ಕ್ರಿಪ್ಟೋಕರೆನ್ಸಿ ಮೇಲೆ ತೆರಿಗೆ; ಈ ವರ್ಷದ ಬಜೆಟ್ ನಲ್ಲಿ ಮಹತ್ವದ ನಿರ್ಣಯ. ಅಷ್ಟಕ್ಕೂ ಹೇಗೆ ತೆರಿಗೆ ಹಾಕಲಾಗುತ್ತದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ, ಕ್ರಿಪ್ಟೋ ಕರೆನ್ಸಿ ಬಗ್ಗೆ ನೀವು ಕೇಳಿರಬಹುದು. ಇದೊಂದು ಡಿಜಿಟಲ್ ಕರೆನ್ಸಿ. ಇದು ನೋಟಿನ ಮಾದರಿಯ ಹಣವಲ್ಲ. ಇಲ್ಲಿ ವ್ಯವಹಾರಗಳು ಡಿಜಿಟಲ್ ಮೂಲಕವೇ ನಡೆಯಲಿದ್ದು ಕ್ರಿಪ್ಟೋಕರೆನ್ಸಿಯನ್ನು ಉಳಿಸಲು ಬ್ಲಾಕ್ ಚೈನ್ ಮೂಲಕ ಬಂದೋಬಸ್ತ್ ಮಾಡಲಾಗುತ್ತದೆ. ಆದರೆ ಕ್ರಿಪ್ಟೋ ಕರೆನ್ಸಿಯಲ್ಲಿ ಒಂದಾದ ಬಿಟ್ ಕಾಯಿನ್ ಹಗರಣದ ನಂತರ ಕ್ರಿಪ್ಟೋಕರೆನ್ಸಿಯನ್ನು ಬ್ಯಾನ್ ಮಾಡಲಾಗುತ್ತದೆ ಎದು ಹೇಳಲಾಗುತ್ತಿತ್ತು. ಹೀಗಾದರೆ ಹೂಡಿಕೆದಾರರಿಗೆ ದೊಡ್ಡಮಟ್ಟದ ಹೊಡೆತ ಬೀಳುವುದಂತೂ ಸುಳ್ಳಲ್ಲ. ಆದರೆಈ ಸುದ್ದಿ ಸುಳ್ಳು ಎಂಬುದು ಇಂದಿನ ಬಜೆಟ್ ಮಂಡನೆಯಲ್ಲಿ ಖಚಿತವಾಗಿದೆ.
ಹೌದು, ಇನ್ನು ಮುಂದೆ ಯಾವುದೇ ವರ್ಚುವಲ್ ಅಥವಾ ಕ್ರಿಪ್ಟೋಕರೆನ್ಸಿಯ ವರ್ಗಾವಣೆಗೆ ಶೇ. 30ರಷ್ಟು ತೆರಿಗೆ ವಿಧಿಸಲಾಗುವುದು ಎಂಬುದು ಕೇಂದ್ರ ಬಜೆಟ್ 2022ನಲ್ಲಿ ಪ್ರಸ್ತಾಪಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತತಾರಾಮನ್, ಸ್ವಾಧೀನದ ವೆಚ್ಚವನ್ನು ಹೊರತುಪಡಿಸಿ ಯಾವುದೇ ಕಡಿತವನ್ನು ಅನುಮತಿಸಲಾಗುವುದಿಲ್ಲ ಮತ್ತು ಯಾವುದೇ ನಷ್ಟವಿಲ್ಲದೆ ವಹಿವಾಟನ್ನು ಮುಂದುವರಿಸಲು ಕೊಡಲಾಗುವುದು ಎಂದಿದ್ದಾರೆ.

ಇನ್ನು ಕೇಂದ್ರದ ಈ ನಿಯಮಾವಳಿಗಳನ್ನು ಒಪ್ಪಿಕೊಂಡ ವ್ಯವಹಾರಸ್ಥರು ಇದನ್ನು ಒಪ್ಪಿಕೊಂಡಿದಾರೆ. “ಕ್ರಿಪ್ಟೋ-ವರ್ಗಾವಣೆಗಳ ಮೇಲೆ TDS ನ ವಿಧಿಸಿದರೆ ಕ್ರಿಪ್ಟೋ ವಹಿವಾಟುಗಳನ್ನು ಉತ್ತಮವಾಗಿ ಮೇಲ್ವಿಚಾರಣೆ ಮಾಡಲು ಸರ್ಕಾರವನ್ನು ಸಕ್ರಿಯಗೊಳಿಸಬಹುದು” ಎಂದು ಅಮರಚಂದ್ ಮಂಗಲದಾಸ್ & ಕಂ ಪಾಲುದಾರ ಅಮಿತ್ ಸಿಂಘಾನಿಯಾ ವಿವರಿಸಿದರು. ಕಾರಣ ಈ ವಹಿವಾಟಿನಲ್ಲಿ ಖಾಸಗೀ ಮಾಲಿಕತ್ವವೇ ಹೆಚ್ಚಾಗಿತ್ತು. ಸರ್ಕಾರ ಅಷ್ಟಾಗಿ ಇದರಲ್ಲಿ ತೊಡಗಿಕೊಂಡಿರಲಿಲ್ಲ. ಕ್ರಿಪ್ಟೋ ತೆರಿಗೆ ಬಗ್ಗೆ ಸ್ಪಷ್ಟನೆ ನೀಡಿದ್ದಕ್ಕೆ ಈ ವ್ಯವಹಾರದಲ್ಲಿರುವವರು ಎಲ್ಲರೂ ಸಂತೋಷ ವ್ಯಕ್ತಪಡಿಸಿದ್ದಾರೆ. ಜಿತೆಗೆ ಕೇಂದ್ರದ ಮುಂದುವರಿದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.