್ಟು ಹೇಳಿದರೂ ಕೂಡ ಪದಗಳು ಕಡಿಮೆಯಾಗುತ್ತವೆ ಎಂಬುದಾಗಿ ವರ್ಣಿಸಿದ್ದಾರೆ. ಇದನ್ನು ಕಂಡ ನೆಟ್ಟಿಗರು ಎಂದಿನಂತೆ ಈ ಹೇಳಿಕೆಯನ್ನು ಟ್ರೊಲ್ ಮಾಡಿ ಬಕೆಟ್ ರಶ್ಮಿಕಾ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಪಾಪ ಅಲ್ಲವೇ ರಶ್ಮಿಕಾ ರವರು??

Get real time updates directly on you device, subscribe now.